182 ರನ್​ಗಳಿಸಲು 175 ಡಾಟ್ ಬಾಲ್ ಆಡಿದ ಇಂಗ್ಲೆಂಡ್..!

Updated By: ಝಾಹಿರ್ ಯೂಸುಫ್

Updated on: Oct 08, 2025 | 10:53 AM

ICC Womens ODI World Cup 2025: ಮಹಿಳಾ ಏಕದಿನ ವಿಶ್ವಕಪ್​ನ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 178 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಇಂಗ್ಲೆಂಡ್ 46.1 ಓವರ್​ಗಳಲ್ಲಿ ಚೇಸ್ ಮಾಡಿ 4 ವಿಕೆಟ್​ಗಳ ಗೆಲುವು ದಾಖಲಿಸಿದೆ.

1 / 5
ICC Womens ODI World Cup 2025: ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್​ನ 8ನೇ ಪಂದ್ಯವು ಡಾಟ್ ಬಾಲ್​ಗಳಿಂದ ಸುದ್ದಿಯಲ್ಲಿದೆ. ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಮುಖಾಮುಖಿಯಾಗಿತ್ತು.

2 / 5
ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸ್ಕೀವರ್ ಬ್ರಂಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಮಹಿಳಾ ತಂಡದ ಪರ ಶೋಭನಾ ಮೊಸ್ಟರಿ 60 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು 49.4 ಓವರ್​ಗಳಲ್ಲಿ 178 ರನ್​ಗಳಿಸಿ ಆಲೌಟ್ ಆಯಿತು. 

3 / 5
179 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಟ್ಯಾಮಿ ಬ್ಯೂಮೌಂಟ್ 13 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ಆ್ಯಮಿ ಜೋನ್ಸ್ 1 ರನ್​ಗಳಿಸಿ ಔಟಾದರು. ಅಲ್ಲದೆ 69 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

4 / 5
ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಹೀದರ್ ನೈಟ್ 111 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 79 ರನ್ ಬಾರಿಸಿದರು. ಅತ್ತ ಉಳಿದ ಬ್ಯಾಟರ್​ಗಳು ಕೂಡ ರಕ್ಷಣಾತ್ಮಕ ಆಟದೊಂದಿಗೆ ರನ್​ಗಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು ಗುರಿ ತಲುಪಲು ಬರೋಬ್ಬರಿ 277 ಎಸೆತಗಳನ್ನು ಎದುರಿಸಿದರು.

5 / 5
ಕುತೂಹಲಕಾರಿ ವಿಷಯ ಎಂದರೆ 277 ಎಸೆತಗಳಲ್ಲಿ ಇಂಗ್ಲೆಂಡ್ ತಂಡವು ಬರೋಬ್ಬರಿ 175 ಎಸೆತಗಳನ್ನು ಡಾಟ್ ಬಾಲ್ ಆಡಿದ್ದರು. ಅಂದರೆ 179 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮಹಿಳಾ ಬ್ಯಾಟರ್​ಗಳು ಬರೋಬ್ಬರಿ 175 ಎಸೆತಗಳಲ್ಲಿ ಯಾವುದೇ ರನ್​ಗಳಿಸಿರಲಿಲ್ಲ. ಇದಾಗ್ಯೂ ಉಳಿದ  102 ಎಸೆತಗಳಲ್ಲಿ 182 ರನ್ ಬಾರಿಸಿ 4 ವಿಕೆಟ್​ಗಳ ಜಯ ಸಾಧಿಸಿರುವುದು ವಿಶೇಷ.