ಹಳದಿ ಬಣ್ಣದ ಅನಾರ್ಕಲಿಯಲ್ಲಿ ಹರ್ಲೀನ್; ಚೆಂದುಳ್ಳಿ ಚೆಲುವೆಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ; ಫೋಟೋ
TV9 Web | Updated By: ಪೃಥ್ವಿಶಂಕರ
Updated on:
Oct 15, 2022 | 4:38 PM
Harleen Deol: ಟೀಂ ಇಂಡಿಯಾ ಪರ ಹರ್ಲೀನ್ ಇದುವರೆಗೆ 7 ಏಕದಿನ ಮತ್ತು 14 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 104 ರನ್ ಮತ್ತು 142 ರನ್ ಗಳಿಸಿದ್ದಾರೆ.
1 / 5
ಭಾರತದ ಮಹಿಳಾ ಆಟಗಾರ್ತಿಯರು ಸೌಂದರ್ಯದ ವಿಚಾರದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುತ್ತಾರೆ. ಅವರುಗಳಲ್ಲಿ ಮಿಥಾಲಿ ರಾಜ್, ಸ್ಮೃತಿ ಮಂದಾನ ಈಗ 24 ವರ್ಷ ವಯಸ್ಸಿನ ಹರ್ಲೀನ್ ಡಿಯೋಲ್ ಕೂಡ ಈ ಪಟ್ಟಿಗೆ ಸೇರ್ಪಡೆಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹವಾ ಸೃಷ್ಟಿಸಿರುವ ಹರ್ಲೀನ್ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಹರ್ಲೀನ್, ಇತ್ತೀಚಿಗೆ ಪೋಸ್ಟ್ ಮಾಡಿರುವ ಫೋಟೋಗಳು ನೆಟ್ಟಿಗರ ಕಣ್ಣು ಕುಕ್ಕುತ್ತಿವೆ.
2 / 5
ಹರ್ಲೀನ್ ಕೌರ್ ಡಿಯೋಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೊಗಳಲ್ಲಿ ಹಳದಿ ಬಣ್ಣದ ಅನಾರ್ಕಲಿ ಧರಿಸಿ ಮಿರಮಿರ ಮಿಂಚಿದ್ದಾರೆ.
3 / 5
ಬಿಡುವಿನ ಸಮಯದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹರ್ಲೀನ್, ಈ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಈಗ ಈ ಫೋಟೋಗಳನ್ನು ಕಣ್ತುಂಬಿಕೊಳ್ಳುತ್ತಿರುವ ನೆಟ್ಟಿಗರು ತರಹೆವಾರಿ ಕಾಮೆಂಟ್ ಮಾಡುತ್ತಿದ್ದಾರೆ.
4 / 5
ಸದ್ಯ ಟೀಂ ಇಂಡಿಯಾದ 'ಬ್ಯೂಟಿ ಕ್ವೀನ್' ಆಗಿರುವ ಹರ್ಲೀನ್, ಜುಲೈ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಿಡಿದ ಅದೊಂದು ಅದ್ಭುತ ಕ್ಯಾಚ್ನಿಂದ ರಾತ್ರೋರಾತ್ರಿ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದರು. ಅವರ ಆ ಅದ್ಭುತ ಕ್ಯಾಚ್ ಅನ್ನು ನೋಡಿದ ಸಚಿನ್ ಹಾಗೂ ಲಕ್ಷ್ಮಣ್ ಮನಸಾರೆ ಹೊಗಳಿದ್ದರು.
5 / 5
ಟೀಂ ಇಂಡಿಯಾ ಪರ ಹರ್ಲೀನ್ ಇದುವರೆಗೆ 7 ಏಕದಿನ ಮತ್ತು 14 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 104 ರನ್ ಮತ್ತು 142 ರನ್ ಗಳಿಸಿದ್ದಾರೆ. ಜೊತೆಗೆ ಏಕದಿನದಲ್ಲಿ 2 ಮತ್ತು ಟಿ20 ಕ್ರಿಕೆಟ್‌ನಲ್ಲಿ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Published On - 4:38 pm, Sat, 15 October 22