IND vs AUS: ಭಾರತ-ಆಸೀಸ್​ ನಡುವಿನ ಚುಟುಕು ಹಣಾಹಣಿಯ ಐದು ಪ್ರಮುಖ ಜೊತೆಯಾಟದ ಹೈಲೈಟ್ಸ್

| Updated By: ಪೃಥ್ವಿಶಂಕರ

Updated on: Sep 19, 2022 | 3:40 PM

IND vs AUS: T20 ವಿಶ್ವಕಪ್‌ಗೆ ಮುಂಚಿತವಾಗಿ, ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ T20 ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಕೂಡ ತಮ್ಮ ತಂಡದ ಸಿದ್ಧತೆಯನ್ನು ಪರೀಕ್ಷಿಸಲು ಮುಂದಾಗಿವೆ.

1 / 6
India Vs AusT20 ವಿಶ್ವಕಪ್‌ಗೆ ಮುಂಚಿತವಾಗಿ, ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ T20 ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಕೂಡ ತಮ್ಮ ತಂಡದ ಸಿದ್ಧತೆಯನ್ನು ಪರೀಕ್ಷಿಸಲು ಮುಂದಾಗಿವೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿವೆ. ಈ ಹಿಂದೆ, ಈ ಎರಡು ತಂಡಗಳು ಕ್ರಿಕೆಟ್‌ನ ಚಿಕ್ಕ ಸ್ವರೂಪದಲ್ಲಿ ಮುಖಾಮುಖಿಯಾದಾಗಲೆಲ್ಲಾ ತಂಡದ ಪರವಾಗಿ ಅತ್ಯಂತ ಯಶಸ್ವಿ ಜೊತೆಯಾಟ ನಡೆಸಿದ ದಾಖಲೆ ಯಾರ ಹೆಸರಿನಲ್ಲಿದೆ ಎಂಬುದನ್ನು ಈಗ ನೋಡೋಣ.tralia

2 / 6
ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ (134 ರನ್) - 2016 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಗಿತ್ತು. ಈ ವೇಳೆ 5 ಓವರ್‌ ಆಗುವಷ್ಟರಲ್ಲೇ 41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್​ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಒಟ್ಟಿಗೆ 87 ಎಸೆತಗಳಲ್ಲಿ 134 ರನ್ ಗಳಿಸಿದರು. ಈ ಮೂರನೇ ವಿಕೆಟ್ ಜೊತೆಯಾಟವು ಭಾರತದ ಗೆಲುವನ್ನು ಖಚಿತಪಡಿಸಿತು. ಅಂತಿಮವಾಗಿ ಈ ಪಂದ್ಯವನ್ನು ಭಾರತ 37 ರನ್‌ಗಳಿಂದ ಗೆದ್ದುಕೊಂಡಿತು.

3 / 6
ಡೇವಿಡ್ ವಾರ್ನರ್ ಮತ್ತು ಶೇನ್ ವ್ಯಾಟ್ಸನ್ (133 ರನ್) - 2010ರ ವಿಶ್ವಕಪ್ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 140 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಇಬ್ಬರು ಆಸೀಸ್ ಆರಂಭಿಕರಾದ ವಾರ್ನರ್ ಮತ್ತು ವ್ಯಾಟ್ಸನ್ 81 ಎಸೆತಗಳಲ್ಲಿ 133 ರನ್ ಜೊತೆಯಾಟ ಆಡಿದರು. ವ್ಯಾಟ್ಸನ್ 42 ಎಸೆತಗಳಲ್ಲಿ 72 ರನ್ ಗಳಿಸಿದರೆ, ವಾರ್ನರ್ 41 ಎಸೆತಗಳಲ್ಲಿ 63 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಕಾಂಗರೂ ತಂಡವು 5.1 ಓವರ್‌ಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

4 / 6
ಮೊಯಿಸೆಸ್ ಹೆನ್ರಿಕ್ಸ್ ಮತ್ತು ಟ್ರಾವಿಸ್ ಹೆಡ್ (109* ರನ್) - 2017 ರಲ್ಲಿ ಗುವಾಹಟಿಯಲ್ಲಿ ನಡೆದ ಎರಡನೇ T20I ನ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ್ದ ಆರಂಭದಲ್ಲಿ ಇಬ್ಬರು ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಅವರನ್ನು ಡ್ರೆಸ್ಸಿಂಗ್ ರೂಂಗೆ ಕಳುಹಿಸುವ ಮೂಲಕ ಭಾರತೀಯ ಬೌಲರ್‌ಗಳು ತಂಡಕ್ಕೆ ಸ್ವಲ್ಪ ರಿಲೀಫ್ ನೀಡಿದರು. ಆದರೆ ಹೆನ್ರಿಕ್ಸ್ ಮತ್ತು ಹೆಡ್ ಅವರ ಅಜೇಯ ಇನ್ನಿಂಗ್ಸ್‌ನಿಂದ ಮೂರನೇ ವಿಕೆಟ್‌ನಲ್ಲಿ 72 ಎಸೆತಗಳಲ್ಲಿ 109 ರನ್ ಗಳಿಸಿ ಆಸೀಸ್​ ತಂಡ 8 ವಿಕೆಟ್‌ಗಳ ಜಯ ಸಾಧಿಸಿತು.

5 / 6
ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ (102* ರನ್) - ಧೋನಿ ಮತ್ತು ಯುವರಾಜ್ ಕ್ರೀಸ್‌ನಲ್ಲಿದ್ದಾಗ, ಕ್ರಿಕೆಟ್ ಪ್ರೇಮಿಗಳು ಕೊನೆಯವರೆಗೂ ಪಂದ್ಯವನ್ನು ಆನಂದಿಸುತ್ತಾರೆ. ಈ ಜೋಡಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದೆ. 2013ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಉತ್ತರವಾಗಿ ಭಾರತ 11 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಆ ಬಳಿಕ ಮಹಿ-ಯುವಿ ವಿಧ್ವಂಸಕ ಜೋಡಿ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

6 / 6
ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ (100 ರನ್) - 2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೋಡಿ 50 ಎಸೆತಗಳಲ್ಲಿ 100 ರನ್ ಗಳಿಸಿದರು. ಆ ಪಂದ್ಯದಲ್ಲಿ ಕೊಹ್ಲಿ 38 ಎಸೆತಗಳಲ್ಲಿ 72 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ 23 ಎಸೆತಗಳಲ್ಲಿ 40 ರನ್ ಗಳಿಸಿದ ಧೋನಿ ಪ್ಯಾಟ್ ಕಮಿನ್ಸ್‌ಗೆ ಬಲಿಯಾದರು.