ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡದ ವಿಶ್ವ ದಾಖಲೆ ಬರೆದ ಆರ್​ಸಿಬಿ ಆಲ್​ರೌಂಡರ್..!

|

Updated on: Feb 27, 2023 | 5:54 PM

ICC Women's T20 World Cup 2023: 2009 ರಿಂದ 2023 ರವರೆಗೆ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಎಲ್ಲಾ 8 ಆವೃತ್ತಿಗಳಲ್ಲಿ ಅವರು ಆಸ್ಟ್ರೇಲಿಯನ್ ತಂಡದ ಸದಸ್ಯರಾಗಿದ್ದಾರೆ.

1 / 5
ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ವನಿತಾ ತಂಡ ವಿಶ್ವ ಕ್ರಿಕೆಟ್​ನಲ್ಲಿ ಹತ್ತು ಹಲವು ದಾಖಲೆ ಮಾಡಿದೆ. ಇದರ ಹೊರತಾಗಿಯೂ ಆಸೀಸ್ ತಂಡದ ಸ್ಟಾರ್​ ಆಲ್​ರೌಂಡರ್ ಎಲ್ಲಿಸ್ ಪೆರ್ರಿ ವಿಶ್ವದ ಯಾವುದೇ ಕ್ರಿಕೆಟಿಗರು ಮಾಡಲಾಗದ ದಾಖಲೆಯನ್ನು ನಿರ್ಮಿಸಿದರು.

2 / 5
ಎಂಟನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಪೆರ್ರಿ ಆರನೇ ಬಾರಿ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದರು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ನೊಂದಿಗೆ ಫೀಲ್ಡಿಂಗ್ ಹೊರತುಪಡಿಸಿ ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಲು ಕೊಡುಗೆ ನೀಡಿದ್ದಾರೆ. ವಿಶ್ವಕಪ್‌ನಲ್ಲಿ ಅವರ ಫೀಲ್ಡಿಂಗ್ ಕೂಡ ಹೆಚ್ಚು ಚರ್ಚೆಗೆ ಒಳಗಾಗಿತ್ತು.

3 / 5
2009 ರಿಂದ 2023 ರವರೆಗೆ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಎಲ್ಲಾ 8 ಆವೃತ್ತಿಗಳಲ್ಲಿ ಅವರು ಆಸ್ಟ್ರೇಲಿಯನ್ ತಂಡದ ಸದಸ್ಯರಾಗಿದ್ದಾರೆ. 18 ನೇ ವಯಸ್ಸಿನಲ್ಲಿ ಪ್ರಾರಂಭವಾದ ಈ ಯಶಸ್ವಿ ಪ್ರಯಾಣವು 32 ನೇ ವಯಸ್ಸಿನಲ್ಲಿಯೂ ಮುಂದುವರಿದಿದೆ. 2010 ರಲ್ಲಿ ಆಸೀಸ್ ತಂಡ ಮೊದಲ ವಿಶ್ವಕಪ್ ಗೆದ್ದಾಗ ತಂಡದ ಆಟಗಾರ್ತಿಯಾಗಿದ್ದ ಪೆರ್ರಿ ಅಂದಿನಿಂದ ತಂಡದೊಂದಿಗೆ 6 ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ್ತಿಯಾಗಿದ್ದಾರೆ.

4 / 5
ಆಟಗಾರ್ತಿಯಾಗಿ ಪೆರ್ರಿ ತನ್ನ ವೃತ್ತಿಜೀವನದಲ್ಲಿ ಎಂಟು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆರು ಟಿ20 ವಿಶ್ವಕಪ್ ಪ್ರಶಸ್ತಿಗಳ ಜೊತೆಗೆ (2010, 2012, 2014, 2018, 2020, 2023), ಅವರು 2013 ಮತ್ತು 2022 ವರ್ಷಗಳಲ್ಲಿ ಏಕದಿನ ವಿಶ್ವ ಚಾಂಪಿಯನ್ ಆದ ಆಸ್ಟ್ರೇಲಿಯನ್ ತಂಡದ ಸದಸ್ಯರಾಗಿದ್ದಾರೆ.

5 / 5
ಅಲ್ಲದೆ ಪೆರ್ರಿ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. ಪೆರ್ರಿ ಒಟ್ಟು 42 ಪಂದ್ಯಗಳನ್ನು ಆಡಿದ್ದಾರೆ. ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ ಆಗಿ ಪೆರಿಯ ದಾಖಲೆಯೂ ಅದ್ಭುತವಾಗಿದೆ. ಅವರು 42 ಪಂದ್ಯಗಳಲ್ಲಿ 26.50 ರ ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ ಮತ್ತು 17.67 ರ ಸರಾಸರಿಯಲ್ಲಿ 40 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.

Published On - 5:54 pm, Mon, 27 February 23