Smriti Mandhana: ನಮ್ದೆ ಅಲ್ಲ, ಈ ಸಲ ಕಪ್ ನಮ್ದು: ಕನ್ನಡದಲ್ಲೇ ಗೆದ್ದ ಖುಷಿ ಹಂಚಿಕೊಂಡ ಸ್ಮೃತಿ ಮಂಧಾನ

| Updated By: ಝಾಹಿರ್ ಯೂಸುಫ್

Updated on: Mar 18, 2024 | 1:59 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಸೀಸನ್ 17 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 19 ರಂದು ನಡೆಯಲಿರುವ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಆರ್​ಸಿಬಿ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಿದ್ದು, ಇದರ ಜೊತೆ ವುಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಆರ್​ಸಿಬಿ ಆಟಗಾರ್ತಿಯರನ್ನು ಸನ್ಮಾನಿಸಲಿದೆ.

1 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳ ಬಹುಕಾಲದ ಕನಸನ್ನು ಸ್ಮೃತಿ ಮಂಧಾನ (Smriti Mandhana) ಪಡೆ ಈಡೇರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

2 / 6
ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹೇಳಿದ್ದು ಒಂದೇ ಮಾತು, ಪ್ರತಿ ಬಾರಿಯೂ ನಾವು ಈ ಸಲ ಕಪ್ ನಮ್ದೇ ಎಂದೇಳುತ್ತಾ ಬಂದಿದ್ದೇವೆ. ಇದೀಗ ನಾನು ಈ ಸಲ ಕಪ್ ನಮ್ದು...ಎಂದೇಳಲು ಬಯಸುತ್ತೇನೆ ಅಂದಾಗ, ಸ್ಡೇಡಿಯಂನಲ್ಲಿದ್ದ ಆರ್​ಸಿಬಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

3 / 6
ಇದೀಗ ಮತ್ತೊಮ್ಮೆ ಸ್ಮೃತಿ ಮಂಧಾನ ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು...ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಫಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅದು ಕೂಡ ಕನ್ನಡದಲ್ಲಿಯೇ ಈ ಸಲ ಕಪ್ ನಮ್ದು ಎಂದು ಬರೆಯುವ ಮೂಲಕ ಎಂಬುದು ವಿಶೇಷ.

4 / 6
ಸ್ಮೃತಿ ಮಂಧಾನ ಅವರ ಕನ್ನಡದ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ ಆರ್​ಸಿಬಿ ತಂಡದ ಕೂಲ್ ಕ್ಯಾಪ್ಟನ್​ ಅನ್ನು ಹಾಡಿ ಹೊಗಳುತ್ತಿದ್ದಾರೆ.

5 / 6
ಒಟ್ಟಿನಲ್ಲಿ 16 ವರ್ಷಗಳ ಬಳಿಕ ಆರ್​ಸಿಬಿ ಫ್ರಾಂಚೈಸಿಗೆ ಚೊಚ್ಚಲ ಟ್ರೋಫಿ ಗೆದ್ದು ಕೊಡುವಲ್ಲಿ ಸ್ಮೃತಿ ಮಂಧಾನ ಯಶಸ್ವಿಯಾಗಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಆರ್​ಸಿಬಿ ಮಹಿಳಾ ತಂಡ ಕೂಡ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

6 / 6
ಆರ್​ಸಿಬಿ ತಂಡದ ಅನ್​ಬಾಕ್ಸ್ ಕಾರ್ಯಕ್ರಮ ನಾಳೆ (ಮಾ.19) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದೇ ವೇಳೆ ಆರ್​ಸಿಬಿ ಪುರುಷ ಮತ್ತು ಮಹಿಳಾ ತಂಡಗಳು ಜೊತೆಯಾಗಿ ಕಾಣಿಸಿಕೊಳ್ಳಲಿದೆ.