T20 World Cup 2022 Point Table: ಟಿ20 ವಿಶ್ವಕಪ್ ಪಾಯಿಂಟ್ ಟೇಬಲ್: ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್, ಬಾಂಗ್ಲಾದೇಶ್
TV9 Web | Updated By: ಝಾಹಿರ್ ಯೂಸುಫ್
Updated on:
Oct 24, 2022 | 10:54 PM
T20 World Cup 2022 Point Table: ಈ ಪಂದ್ಯಗಳಲ್ಲಿ ಅತ್ಯಧಿಕ ಜಯ ಸಾಧಿಸಿ 2 ಗ್ರೂಪ್ಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಅಲಂಕರಿಸುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ.
1 / 5
ಟಿ20 ವಿಶ್ವಕಪ್ನ ಸೂಪರ್-12 ಸುತ್ತಿನ ಪಂದ್ಯಗಳು ಜರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನಾಡಿದೆ. ವಿಶೇಷ ಎಂದರೆ ಎಲ್ಲಾ ಪಂದ್ಯಗಳ ಫಲಿತಾಂಶ ಹೊರಹೊಮ್ಮಿದರೆ, ಸೌತ್ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವಣ ಪಂದ್ಯ ಮಳೆಯ ಕಾರಣ ರದ್ದಾಗಿದೆ.
2 / 5
ಮಳೆಯ ಕಾರಣ ಪಂದ್ಯವು ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಸೋಲಿನ ಸುಳಿಯಲ್ಲಿದ್ದ ಜಿಂಬಾಬ್ವೆ ಕೂಡ ಒಂದು ಪಾಯಿಂಟ್ ಪಡೆದುಕೊಂಡು ನಿಟ್ಟುಸಿರು ಬಿಟ್ಟಿದೆ.
3 / 5
ಗ್ರೂಪ್-1 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಸೋಲಿಸಿ ಭರ್ಜರಿ ಶುಭಾರಂಭ ಮಾಡಿದ ನ್ಯೂಜಿಲೆಂಡ್ +4.45 ನೆಟ್ ರನ್ ರೇಟ್ ಪಡೆಯುವ ಮೂಲಕ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಐರ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದ ಶ್ರೀಲಂಕಾ 2ನೇ ಸ್ಥಾನದಲ್ಲಿದೆ. ಹಾಗೆಯೇ ಅಫ್ಘಾನಿಸ್ತಾನ್ ವಿರುದ್ಧ ಜಯ ಸಾದಿಸಿದ ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ.
4 / 5
ಇನ್ನು ಪಾಕಿಸ್ತಾನ್ ವಿರುದ್ಧ ರೋಚಕ ಜಯ ಸಾಧಿಸಿ +0.05 ನೆಟ್ ರನ್ ರೇಟ್ ಹೊಂದಿರುವ ಟೀಮ್ ಇಂಡಿಯಾ ಗ್ರೂಪ್-2 ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅತ್ತ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಾಂಗ್ಲಾದೇಶ್ ತಂಡವು +0.45 ನೆಟ್ ರನ್ ರೇಟ್ ಕಲೆಹಾಕುವ ಮೂಲಕ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಮೂರನೇ ಸ್ಥಾನದಲ್ಲಿ ಜಿಂಬಾಬ್ವೆ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ತಂಡವಿದೆ.
5 / 5
ಇನ್ನೂ ಎಲ್ಲಾ ತಂಡಗಳಿಗೆ 4 ಪಂದ್ಯಗಳು ಬಾಕಿಯಿವೆ. ಈ ಪಂದ್ಯಗಳಲ್ಲಿ ಅತ್ಯಧಿಕ ಜಯ ಸಾಧಿಸಿ 2 ಗ್ರೂಪ್ಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಅಲಂಕರಿಸುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published On - 10:54 pm, Mon, 24 October 22