Updated on: Oct 13, 2022 | 4:59 PM
ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಬಾಬರ್ ಆಜಂ ಇದೀಗ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಬಾಂಗ್ಲಾ ವಿರುದ್ದ 40 ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ಬಾಬರ್ ಆಜಂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದರು. ಈ ಮೂಲಕ ಅತೀ ವೇಗವಾಗಿ 11 ಸಾವಿರ ರನ್ ಕಲೆಹಾಕಿದ ಏಷ್ಯಾದ ನಂಬರ್ 1 ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 261 ಇನಿಂಗ್ಸ್ಗಳ ಮೂಲಕ ಈ ವಿಶೇಷ ದಾಖಲೆ ಬರೆದಿದ್ದರು. ಇದೀಗ 251 ಇನಿಂಗ್ಸ್ ಮೂಲಕ 11 ಸಾವಿರ ರನ್ ಪೂರೈಸುವ ಮೂಲಕ ಬಾಬರ್ ಹೊಸ ದಾಖಲೆ ಬರೆದಿದ್ದಾರೆ.
ಬಾಬರ್ ಆಜಂ 42 ಟೆಸ್ಟ್‌ಗಳ 75 ಇನ್ನಿಂಗ್ಸ್‌ಗಳಿಂದ 3,122 ರನ್, 92 ಏಕದಿನ ಪಂದ್ಯಗಳ 90 ಇನ್ನಿಂಗ್ಸ್‌ಗಳಿಂದ 4664 ರನ್ ಮತ್ತು 91 ಟಿ20 ಪಂದ್ಯಗಳ 86 ಇನ್ನಿಂಗ್ಸ್‌ಗಳಿಂದ 3216 ರನ್ ಗಳಿಸಿದ್ದಾರೆ. ಈ ಮೂಲಕ 11 ಸಾವಿರ ರನ್ ಪೂರೈಸಿದ್ದಾರೆ.
251 ಇನಿಂಗ್ಸ್ ಮೂಲಕ 11 ಸಾವಿರ ರನ್ಗಳ ವಿಶೇಷ ಸಾಧನೆಗೈದಿರುವ ಬಾಬರ್ ಆಜಂ ಭಾರತದ ಸುನೀಲ್ ಗವಾಸ್ಕರ್ (262 ಇನಿಂಗ್ಸ್) ಹಾಗೂ ಪಾಕಿಸ್ತಾನದ ಜಾವೇದ್ ಮಿಯಾಂದಾದ್ (266 ಇನಿಂಗ್ಸ್) ಅವರ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ.