ವಿಚ್ಛೇದನದ ಸುದ್ದಿಯ ನಡುವೆ ಸಖತ್ ಸುಂದರಿ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
TV9 Web | Updated By: ಝಾಹಿರ್ ಯೂಸುಫ್
Updated on:
Jul 11, 2024 | 9:54 AM
Hardik Pandya: ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಪ್ರತಿ ಸೀಸನ್ ಐಪಿಎಲ್ನಲ್ಲೂ ನತಾಶಾ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ, ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ.
1 / 5
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಅಲ್ಲದೆ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಇದರ ನಡುವೆಯೇ ಹಾರ್ದಿಕ್ ಪಾಂಡ್ಯ ಸಖತ್ ಸುಂದರಿಯೊಬ್ಬಳ ಜೊತೆ ಕಾಣಿಸಿಕೊಂಡು ಹಲ್ಚಲ್ ಎಬ್ಬಿಸಿದ್ದಾರೆ.
2 / 5
ಹಾರ್ದಿಕ್ ಪಾಂಡ್ಯ ಯುವತಿಯೊಬ್ಬಳ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಯಾರೀಕೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಪ್ರಾಚಿ ಸೋಲಂಕಿ.
3 / 5
ಪ್ರಾಚಿ ಸೋಲಂಕಿ ಪ್ರಸಿದ್ಧ ಮೇಕಪ್ ಆರ್ಟಿಸ್ಟ್, ಹಾಗೆಯೇ ಸೋಷಿಯಲ್ ಮೀಡಿಯಾ ಇನ್ಫುಲೆನ್ಸರ್. ಇತ್ತೀಚೆಗೆ ಅವರು ಹಾರ್ದಿಕ್ ಪಾಂಡ್ಯ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಪಾಂಡ್ಯ ಫ್ಯಾಮಿಲಿ ಜೊತೆ ಕೂಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
4 / 5
ಈ ವೈರಲ್ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹಾಗೂ ಪ್ರಾಚಿ ಸೋಲಂಕಿ ಜೋಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಾಗ್ಯೂ ಇಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಇಲ್ಲಿ ಪಾಂಡ್ಯ ಕುಟುಂಬದೊಂದಿಗೆ ಪ್ರಾಚಿ ಸೋಲಂಕಿ ತುಂಬಾ ಆಪ್ತರಾಗಿ ಕಾಣಿಸಿಕೊಂಡಿರುವುದರಿಂದ ಇದೀಗ ಅಂತೆ ಕಂತೆಗಳು ಶುರುವಾಗಿದೆ.
5 / 5
ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಕಥೆಯೇನು?: ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಗೆದ್ದರೂ ಪತ್ನಿ ನತಾಶಾ ಸೋಷಿಯಲ್ ಮೀಡಿಯಾದಲ್ಲಿ ಒಂದೇ ಒಂದು ಅಭಿನಂದನೆಯ ಪೋಸ್ಟ್ ಹಾಕಿರಲಿಲ್ಲ. ಇದರೊಂದಿಗೆ ಪಾಂಡ್ಯ ದಂಪತಿಗಳ ನಡುವೆ ಬಿರುಕು ಮೂಡಿರುವುದು ಬಹಿರಂಗವಾಗಿತ್ತು. ಅಲ್ಲದೆ ಇಬ್ಬರು ಶೀಘ್ರದಲ್ಲೇ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಪಾಂಡ್ಯ ವಿಚ್ಛೇದನ ಪಡೆದರೂ ಅಚ್ಚರಿಪಡಬೇಕಿಲ್ಲ.