ICC Test rankings: ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಶ್ವಿನ್- ಅಯ್ಯರ್ಗೆ ಭರ್ಜರಿ ಮುಂಬಡ್ತಿ; ಜಾರಿದ ಪೂಜಾರ- ಕೊಹ್ಲಿ!
TV9 Web | Updated By: ಪೃಥ್ವಿಶಂಕರ
Updated on:
Dec 28, 2022 | 5:54 PM
ICC Test rankings: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಚೇತೇಶ್ವರ ಪೂಜಾರ ತನ್ನ ಶ್ರೇಯಾಂಕದಲ್ಲಿ ಮೂರು ಸ್ಥಾನ ಕುಸಿದು 19ನೇ ಸ್ಥಾನಕ್ಕೆ ತಲುಪಿದರೆ, ವಿರಾಟ್ ಕೊಹ್ಲಿ ಎರಡು ಸ್ಥಾನ ಕುಸಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ.
1 / 5
ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಟೀಂ ಇಂಡಿಯಾದ ಆರ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ, ಅದರಲ್ಲೂ ಎರಡನೇ ಟೆಸ್ಟ್ ಗೆಲುವಲ್ಲಿ ಈ ಇಬ್ಬರ ಆಟವೇ ನಿರ್ಣಾಯಕವಾಗಿತ್ತು.
2 / 5
ಮೀರ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಪಡೆದಿದ್ದ ಅಶ್ವಿನ್, ಟೆಸ್ಟ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಬೌಲರ್‌ಗಳ ವಿಭಾಗದಲ್ಲಿ ಜಂಟಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆಯೇ ಅದೇ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ 42 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಅಶ್ವಿನ್, ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲೂ ಲಾಭ ಗಳಿಸಿದ್ದು, ಮೂರು ಸ್ಥಾನಗಳ ಏರಿಕೆಯೊಂದಿಗೆ 84 ನೇ ಸ್ಥಾನವನ್ನು ತಲುಪಿದ್ದಾರೆ.
3 / 5
ಅಶ್ವಿನ್ ಅವರೊಂದಿಗೆ ಮುರಿಯದ 71 ರನ್ ಜೊತೆಯಾಟವನ್ನು ಹಂಚಿಕೊಂಡ ಅಯ್ಯರ್ ಅವರು ವೃತ್ತಿಜೀವನದ ಅತ್ಯುತ್ತಮ 16 ನೇ ಶ್ರೇಯಾಂಕವನ್ನು ತಲುಪಿದ್ದಾರೆ. ಮೊದಲ ಟೆಸ್ಟ್‌ನಲ್ಲಿ 86 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದ ಅಯ್ಯರ್ ಈ ವರ್ಷ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ..
4 / 5
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಚೇತೇಶ್ವರ ಪೂಜಾರ ತನ್ನ ಶ್ರೇಯಾಂಕದಲ್ಲಿ ಮೂರು ಸ್ಥಾನ ಕುಸಿದು 19ನೇ ಸ್ಥಾನಕ್ಕೆ ತಲುಪಿದರೆ, ವಿರಾಟ್ ಕೊಹ್ಲಿ ಎರಡು ಸ್ಥಾನ ಕುಸಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಇಬ್ಬರನ್ನೂ ಹೊರತುಪಡಿಸಿದರೆ ಬ್ಯಾಟ್ಸ್‌ಮನ್‌ಗಳಲ್ಲಿ ರಿಷಬ್ ಪಂತ್ ಆರನೇ ಸ್ಥಾನದಲ್ಲಿದ್ದರೆ, ಬೌಲರ್‌ಗಳಲ್ಲಿ ಉಮೇಶ್ ಯಾದವ್ 33 ನೇ ಸ್ಥಾನದಲ್ಲಿದ್ದಾರೆ.
5 / 5
ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರು ವೃತ್ತಿಜೀವನದ ಅತ್ಯುತ್ತಮ 12 ನೇ ಶ್ರೇಯಾಂಕವನ್ನು ತಲುಪಿದ್ದರೆ, ಮೊಮಿನುಲ್ ಹಕ್ 68 ನೇ, ಜಾಕಿರ್ ಹಸನ್ 70 ನೇ ಮತ್ತು ನೂರುಲ್ ಹಸನ್ 93 ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ತೈಜುಲ್ ಇಸ್ಲಾಂ ಮತ್ತು ಮೆಹದಿ ಹಸನ್ ಮಿರಾಜ್ ತಲಾ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು 28 ಮತ್ತು 29ನೇ ಸ್ಥಾನದಲ್ಲಿದ್ದಾರೆ.