U19 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲೇ ಭಾರತಕ್ಕೆ ಬಲಿಷ್ಠ ಎದುರಾಳಿ
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2021 | 3:29 PM
ICC U19 World Cup 2022 Schedule: ಭಾರತ ಇದುವರೆಗೆ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಗೆದ್ದುಕೊಂಡಿದೆ. ಮೊದಲ ಬಾರಿ 2000ರಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಭಾರತ ತಂಡವು ಕಿರಿಯರ ವಿಶ್ವಕಪ್ ಗೆದ್ದರೆ, ಆ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2008 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
1 / 7
ಮುಂದಿನ ವರ್ಷ ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಜನವರಿ ಮೂರನೇ ವಾರ ಶುರುವಾಗಲಿರುವ ಕಿರಿಯರ ವಿಶ್ವಕಪ್ಗಾಗಿ ಈಗಾಗಲೇ ಟೀಮ್ ಇಂಡಿಯಾ ಯುವ ಪಡೆಯನ್ನು ಘೋಷಿಸಲಾಗಿದೆ.
2 / 7
ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳುತ್ತಿದ್ದು, ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಎ ಗ್ರೂಪ್ನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇದೆ. ಸಿ ಗ್ರೂಪ್ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಪಪುವಾ ನ್ಯೂ ಗಿನಿಯಾ ತಂಡಗಳಿವೆ. ಹಾಗೆಯೇ ಡಿ ಗ್ರೂಪ್ನಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ.
3 / 7
ಇನ್ನು ಭಾರತ ತಂಡವು ಬಿ ಗ್ರೂಪ್ನಲ್ಲಿದ್ದು, ಈ ಗುಂಪಿನಲ್ಲಿ ಉಗಾಂಡಾ, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ತಂಡಗಳಿವೆ. ಅದೇ ರೀತಿಯ ಉಗಾಂಡಾ ತಂಡವು ಇದೇ ಮೊದಲ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಆಡುತ್ತಿರುವುದು ವಿಶೇಷ.
4 / 7
ಜನವರಿ 15 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ದ ಆಡಲಿದೆ. 2ನೇ ಪಂದ್ಯವು ಜನವರಿ 19 ರಂದು ಆಡಲಿದ್ದು, ಈ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜನವರಿ 22 ರಂದು ನಡೆಯುವ 3ನೇ ಪಂದ್ಯದಲ್ಲಿ ಉಗಾಂಡಾ ವಿರುದ್ದ ಸೆಣಸಲಿದೆ.
5 / 7
ಜನವರಿ 25 ರಿಂದ ಸೂಪರ್ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಸೆಮಿಫೈನಲ್ ಫೆಬ್ರವರಿ 1 ರಂದು ಹಾಗೂ 2ನೇ ಸೆಮಿಫೈನಲ್ ಫೆಬ್ರವರಿ 2 ರಂದು ನಡೆಯಲಿದೆ. ಹಾಗೆಯೇ ಫೆಬ್ರವರಿ 5 ರಂದು ಫೈನಲ್ ಪಂದ್ಯ ಜರುಗಲಿದೆ.
6 / 7
ಭಾರತ ಇದುವರೆಗೆ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಗೆದ್ದುಕೊಂಡಿದೆ. ಮೊದಲ ಬಾರಿ 2000ರಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಭಾರತ ತಂಡವು ಕಿರಿಯರ ವಿಶ್ವಕಪ್ ಗೆದ್ದರೆ, ಆ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2008 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2012 ರಲ್ಲಿ ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ತಂಡವು ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು 2018 ರಲ್ಲಿ ಟೀಮ್ ಇಂಡಿಯಾ ಪೃಥ್ವಿ ಶಾ ನಾಯಕತ್ವದಲ್ಲಿ ಕೊನೆಯ ಬಾರಿ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿತ್ತು. ಇದಾಗ್ಯೂ 2020 ರಲ್ಲಿ ಪ್ರಿಯಮ್ ಗಾರ್ಗ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಫೈನಲ್ ತಲುಪಿದರೂ ಬಾಂಗ್ಲಾದೇಶ ವಿರುದ್ದ ಸೋಲನುಭವಿಸಿತು.
7 / 7
ಈ ಬಾರಿಯ U19 ವಿಶ್ವಕಪ್ಗಾಗಿ ಭಾರತ ತಂಡ ಹೀಗಿದೆ: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (WK), ಆರಾಧ್ಯ ಯಾದವ್ (WK), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ , ಆರ್ ಎಸ್ ಹಂಗರ್ಗೆಕರ್, ವಾಸು ವತ್ಸ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.