147 ಪಂದ್ಯಗಳಿಂದ 533 ವಿಕೆಟ್: ‘ಮೈಸೂರ್ ಎಕ್ಸ್​ಪ್ರೆಸ್’ ಶ್ರೀನಾಥ್ ಹೆಸರಿನಲ್ಲಿರುವ ಈ ದಾಖಲೆಗಳ ಬಗ್ಗೆ ನಿಮಗೆ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Aug 31, 2021 | 6:19 PM

HBD Javagal Srinath: ಆಗಸ್ಟ್ 31, 1969 ರಂದು ಕರ್ನಾಟಕದ ಮೈಸೂರು ಜಿಲ್ಲೆಯ ಜಾವಗಲ್​ನಲ್ಲಿ ಜನಿಸಿದ ಜಾವಗಲ್ ಶ್ರೀನಾಥ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

1 / 7
ಕ್ರೀಡೆ ಮತ್ತು ವಿದ್ಯಾಭ್ಯಾಸದ ಸಂಗಮ ಅತೀ ವಿರಳ. ಸಾಮಾನ್ಯವಾಗಿ ಉತ್ತಮ ವಿದ್ಯಾಭ್ಯಾಸ ಪಡೆದವರು ಕ್ರೀಡೆಯಿಂದ ದೂರವಾಗಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ ಕೆಲವೇ ಕೆಲವು ಅತ್ಯುತ್ತಮ ವಿದ್ಯಾರ್ಹತೆ ಹೊಂದಿದ್ದರೂ ಕ್ರೀಡೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅಂತಹ ಆಟಗಾರರಲ್ಲಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕೂಡ ಒಬ್ಬರು. ಕ್ರಿಕೆಟ್ ಅಂಗಳದಲ್ಲಿ ಮೈಸೂರ್ ಎಕ್ಸ್​ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಶ್ರೀನಾಥ್ ಅವರು ಎಂಜಿನಿಯರಿಂಗ್ ಪದವಿ ಮಾಡಿದ್ದರು. ಉತ್ತಮ ಅಂಕದೊಂದಿಗೆ ಪಾಸಾಗಿದ್ದ ಶ್ರೀನಾಥ್ ಅವರು ಕ್ರಿಕೆಟ್​ಗೆ ಆದ್ಯತೆ ನೀಡಿದ್ದರು. ಇದೇ ಕಾರಣದಿಂದ ಭಾರತ ತಂಡಕ್ಕೆ ಅತ್ಯುತ್ತಮ ಬೌಲರ್​ರೊಬ್ಬರು ಲಭಿಸಿದಂತಾಯಿತು.

2 / 7
ಟೀಮ್ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಶ್ರೀನಾಥ್ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ಮೈಸೂರ್ ಎಕ್ಸ್​ಪ್ರೆಸ್ ಹೆಸರಿನಲ್ಲಿ ವಿಶೇಷ ದಾಖಲೆಯೊಂದಿದೆ. ಅದೇನೆಂದರೆ ಟೀಮ್ ಇಂಡಿಯಾ ಪರ ಅತೀ ಹೆಚ್ಚು ವಿಶ್ವಕಪ್ ಆಡಿದ ಬೌಲರ್ ಎಂಬ ದಾಖಲೆ.

3 / 7
ಹೌದು, ಜಾವಗಲ್ ಶ್ರೀನಾಥ್ ಅವರು  1992, 1996, 1999 ಮತ್ತು 2003 ರಲ್ಲಿ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. ಈ ಮೂಲಕ ಅತೀ ಹೆಚ್ಚು ವಿಶ್ವಕಪ್ ಆಡಿದ ಟೀಮ್ ಇಂಡಿಯಾ ಬೌಲರ್ ಎಂಬ ದಾಖಲೆಯನ್ನು ಶ್ರೀನಾಥ್ ಬರೆದಿದ್ದಾರೆ. ಈ ವೇಳೆ ಶ್ರೀನಾಥ್ ಒಟ್ಟು 34 ಪಂದ್ಯಗಳನ್ನು ಆಡಿದ್ದರು. ಇದು ಕೂಡ ದಾಖಲೆಯಾಗಿದೆ.

4 / 7
ವಿಶ್ವಕಪ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಬೌಲರ್ ಎಂಬ ದಾಖಲೆ ಕೂಡ ಶ್ರೀನಾಥ್ ಹೆಸರಿನಲ್ಲಿದೆ. ಇನ್ನು ಅತೀ ಹೆಚ್ಚು ವಿಶ್ವಕಪ್ ಪಂದ್ಯವಾಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೈಸೂರ್ ಎಕ್ಸ್​ಪ್ರೆಸ್ 2ನೇ ಸ್ಥಾನದಲ್ಲಿದ್ದಾರೆ. ಶ್ರೀನಾಥ್ 34 ವಿಶ್ವಕಪ್​ ಪಂದ್ಯಗಳನ್ನಾಡಿದ್ದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 45 ವಿಶ್ವಕಪ್ ಪಂದ್ಯಗಳನ್ನಾಡಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

5 / 7
ಇನ್ನು ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಕೂಡ ಮೈಸೂರ್ ಎಕ್ಸ್​ಪ್ರೆಸ್ ಹೆಸರಿನಲ್ಲಿದೆ. ಶ್ರೀನಾಥ್ ಅವರು 34 ಪಂದ್ಯಗಳಿಂದ 44 ವಿಕೆಟ್ ಉರುಳಿಸಿ ಈ ಸಾಧನೆ ಮಾಡಿದ್ದಾರೆ. 2002 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಲು ಮನಸ್ಸು ಮಾಡಿದ್ದ ಶ್ರೀನಾಥ್ ಬಳಿಕ ಸೌರವ್ ಗಂಗೂಲಿಯವರ ಮನವಿ ಮೇರೆಗೆ 2003 ರ ವಿಶ್ವಕಪ್‌ನಲ್ಲಿ ಆಡಿದ್ದರು. ಅಲ್ಲದೆ ಆ ವಿಶ್ವಕಪ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದರು.

6 / 7
ಜಾವಗಲ್ ಶ್ರೀನಾಥ್ ತಮ್ಮ ವೃತ್ತಿಜೀವನದಲ್ಲಿ 67 ಟೆಸ್ಟ್ ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 236 ವಿಕೆಟ್ ಮತ್ತು ಏಕದಿನದಲ್ಲಿ 315 ವಿಕೆಟ್ ಪಡೆದಿದ್ದಾರೆ. ಇದಲ್ಲದೇ, ಅವರು 147 ಪ್ರಥಮ ದರ್ಜೆ ಪಂದ್ಯಗಳಲ್ಲಿ 533 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

7 / 7
ಆಗಸ್ಟ್ 31, 1969 ರಂದು ಕರ್ನಾಟಕದ ಜಾವಗಲ್​ನಲ್ಲಿ ಜನಿಸಿದ ಶ್ರೀನಾಥ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಎನಿವೇ ಕರ್ನಾಟಕದ ಲೆಜೆಂಡ್ ವೇಗಿಗೆ ಹುಟ್ಟುಹಬ್ಬದ ಶುಭಾಶಯಗಳು.

Published On - 4:09 pm, Tue, 31 August 21