ICC T20I rankings: ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ: ನಂಬರ್ ಒನ್ ಸ್ಥಾನದಲ್ಲಿ ಯಾರು?
TV9 Web | Updated By: Vinay Bhat
Updated on:
Oct 13, 2022 | 8:30 AM
Suryakumar Yadav: ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ನೂತನ ಟಿ20 ರ‍್ಯಾಂಕಿಂಗ್ ಅನ್ನು ಪ್ರಕಟ ಮಾಡಿದೆ. ಭರ್ಜರಿ ಫಾರ್ಮ್ ನಲ್ಲಿರುವ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
1 / 7
ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ನೂತನ ಟಿ20 ರ‍್ಯಾಂಕಿಂಗ್ ಅನ್ನು ಪ್ರಕಟ ಮಾಡಿದೆ. ಭರ್ಜರಿ ಫಾರ್ಮ್ ನಲ್ಲಿರುವ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
2 / 7
ಸೂರ್ಯಕುಮಾರ್ ಯಾದವ್ ಖಾತೆಯಲ್ಲಿ ಒಟ್ಟು 838 ಅಂಕಗಳಿವೆ. 32 ವರ್ಷದ ಸೂರ್ಯ ಪಟ್ಟಿಯ ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರರಾಗಿದ್ದಾರೆ. ಈ ಮೂಲಕ ನಂಬರ್ 1 ಸ್ಥಾನಕ್ಕೇರಲು ಮತ್ತಷ್ಟು ಹತ್ತಿರವಾಗಿದ್ದಾರೆ.
3 / 7
ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಸರಣಿಯಲ್ಲಿ ಎರಡು ಅರ್ಧ ಶತಕವನ್ನು ಗಳಿಸಿದ್ದು ತಿರುವನಂತಪುರಂನ ಕಠಿಣ ಪಿಚ್ ನಲ್ಲಿಯೂ ಸರಾಗವಾಗಿ ಬ್ಯಾಟಿಂಗ್ ನಡೆಸಿದ್ದರು.
4 / 7
ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 853 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ರಿಜ್ವಾನ್‌ಗಿಂತ ಸೂರ್ಯ ಕೇವಲ 15 ಅಂಕಗಳಿಂದ ಹಿಂದಿದ್ದಾರೆ.
5 / 7
ಕೆ.ಎಲ್. ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರು ಕ್ರಮವಾಗಿ 13 ಹಾಗೂ 14ನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ 16ನೇ ಸ್ಥಾನದಲ್ಲಿದ್ದಾರೆ. ಇವರು 760 ಅಂಕ ಸಂಪಾದಿಸಿದ್ದಾರೆ.
6 / 7
ನ್ಯೂಜಿಲೆಂಡ್ ತಂಡದ ಡೇವೊನ್ ಕಾನ್ವೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.
7 / 7
ಇನ್ನು ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜ್ಲೆವುಡ್ 732 ಪಾಯಿಂಟ್ ನೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ರಶೀದ್ ಖಾನ್ ಎರಡನೇ ಸ್ಥಾನದಲ್ಲಿ, ವನಿಂದು ಹಸರಂಗ, ತಬ್ರೈಸ್ ಶಂಸಿ ಹಾಗೂ ಮಹೀಶಾ ತೀಕ್ಷಣ ನಂತರ ಮೂರು ಸ್ಥಾನದಲ್ಲಿದ್ದಾರೆ.