ಪಾಕ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಹರ್ಮನ್​ಪ್ರೀತ್ ಕೌರ್

Updated on: Sep 05, 2026 | 8:09 PM

ಮಹಿಳಾ ಏಷ್ಯಾಕಪ್ 2026 ರಲ್ಲಿ ಭಾರತ-ಪಾಕ್ ಪಂದ್ಯ ಹರ್ಮನ್‌ಪ್ರೀತ್ ಕೌರ್‌ಗೆ ಐತಿಹಾಸಿಕವಾಗಿದೆ. 150 T20I ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷ ಅಥವಾ ಮಹಿಳಾ ಕ್ರಿಕೆಟ್‌ನಲ್ಲಿ ಇಂತಹ ದಾಖಲೆ ಬೇರೆ ಯಾರ ಹೆಸರಿನಲ್ಲೂ ಇಲ್ಲ. ಪಾಕ್ ವಿರುದ್ಧ ಕೌರ್ ನಾಯಕತ್ವದಡಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದು, ಒಟ್ಟಾರೆ 86 T20I ವಿಜಯಗಳನ್ನು ಸಾಧಿಸಿದ್ದಾರೆ.

1 / 5
2026 ರ ಮಹಿಳಾ ಏಷ್ಯಾಕಪ್​ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಈ ಪಂದ್ಯ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವ ಪಂದ್ಯವಾಗಿದೆ(PC-PTI).

2026 ರ ಮಹಿಳಾ ಏಷ್ಯಾಕಪ್​ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಈ ಪಂದ್ಯ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವ ಪಂದ್ಯವಾಗಿದೆ(PC-PTI).

2 / 5

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟಾಸ್​ಗಾಗಿ ಮೈದಾನಕ್ಕಿಳಿದ ಕೂಡಲೇ ಹರ್ಮನ್​ಪ್ರೀತ್ ಕೌರ್ ಖಾತೆಗೆ ವಿಶ್ವದಾಖಲೆಯೊಂದು ಸೇರ್ಪಡೆಗೊಂಡಿದೆ. ವಾಸ್ತವವಾಗಿ ಹರ್ಮನ್​ಪ್ರೀತ್​ ಕೌರ್​ಗೆ ಈ ಪಂದ್ಯ ನಾಯಕಿಯಾಗಿ 150ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿದೆ(PC-PTI).

3 / 5

ಈ ಮೂಲಕ ಹರ್ಮನ್​ಪ್ರೀತ್ ಕೌರ್ 150 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಕ್ರಿಕೆಟ್ ಆಗಿರಲಿ ಅಥವಾ ಮಹಿಳಾ ಕ್ರಿಕೆಟ್ ಆಗಿರಲಿ ಇಷ್ಟು ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆ ಬೇರೆ ಯಾವ ನಾಯಕನ ಹೆಸರಲ್ಲೂ ಇಲ್ಲ(PC-PTI).

4 / 5

ಇದೀಗ ಹರ್ಮನ್​ಪ್ರೀತ್ ಕೌರ್ ಪಾಕ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇನ್ನು ಹರ್ಮನ್​ ನಾಯಕತ್ವದಲ್ಲಿ ಇದುವರೆಗೆ ಆಡಿರುವ 149 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ 86 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 57 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದ್ದು, ಐದು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ(PC-PTI).

5 / 5

ಇನ್ನು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಲ್ಲಿ ಹರ್ಮನ್ಪ್ರೀತ್ ನಾಯಕತ್ವದ ದಾಖಲೆ ಹೇಗಿದೆ ಎಂಬುದನ್ನು ನೋಡುವುದಾದರೆ.. ಹರ್ಮನ್‌ಪ್ರೀತ್ ಕೌರ್ ಪಾಕ್ ವಿರುದ್ಧದ 11 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ 10 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರೆ, 1 ಪಂದ್ಯದಲ್ಲಿ ಸೋತಿದ್ದಾರೆ. ಈ 11 ಪಂದ್ಯಗಳಲ್ಲಿ, ಹರ್ಮನ್ 197 ರನ್ ಗಳಿಸಿ 2 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ(PC-PTI).

Loading...
Unable to load recommendations.
Follow Us