IPL 2026: ಇಬ್ಬರು OP…  RCB ಎಷ್ಟು ಆಟಗಾರರನ್ನು ಖರೀದಿಸಬಹುದು?

Updated on: Nov 16, 2025 | 1:01 PM

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ 6+2 ಯೋಜನೆಯೊಂದಿಗೆ ಕಾಣಿಸಿಕೊಳ್ಳಲಿದೆ. ಅಂದರೆ ಒಟ್ಟು 8 ಆಟಗಾರರನ್ನು ಖರೀದಿಸಲು ಆರ್​ಸಿಬಿಗೆ ಅವಕಾಶವಿದೆ,

1 / 6
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ಕ್ಕಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಬರೋಬ್ಬರಿ 17 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅಲ್ಲದೆ 8 ಆಟಗಾರರನ್ನು  ತಂಡದಿಂದ ರಿಲೀಸ್ ಮಾಡಿದೆ.

2 / 6
ಆರ್​ಸಿಬಿ ತಂಡದಿಂದ ರಿಲೀಸ್ ಆದ ಆಟಗಾರರೆಂದರೆ ಲಿಯಾಮ್ ಲಿವಿಂಗ್​ಸ್ಟೋನ್, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್​, ಬ್ಲೆಸಿಂಗ್ ಮುಝರಬಾನಿ, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ, ಮೋಹಿತ್ ರಾಠಿ, ಲುಂಗಿ ಎನ್​ಗಿಡಿ.  ಈ ಎಂಟು ಆಟಗಾರರ ರಿಲೀಸ್​ನೊಂದಿಗೆ ಆರ್​ಸಿಬಿ 16.40 ಕೋಟಿ ರೂ. ಹರಾಜು ಮೊತ್ತ ಹೊಂದಿದೆ.

3 / 6
ಅಂದರೆ ಐಪಿಎಲ್ ಮಿನಿ ಹರಾಜಿನಲ್ಲಿ ಆರ್​ಸಿಬಿ 16.40 ಕೋಟಿ ರೂ.ನೊಂದಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಈ ಮೊತ್ತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡವು ಗರಿಷ್ಠ 25 ಆಟಗಾರರನ್ನು ಹೊಂದಬಹುದು.

4 / 6
ಇತ್ತ ಆರ್​ಸಿಬಿ ತಂಡವು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಕಾರಣ ಮುಂದಿನ ಸೀಸನ್​ಗಾಗಿ ಇನ್ನೂ 8 ಆಟಗಾರರನ್ನು ಖರೀದಿಸಬಹುದು. ಈ 8 ಆಟಗಾರರಲ್ಲಿ 6 ಮಂದಿ ಭಾರತೀಯರನ್ನು ಖರೀದಿಸಬಹುದು. ಅಂದರೆ ಆರ್​ಸಿಬಿಗೆ ಉಳಿದಿರುವುದು 6+2 ಸ್ಲಾಟ್​ಗಳು ಮಾತ್ರ.

5 / 6
ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಬಹುದು. ಆರ್​ಸಿಬಿ ತಂಡದಲ್ಲಿ ಈಗಾಗಲೇ ವಿದೇಶಿ ಆಟಗಾರರಾಗಿ ಫಿಲ್ ಸಾಲ್ಟ್, ಜೋಶ್ ಹೇಝಲ್​​ವುಡ್, ನುವಾನ್ ತುಷಾರ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಬೆಥೆಲ್ ಇದ್ದಾರೆ. ಅದರಂತೆ ಹರಾಜಿನ ಮೂಲಕ ಇಬ್ಬರು ವಿದೇಶಿ ಆಟಗಾರರನ್ನು (Overseas Players) ಮಾತ್ರ ಖರೀದಿಸಲು ಆರ್​ಸಿಬಿಗೆ ಅವಕಾಶವಿದೆ.

6 / 6
ಇನ್ನುಳಿದ ಸ್ಥಾನಗಳಿಗೆ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 6+ 2 ಲೆಕ್ಕಾಚಾರದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ 16.40 ಕೋಟಿ ರೂ.ನಲ್ಲಿ ಆರ್​ಸಿಬಿ ಯಾರನ್ನೆಲ್ಲಾ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published On - 1:00 pm, Sun, 16 November 25