World Cup 2023: ಕೈಯಲ್ಲಿ ಟಿಕೆಟ್ ಇದ್ದರೆ ಮಾತ್ರ ಕ್ರೀಡಾಂಗಣಕ್ಕೆ ಎಂಟ್ರಿ! ಈ ದಿನದಿಂದ ಟಿಕೆಟ್ ಮಾರಟ ಆರಂಭ

Updated on: Jul 29, 2023 | 11:44 AM

ICC ODI World Cup 2023: ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಎಂಟ್ರಿಕೊಡಬೇಕೆಂದರೆ ತಮ್ಮ ಬಳಿ ಭೌತಿಕವಾಗಿ ಟಿಕೆಟ್ ಹೊಂದಿರಬೇಕಾಗಿರುತ್ತದೆ.

1 / 8
ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಭದ್ರತಾ ಸಮಸ್ಯೆಯಿಂದಾಗಿ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ತರಲು ಬಿಸಿಸಿಐ ಹಾಗೂ ಐಸಿಸಿ ಮುಂದಾಗಿದೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಭದ್ರತಾ ಸಮಸ್ಯೆಯಿಂದಾಗಿ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ತರಲು ಬಿಸಿಸಿಐ ಹಾಗೂ ಐಸಿಸಿ ಮುಂದಾಗಿದೆ.

2 / 8

ಇದೆಲ್ಲದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಆಗಸ್ಟ್ 10 ರಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟವನ್ನು ಪ್ರಾರಂಭಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

3 / 8

ದೆಹಲಿಯಲ್ಲಿ ನಡೆದ ಸ್ಟೇಟ್ ಅಸೋಸಿಯೇಷನ್ ​​ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಪ್ರತಿ ನಗರದಲ್ಲಿ ಟಿಕೆಟ್ ಮಾರಾಟ ಹಾಗೂ ಟಿಕೆಟ್ ಮಾರಾಟದ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.

4 / 8

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಎಲ್ಲಾ ರಾಜ್ಯ ಸಂಘಗಳು ಜುಲೈ 31 ರೊಳಗೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಂಡು ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡಲಿವೆ. ಆ ಬಳಿಕ ಆಗಸ್ಟ್ 10 ರಿಂದ ಆನ್​ಲೈನ್ ಟಿಕೆಟ್ ಮಾರಾಟ ಶುರುವಾಗಲಿದೆ.

5 / 8

ಆದರೆ ವಿಕೆಟ್ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಬಿಸಿಸಿಐ, ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಎಂಟ್ರಿಕೊಡಬೇಕೆಂದರೆ ತಮ್ಮ ಬಳಿ ಭೌತಿಕವಾಗಿ ಟಿಕೆಟ್ ಹೊಂದಿರಬೇಕೆಂಬ ನಿಯಮ ಹೊರಡಿಸಿದೆ.

6 / 8

ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಬಿಸಿಸಿಐ, ಅಭಿಮಾನಿಗಳಿಗೆ ತಾವು ಆನ್​ಲೈನ್​ನಲ್ಲಿ ಖರೀದಿಸಿದ ಟಿಕೆಟ್‌ಗಳನ್ನು ತೆಗೆದುಕೊಳ್ಳಲು ಪ್ರತಿ ನಗರದಲ್ಲಿ ಕ್ರೀಡಾಂಗಣವನ್ನು ಹೊರತುಪಡಿಸಿ ಹೆಚ್ಚುವರಿ ಟಿಕೆಟ್ ಕಲೆಕ್ಟನ್ ಕೇಂದ್ರಗಳನ್ನು ತೆರೆಯಲ್ಲಿದೆ.

7 / 8

ಅಂದರೆ ಆನ್​​ಲೈನ್​ನಲ್ಲಿ ಟಿಕೆಟ್ ಖರೀದಿಸುವ ಪ್ರೇಕ್ಷಕರು ಈ ಟಿಕೆಟ್ ಕೌಂಟರ್​ಗಳಿಗೆ ತೆರಳಿ ತಮ್ಮ ಟಿಕೆಟ್​ಗಳನ್ನು ಪಡೆಯಬೇಕಿದೆ. ಪಂದ್ಯಕ್ಕೆ 1 ವಾರ ಮೊದಲು ನಗರದ 7-8 ಸ್ಥಳಗಳಲ್ಲಿ ಟಿಕೆಟ್‌ ಕೌಂಟರ್​ಗಳು ತೆರೆಯಲ್ಲಿದ್ದು, ಅಲ್ಲಿ ಅಭಿಮಾನಿಗಳು ತಮ್ಮ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

8 / 8

ಇನ್ನು ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗಿ ನವೆಂಬರ್ 19 ರ ನಡುವೆ ಭಾರತದ 10 ಸ್ಥಳಗಳಲ್ಲಿ ನಡೆಯಲ್ಲಿದೆ. 10 ತಂಡಗಳ ನಡುವೆ 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ.

Published On - 11:41 am, Sat, 29 July 23

Loading...
Unable to load recommendations.
Follow Us