ICC World Cup 2023: ಪಾಕ್ ತಂಡದ ಮತ್ತೊಂದು ಪಂದ್ಯದ ದಿನಾಂಕ ಬದಲಿಸುವಂತೆ ಬಿಸಿಸಿಐಗೆ ಮನವಿ..!
ICC World Cup 2023: ಹಲವು ಬದಲಾವಣೆಗಳ ಬಳಿಕ ಅಂತಿಮವಾಗಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಮತ್ತೊಂದು ಪಂದ್ಯದ ದಿನಾಂಕವನ್ನು ಬದಲಿಸಬೇಕೆಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಕರ ಬಳಿ ಮನವಿ ಇಟ್ಟಿದೆ ಎಂದು ವರದಿಯಾಗಿದೆ.
1 / 7
ಹಲವು ಬದಲಾವಣೆಗಳ ಬಳಿಕ ಅಂತಿಮವಾಗಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಮತ್ತೊಂದು ಪಂದ್ಯದ ದಿನಾಂಕವನ್ನು ಬದಲಿಸಬೇಕೆಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಕರ ಬಳಿ ಮನವಿ ಇಟ್ಟಿದೆ ಎಂದು ವರದಿಯಾಗಿದೆ.
2 / 7
ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯವನ್ನಾಡಲಿವೆ. ಈ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ಕೂಡ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಬೇಕಿದೆ. ಆದರೆ ಇದೀಗ ಆ ಪಂದ್ಯವನ್ನು ಮತ್ತೊಂದು ದಿನ ಆಡಿಸಿ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬೇಡಿಕೆ ಇಟ್ಟಿದೆ.
3 / 7
ವಾಸ್ತವವಾಗಿ ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಭದ್ರತಾ ಏಜೆನ್ಸಿಗಳು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ತಿಳಿಸಿವೆ ಎಂದು ವರದಿಯಾಗಿದೆ.
4 / 7
ಭದ್ರತಾ ಏಜೆನ್ಸಿಗಳ ಈ ನಡೆಗೆ ಕಾರಣವೂ ಇದ್ದು, ಈ ಉಭಯ ತಂಡಗಳ ಅಭ್ಯಾಸ ಪಂದ್ಯ ನಡೆಯುವ ದಿನ ಹೈದರಾಬಾದ್‌ನಲ್ಲಿ ಗಣೇಶ್ ವಿಸರ್ಜನೆ ಮತ್ತು ಮಿಲನ್-ಉನ್-ನಬಿ ಮೆರವಣಿಗೆ ನಡೆಯಲ್ಲಿದೆ. ಹೀಗಾಗಿ ಈ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸಬೇಕಾಗಿರುವುದರಿಂದ ಅಭ್ಯಾಸ ಪಂದ್ಯಕ್ಕೆ ಭದ್ರತೆ ನಿಯೋಜನೆ ಮಾಡುವುದು ಕಷ್ಟಕರವಾಗಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಭದ್ರತಾ ಏಜೆನ್ಸಿಗಳು ಮಾಹಿತಿ ನೀಡಿವೆ.
5 / 7
ಆದ್ದರಿಂದ ಪಾಕಿಸ್ತಾನ-ನ್ಯೂಜಿಲೆಂಡ್ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಬೇಕು ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಐಸಿಸಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ. ಆದರೆ ಸಾಕಷ್ಟು ಬಾರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವ ಐಸಿಸಿ, ಮತ್ತೆ ಈ ಕ್ರಮಕ್ಕೆ ಮುಂದಾಗುವುದು ಅನುಮಾನ ಎನ್ನಲಾಗುತ್ತಿದೆ.
6 / 7
ಈಗಾಗಲೇ ವಿಶ್ವಕಪ್ ವೇಳಾಪಟ್ಟಿಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಅದರ ಪ್ರಕಾರ ಭಾರತ-ಪಾಕಿಸ್ತಾನದ ಪಂದ್ಯ ಸೇರಿದಂತೆ ಒಟ್ಟು 9 ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
7 / 7
ಈ ಮೊದಲು, 2023 ರ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವು ಅಕ್ಟೋಬರ್ 15 ರಂದು ನಡೆಯಬೇಕಿತ್ತು. ಆದರೆ ವೇಳಾಪಟ್ಟಿಯ ಬದಲಾವಣೆಯ ನಂತರ ಈ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14 ರಂದು ನಡೆಸಲು ತೀರ್ಮಾನಿಸಲಾಗಿದೆ.