ICC ODI Rankings: ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ- ರೋಹಿತ್ ನಡುವೆ ಪೈಪೋಟಿ! ಏಳನೇ ಸ್ಥಾನದಲ್ಲಿ ಬುಮ್ರಾ
TV9 Web | Updated By: ಪೃಥ್ವಿಶಂಕರ
Updated on:
Feb 09, 2022 | 6:05 PM
ICC ODI Rankings: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ತಮ್ಮ ಅರ್ಧಶತಕದೊಂದಿಗೆ ಪ್ರಮುಖ ರೇಟಿಂಗ್ ಅಂಕಗಳನ್ನು ಗಳಿಸಿದರು. ಕೊಹ್ಲಿ 828 ಅಂಕ ಗಳಿಸಿದರೆ ರೋಹಿತ್ 807 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
1 / 5
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಏಕದಿನದಲ್ಲಿ ತಮ್ಮ ನಾಯಕತ್ವವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸುಲಭವಾಗಿ ಸೋಲಿಸಿತು. ವಿಶೇಷವೆಂದರೆ ರೋಹಿತ್ ಅವರೇ 60 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ICC ODI ಶ್ರೇಯಾಂಕದಲ್ಲಿ ಈ ಪ್ರದರ್ಶನದಿಂದ ರೋಹಿತ್ ಲಾಭ ಪಡೆದಿದ್ದಾರೆ. ಜೊತೆಗೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬಹಳ ಹತ್ತಿರವಾಗಿದ್ದಾರೆ.
2 / 5
ಇತ್ತೀಚಿನ ಶ್ರೇಯಾಂಕದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇನ್ನೂ ಎರಡು ಮತ್ತು ಮೂರನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ, ಇಬ್ಬರ ನಡುವಿನ ಅಂಕಗಳ ವ್ಯತ್ಯಾಸ ಕಡಿಮೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ತಮ್ಮ ಅರ್ಧಶತಕದೊಂದಿಗೆ ಪ್ರಮುಖ ರೇಟಿಂಗ್ ಅಂಕಗಳನ್ನು ಗಳಿಸಿದರು. ಕೊಹ್ಲಿ 828 ಅಂಕ ಗಳಿಸಿದರೆ ರೋಹಿತ್ 807 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
3 / 5
ರೋಹಿತ್ ಈಗ ಈ ಸರಣಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ವಿಫಲರಾದ ಅವರು ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಸ್ವತಃ ಕೊಹ್ಲಿ ಸತತ ಎರಡನೇ ಏಕದಿನ ಪಂದ್ಯದಲ್ಲೂ ವಿಫಲರಾದರು. ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ 18 ರನ್ ಗಳಿಸಲಷ್ಟೇ ಶಕ್ತರಾದರು. ಈಗ ಮೂರನೇ ಏಕದಿನ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳ ದೊಡ್ಡ ಪ್ರಭಾವವು ಶ್ರೇಯಾಂಕದಲ್ಲಿ ಕಂಡುಬರುತ್ತದೆ.
4 / 5
ಅಗ್ರ ಸ್ಥಾನಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಇನ್ನೂ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರ ಸಹವರ್ತಿ ಫಖರ್ ಜಮಾನ್ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧದ ಮೊದಲ ODI ನಲ್ಲಿ ಎಂಟು ರನ್ ಗಳಿಸಿದ ವೆಸ್ಟ್ ಇಂಡೀಸ್‌ನ ಶೀ ಹೋಪ್ ಅಗ್ರ 10 ರಿಂದ ಹೊರಗುಳಿದಿದ್ದಾರೆ.
5 / 5
ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್‌ರೌಂಡರ್‌ಗಳ ಪೈಕಿ ರವೀಂದ್ರ ಜಡೇಜಾ ಎಂಟನೇ ಸ್ಥಾನದೊಂದಿಗೆ ಅತ್ಯುತ್ತಮ ಭಾರತೀಯರಾಗಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿರುವ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ನಾಲ್ಕು ಸ್ಥಾನಗಳನ್ನು ಸುಧಾರಿಸಿಕೊಂಡು ಅಗ್ರ 20ರೊಳಗೆ ತಲುಪಿದ್ದಾರೆ.