Team India: ಪ್ಲೇಯಿಂಗ್ 11 ಫೈಟ್: 2 ಸ್ಥಾನಕ್ಕೆ 4 ಆಟಗಾರರನ ನಡುವೆ ಪೈಪೋಟಿ

T20 World Cup 2022: ಪಾಕ್ ವಿರುದ್ಧದದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಈ ವೇಳೆ ಕಣಕ್ಕಿಳಿದು ಯಾರು ಮಿಂಚುತ್ತಾರೋ ಅವರಿಗೆ ಪಾಕಿಸ್ತಾನ್ ವಿರುದ್ಧದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಚಾನ್ಸ್​ ಸಿಗುವುದು ಖಚಿತ ಎಂದೇ ಹೇಳಬಹುದು.

TV9 Web
| Updated By: ಝಾಹಿರ್ ಯೂಸುಫ್

Updated on: Oct 15, 2022 | 6:09 PM

ಈ 5 ತಂಡಗಳಲ್ಲಿ ಟೀಂ ಇಂಡಿಯಾದಿಂದ 3 ಆಟಗಾರರು ಹೊರಬಿದ್ದಿದ್ದುಮ ಅವರ ಸ್ಥಾನಕ್ಕೆ ಮತ್ತೆ ಮೂವರು ಎಂಟ್ರಿಕೊಟ್ಟಿದ್ದಾರೆ. ಹೊರಹೋದ ಮೂವರಲ್ಲಿ ರವೀಂದ್ರ ಜಡೇಜಾ, ಬುಮ್ರಾ ಮತ್ತು ದೀಪಕ್ ಚಹಾರ್ ಇದ್ದು, ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್, ಶಮಿ ಮತ್ತು ಶಾರ್ದೂಲ್ ಠಾಕೂರ್ ಬಂದಿದ್ದಾರೆ.

1 / 8
ಇಲ್ಲಿ ಆರಂಭಿಕನಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆಡುವುದು ಖಚಿತ ಎಂದೇ ಹೇಳಬಹುದು. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ಸೂರ್ಯಕುಮಾರ್ ಯಾದವ್​ಗೆ 4ನೇ ಕ್ರಮಾಂಕ ಫಿಕ್ಸ್​ ಎನ್ನಬಹುದು.

2 / 8
5ನೇ ಕ್ರಮಾಂಕದಲ್ಲಿ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಆಡಿದ್ರೆ,  6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್​ಗೆ ಅವಕಾಶ ಸಿಗಲಿದೆ. ಇನ್ನು 7ನೇ ಕ್ರಮಾಂಕದಲ್ಲಿ ಸ್ಪಿನ್ ಆಲ್​ರೌಂಡರ್​ಗೆ ಅವಕಾಶ ಸಿಗಲಿದೆ.

3 / 8
ಇಲ್ಲಿ ಸ್ಪಿನ್ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಹಾಗೂ ದೀಪಕ್ ಹೂಡಾ ತಂಡದಲ್ಲಿದ್ದಾರೆ. ಹೀಗಾಗಿ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ.

4 / 8
ಮತ್ತೊಂದೆಡೆ ಪರಿಪೂರ್ಣ ಸ್ಪಿನ್ನರ್​ಗಳಾಗಿ ಯಜ್ವೇಂದ್ರ ಚಹಾಲ್ ತಂಡದಲ್ಲಿದ್ದಾರೆ. ಹೀಗಾಗಿ ಸ್ಪಿನ್ ಆಲ್​ರೌಂಡರ್​ಗಳ ಜೊತೆ ಚಹಾಲ್​ಗೂ ಮಣೆಹಾಕಬೇಕಾಗುತ್ತದೆ. ಇಲ್ಲಿ ಅಕ್ಷರ್ ಪಟೇಲ್ ಎಡಗೈ ಸ್ಪಿನ್ನರ್ ಆಗಿರುವ ಕಾರಣ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಉಳಿದ ಒಂದು ಸ್ಥಾನಕ್ಕಾಗಿ ಚಹಾಲ್, ಅಶ್ವಿನ್ ಹಾಗೂ ದೀಪಕ್ ಹೂಡಾ ನಡುವೆ ಪೈಪೋಟಿ ಕಂಡು ಬರಬಹುದು.

5 / 8
ಅದರಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನುಭವಕ್ಕೆ ಮಣೆಹಾಕಿದರೆ ಅಶ್ವಿನ್​ಗೆ ಚಾನ್ಸ್​ ಸಿಗಬಹುದು. ಆದರೆ ವಿಕೆಟ್ ಟೇಕರ್ ಎನಿಸಿಕೊಂಡಿರುವ ಚಹಾಲ್ ಅವರನ್ನು ಹೊರಗಿಡುವುದು ಕೂಡ ದೊಡ್ಡ ಸವಾಲಾಗಿರಲಿದೆ. ಹೀಗಾಗಿ ಟೀಮ್ ಇಂಡಿಯಾಗೆ ಪ್ಲೇಯಿಂಗ್ ಇಲೆವೆನ್ ರೂಪಿಸುವುದು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

6 / 8
ಪಾಕ್ ವಿರುದ್ಧದದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಈ ವೇಳೆ ಕಣಕ್ಕಿಳಿದು ಯಾರು ಮಿಂಚುತ್ತಾರೋ ಅವರಿಗೆ ಪಾಕಿಸ್ತಾನ್ ವಿರುದ್ಧದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಚಾನ್ಸ್​ ಸಿಗುವುದು ಖಚಿತ ಎಂದೇ ಹೇಳಬಹುದು.

7 / 8
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

8 / 8
Follow us