ICC Test Rankings: ಬೆಳಿಗ್ಗೆ ಭಾರತ ನಂಬರ್ 1: ರಾತ್ರಿ ಆಸ್ಟ್ರೇಲಿಯಾ ನಂಬರ್ 1..!
TV9 Web | Updated By: ಝಾಹಿರ್ ಯೂಸುಫ್
Updated on:
Feb 15, 2023 | 11:16 PM
ICC Test Rankings: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಶ್ರೀಲಂಕಾ ತಂಡವು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಭಾರತ-ಶ್ರೀಲಂಕಾ ನಡುವೆ ಫೈನಲ್ಗೇರಲು ಪೈಪೋಟಿ ಇದೆ.
1 / 7
ICC Test Rankings: ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಲಾಗಿದೆ. ನೂತನ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನ ಅಲಂಕರಿಸಿದೆ. ಇದಕ್ಕೂ ಮುನ್ನ ಬೆಳಗ್ಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡವು ನಂಬರ್ 1 ಸ್ಥಾನದಲ್ಲಿತ್ತು.
2 / 7
ಇದೀಗ ಐಸಿಸಿಯು ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪರಿಷ್ಕರಿಸಿ ತಪ್ಪನ್ನು ಸರಿಪಡಿಸಲಾಗಿದೆ. ಅದರಂತೆ 126 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ನಾಗ್ಪುರ ಟೆಸ್ಟ್ನಲ್ಲಿ ಆಸೀಸ್ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ ಈ ಬಾರಿ 115 ಪಾಯಿಂಟ್ಗಳೊಂದಿಗೆ 2ನೇ ಸ್ಥಾನದಲ್ಲಿದೆ.
3 / 7
ಐಸಿಸಿ ವೆಬ್ಸೈಟ್ನಲ್ಲಿ ಬೆಳಿಗ್ಗೆ ಭಾರತ ತಂಡವು ಮೂರು ಮಾದರಿಯ ಕ್ರಿಕೆಟ್ನಲ್ಲೂ ನಂಬರ್ 1 ಸ್ಥಾನದಲ್ಲಿತ್ತು. ಇದೀಗ ಟೆಸ್ಟ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕೆಳಗಿಳಿದರೂ, ಏಕದಿನ ಹಾಗೂ ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡವಾಗಿ ಕಾಣಿಸಿಕೊಂಡಿದೆ.
4 / 7
ಇನ್ನು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ ಟೆಸ್ಟ್ ಗೆದ್ದಿರುವ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇದಾಗ್ಯೂ ಫೈನಲ್ ಆಡುವುದು ಇನ್ನೂ ಕೂಡ ಖಚಿತವಾಗಿಲ್ಲ.
5 / 7
ಅಂದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯನ್ನು ಭಾರತ ತಂಡವು 3-1 ಅಥವಾ 3-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಒಂದು ವೇಳೆ 2-1 ಅಥವಾ 2-0 ಅಂತರದಿಂದ ಗೆದ್ದರೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕು.
6 / 7
ಅಂದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಶ್ರೀಲಂಕಾ ತಂಡವು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಭಾರತ-ಶ್ರೀಲಂಕಾ ನಡುವೆ ಫೈನಲ್ಗೇರಲು ಪೈಪೋಟಿ ಇದೆ. ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 3-1 ಅಥವಾ 3-0 ಅಂತರದಿಂದ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಬಹುದು. ಒಂದು ವೇಳೆ ಸರಣಿ ಡ್ರಾ ಆದರೆ ಅಥವಾ ಭಾರತ ಸೋತರೆ ಶ್ರೀಲಂಕಾ ತಂಡಕ್ಕೆ ಅವಕಾಶ ಹೆಚ್ಚಾಗಲಿದೆ. ಶ್ರೀಲಂಕಾ ತಂಡವು ನ್ಯೂಜಿಲೆಂಡ್ 2-0 ಅಂತರದಿಂದ ಗೆದ್ದರೆ ಫೈನಲ್ಗೆ ಪ್ರವೇಶಿಸಬಹುದು.
7 / 7
ಅದರಂತೆ ಜೂನ್ 7 ರಿಂದ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಶುರುವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಾರು ಕಣಕ್ಕಿಳಿಯಲಿದ್ದಾರೆ ಕಾದು ನೋಡಬೇಕಿದೆ.
Published On - 10:31 pm, Wed, 15 February 23