Updated on: Oct 15, 2022 | 8:59 PM
ಚಿತ್ರರಂಗಕ್ಕೂ ಕ್ರಿಕೆಟಿಗೂ ಅವಿನಾಭಾವ ಸಂಬಂಧ ಇರುವುದು ಗೊತ್ತೇ ಇದೆ. ಈಗಾಗಲೇ ಹಲವು ಕ್ರಿಕೆಟಿಗರ ಹೆಸರು ಬಾಲಿವುಡ್ ನಟಿಯರೊಂದಿಗೆ ಥಳುಕು ಹಾಕಿಕೊಂಡಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಟೀಮ್ ಇಂಡಿಯಾ ಯುವ ಆಟಗಾರ ಶುಭ್ಮನ್ ಗಿಲ್.
ಶುಭ್ಮನ್ ಗಿಲ್ ಹೆಸರು ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಕೇಳಿ ಬಂದಿತ್ತು. ಆದರೆ ಇಬ್ಬರು ಎಲ್ಲೂ ಕೂಡ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರಿಬ್ಬರ ನಡುವಿನ ಲವ್ ಗಾಸಿಪ್ಗಳು ಅಲ್ಲಿಗೆ ಅಂತ್ಯವಾಗಿತ್ತು.
ಆದರೀಗ ಶುಭ್ಮನ್ ಹೆಸರು ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ಜೊತೆ ಥಳುಕು ಹಾಕಿಕೊಂಡಿತ್ತು. ಇದನ್ನು ಪುಷ್ಠೀಕರಿಸುವಂತೆ ಇಬ್ಬರೂ ಲಂಡನ್ನ ರೆಸ್ಟೋರೆಂಟ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇದೀಗ ಮತ್ತೊಮ್ಮೆ ಗಿಲ್ ಹಾಗೂ ಸಾರಾ ಒಂದೇ ಹೊಟೇಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಂದೇ ಹೊಟೇಲ್ನಿಂದ ಹೊರಹೋಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿರುವ ವಿಚಾರ ಮುನ್ನಲೆಗೆ ಬಂದಿದೆ. ಇದಾಗ್ಯೂ ಈ ಇಬ್ಬರು ಸೆಲೆಬ್ರಿಟಿಗಳು ತಮ್ಮ ಲವ್ ವಿಚಾರವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ.
ಆದರೆ ಆಗಾಗ್ಗೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಈ ತಾರಾ ಜೋಡಿ ಸುದ್ದಿಯಾಗುತ್ತಿರುವುದು ವಿಶೇಷ.
ಅಂದಹಾಗೆ ಶುಭ್ಮನ್ ಗಿಲ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ಏಕದಿನ ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯುವ ಆಟಗಾರ ಮುಂದಿನ ದಿನಗಳಲ್ಲಿ ಟಿ20 ತಂಡದಲ್ಲಿ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ.
ನಟಿ ಸಾರಾ ಅಲಿ ಖಾನ್