
2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಮೂರನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ ವನಿತಾ ಪಡೆ ಗೆದ್ದರೆ ಸೆಮಿಫೈನಲ್ನಲ್ಲಿ ಅದರ ಸ್ಥಾನ ಖಚಿತವಾಗಲಿದೆ. ಇತ್ತ ಈ ಪಂದ್ಯ ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಅವಿಸ್ಮರಣೀಯ ಪಂದ್ಯವೂ ಅಗಿದ್ದು, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯಾರಿಗೂ ಸಾಧ್ಯವಾಗದ ದಾಖಲೆಯೊಂದು ಇದೀಗ ಹರ್ಮನ್ ಖಾತೆ ಸೇರಿದೆ (PC-PTI).

ಹರ್ಮನ್‌ಪ್ರೀತ್ ಕೌರ್ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಅದು ಇದುವರೆಗೆ ಯಾವುದೇ ಪುರುಷ ಅಥವಾ ಮಹಿಳಾ ಆಟಗಾರ್ತಿ ಸಾಧಿಸದ ದಾಖಲೆಯಾಗಿದೆ. 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ, ಹರ್ಮನ್‌ಪ್ರೀತ್ 200 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PC-PTI).

ಮ್ಯಾಂಚೆಸ್ಟರ್‌ನ ಐತಿಹಾಸಿಕ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯವು ಟೀಮ್ ಇಂಡಿಯಾಕ್ಕೆ ಮಾತ್ರವಲ್ಲದೆ ಹರ್ಮನ್‌ಪ್ರೀತ್ ಅವರ ವೃತ್ತಿಜೀವನದಲ್ಲಿಯೂ ಸ್ಮರಣೀಯವಾಗಿದೆ. ಸುಮಾರು 17 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ಸಾಟಿಯಿಲ್ಲದ ಫಿಟ್‌ನೆಸ್ ಮೂಲಕ, ಅವರು ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿದೆ (PC-PTI).

ಹರ್ಮನ್‌ಪ್ರೀತ್ ಕೌರ್ 2009 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಉದ್ಘಾಟನಾ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತಮ್ಮ ಅಂತರರಾಷ್ಟ್ರೀಯ ಟಿ20 ಪ್ರಯಾಣವನ್ನು ಪ್ರಾರಂಭಿಸಿದರು. ಈಗ ಅಂದರೆ 2026 ರಲ್ಲಿ, ಅದೇ ಪಂದ್ಯಾವಳಿಯ 10 ನೇ ಆವೃತ್ತಿಯಲ್ಲಿ ಇಂಗ್ಲಿಷ್ ನೆಲದಲ್ಲಿ ತಮ್ಮ 200 ನೇ ಪಂದ್ಯವನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ (PC-PTI).

ಹರ್ಮನ್‌ಪ್ರೀತ್ ನಾಯಕತ್ವದಡಿಯಲ್ಲಿ ಭಾರತೀಯ ಮಹಿಳಾ ತಂಡವು ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಕೇವಲ ಎಂಟು ತಿಂಗಳ ಹಿಂದೆ ಹರ್ಮನ್, ತಂಡವನ್ನು ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಮಾಡಿದ್ದರು. ಆ ಐತಿಹಾಸಿಕ ಪ್ರಶಸ್ತಿ ಗೆಲುವಿನ ನಂತರ, ಹರ್ಮನ್‌ಪ್ರೀತ್ ಅವರ ಗಮನ ಈಗ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವತ್ತ ಇದೆ (PC-PTI).