IND vs AUS 2nd Test: ಕೋಟಿ ಬೆಲೆಯ ಕಾರಲ್ಲಿ ಆಗಮಿಸಿದ ಕೊಹ್ಲಿ: ಈ ಕಾರಿನ ವಿಶೇಷತೆ ಏನು ಗೊತ್ತಾ?

IND vs AUS 2nd Test: ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯಕ್ಕಾಗಿ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 17 ರಿಂದ ಶುರುವಾಗಲಿರುವ ಈ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Feb 15, 2023 | 11:14 PM

ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ವಿಶೇಷ ಎಂದರೆ ಈ ಗ್ರೌಂಡ್​ ವಿರಾಟ್ ಕೊಹ್ಲಿ ತವರು ಮೈದಾನ. ಹೀಗಾಗಿಯೇ 2ನೇ ಪಂದ್ಯಕ್ಕಾಗಿ ಅಭ್ಯಾಸ ನಡೆಸಲು ಕಿಂಗ್ ಕೊಹ್ಲಿ ಮನೆಯಿಂದಲೇ ಆಗಮಿಸಿದ್ದರು. ಅದು ಕೂಡ ದುಬಾರಿಯ ಬೆಲೆಯ ಕಾರಿನಲ್ಲಿ ಎಂಬುದು ವಿಶೇಷ.

1 / 5
ವಿರಾಟ್​ ಕೊಹ್ಲಿ ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯಿಂದ ಪೋರ್ಷೆ ಪನಾಮೆರಾ ಟರ್ಬೊ ಕಾರಿನಲ್ಲಿ ಆಗಮಿಸಿದ್ದರು. ಇತ್ತ ಅರುಣ್ ಜೇಟ್ಲಿ ಮೈದಾನದಲ್ಲಿ ಐಷರಾಮಿ ಕಾರು ಬರುತ್ತಿದ್ದಂತೆ ಅಭಿಮಾನಿಗಳು ಗುಂಪು ಸೇರಿದ್ದರು. ಇದಾಗ್ಯೂ ಭದ್ರತಾ ಸಿಬ್ಬಂದಿಗಳ ಸಹಾಯದಿಂದ ಕೊಹ್ಲಿ ಮೈದಾನದತ್ತ ಮುಖ ಮಾಡಿದರು.

2 / 5
ಇನ್ನು ಸ್ವತಃ ಕೊಹ್ಲಿ ಕಾರಿನಲ್ಲಿ ಕೂತಿರುವ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ಸ್ಟೋರಿಯಲ್ಲಿ ಹಾಕಿದ್ದಾರೆ. ಹಲವು ವರ್ಷಗಳ ನಂತರ ದೆಹಲಿಯ ಸ್ಟೇಡಿಯಂಗೆ ಲಾಂಗ್ ಡ್ರೈವ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿಯ ಕಾರಿನ ಫೋಟೋ ವೈರಲ್ ಆಗಿದೆ.

3 / 5
ಅಂದಹಾಗೆ ವಿರಾಟ್ ಕೊಹ್ಲಿ ಬಂದಿದ್ದ ಕಾರು ಪ್ರಸಿದ್ಧ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಪೋರ್ಷೆಯ ಪನಾಮೆರಾ ಟರ್ಬೊ ಮಾಡೆಲ್. ಇದರ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 2.34 ಕೋಟಿ ರೂ. ಇನ್ನು ಈ ಕಾರು ಕೇವಲ 3.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಮುಟ್ಟುತ್ತದೆ. ಅಲ್ಲದೆ, ಇದರ ಗರಿಷ್ಠ ವೇಗ ಗಂಟೆಗೆ 315 ಕಿಲೋಮೀಟರ್.

4 / 5
ಇದೀಗ ಐಷಾರಾಮಿ ಕಾರಿನಲ್ಲಿ ಅಭ್ಯಾಸ ನಡೆಸಲು ಆಗಮಿಸುವ ಮೂಲಕ ವಿರಾಟ್ ಕೊಹ್ಲಿ ಸುದ್ದಿಯಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್ ಶತಕದ ಬರ ನೀಗಿಸುವ ಇರಾದೆಯಲ್ಲಿದ್ದಾರೆ ಕಿಂಗ್ ಕೊಹ್ಲಿ.

5 / 5

Published On - 11:09 pm, Wed, 15 February 23

Follow us