- Kannada News Photo gallery Cricket photos India vs Pakistan reserve day weather report It's been raining since early morning in Colombo
Asia Cup 2023: ಇಂದು ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ?: ಕೊಲಂಬೊದಲ್ಲಿ ಈಗ ಹವಾಮಾನ ಹೇಗಿದೆ?
India vs Pakistan Colombo Weather Today: ಏಷ್ಯಾಕಪ್ 2023ರ ಭಾರತ-ಪಾಕಿಸ್ತಾನ ನಡುವಣ ಮೀಸಲು ದಿನದ ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಪುನರಾರಂಭಗೊಳ್ಳುತ್ತದೆ. ಆದರೆ, ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಕೊಲಂಬೊದಲ್ಲಿ ಸೋಮವಾರದ ಹವಾಮಾನ ಪ್ರಕಾಶಮಾನವಾಗಿ ಕಾಣುತ್ತಿಲ್ಲ. ಬೆಳಗ್ಗಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ.
Updated on:Sep 11, 2023 | 9:23 AM

ಕೊಲಂಬೊದಲ್ಲಿ ಭಾನುವಾರ ನಿರಂತರ ಮಳೆ ಸುರಿದ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾಕಪ್ 2023 ಸೂಪರ್ 4 ಪಂದ್ಯವು ಸೋಮವಾರದ ಮೀಸಲು ದಿನಕ್ಕೆ ಮುಂದೂಡಲಾಯಿತು. ನಿನ್ನೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 24.1 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.

ಇಂದು ಮೀಸಲು ದಿನದಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಪುನರಾರಂಭಗೊಳ್ಳುತ್ತದೆ. ಆದರೆ, ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಕೊಲಂಬೊದಲ್ಲಿ ಸೋಮವಾರದ ಹವಾಮಾನ ಪ್ರಕಾಶಮಾನವಾಗಿ ಕಾಣುತ್ತಿಲ್ಲ. ಬೆಳಗ್ಗಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ.

ಹವಾಮಾನ ಇಲಾಖೆಯ ಪ್ರಕಾರ, ಇಂದು ಗರಿಷ್ಠ ತಾಪಮಾನವು 30 ಡಿಗ್ರಿ ಮತ್ತು 97 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಪಂದ್ಯವು ಪುನರಾರಂಭಗೊಂಡಾಗ 99 ಪ್ರತಿಶತದಷ್ಟು ಮೋಡ ಕವಿದ ವಾತಾವರಣ ಇರಲಿದೆ. ತೇವಾಂಶವು ಶೇಕಡಾ 81 ರಷ್ಟಿರುತ್ತದೆ ಎಂದು ಹೇಳಲಾಗಿದೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 17.9ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಸಂಜೆ ವೇಳೆಗೆ ಶೇ. 80 ರಷ್ಟು ಮಳೆಯಾಗಲಿದೆ. ನಂತರ ಶೇ. 100 ರಷ್ಟು ಮೋಡ ಕವಿದಿರುತ್ತದೆ. ಆಗಸ್ಟ್-ಸೆಪ್ಟೆಂಬರ್ನಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಇಲ್ಲಿ ಈ ತಿಂಗಳುಗಳಲ್ಲಿ ಯಾವುದೇ ಪಂದ್ಯ ನಡೆಯುವುದಿಲ್ಲ. ಆದರೆ, ಪಾಕ್ಗೆ ತೆರಳಲು ಭಾರತ ಸರ್ಕಾರದ ಅನುಮತಿ ಇಲ್ಲದ ಕಾರಣ ಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ ಆಯೋಜಿಸುವುದು ಅನಿವಾರ್ಯವಾಗಿದ್ದವು.

ಕೊಲಂಬೊದಲ್ಲಿ ಭಾನುವಾರ ಪಂದ್ಯದ ಮಧ್ಯೆ ಮಳೆ ಬಂದ ಕಾರಣ ಸುಮಾರು ನಾಲ್ಕು ಗಂಟೆಗಳ ಕಾಲ ಆಟ ಸ್ಥಗಿತಗೊಳಿಸಲಾಯಿತು. ನಂತರವೂ ಮಳೆ ನಿಲ್ಲದ ಕಾರಣ ಸೋಮವಾರದ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಯಿತು. ಇಂದು ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳಿಂದ ಇನ್ನಿಂಗ್ಸ್ ಅನ್ನು ಪುನರಾರಂಭಿಸಲಿದೆ.

ಇನ್ನು ಭಾರತ-ಪಾಕಿಸ್ತಾನ ನಡುವಣ ಇಂದಿನ ಮೀಸಲು ದಿನದ ಪಂದ್ಯ ಕೂಡ ಮಳೆಯಿಂದ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಇದು ಮೀಸಲು ದಿನದ ಪಂದ್ಯ ಆಗಿರುವುದರಿಂದ ಭಾನುವಾರದ ಪಂದ್ಯದ ರೀತಿಯಲ್ಲೇ ಸಾಗಲಿದೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ, ಬೌಲಿಂಗ್ನಲ್ಲಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವಂತಿಲ್ಲ.

ಭಾನುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಶುರುಮಾಡಿದ ಭಾರತಕ್ಕೆ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ (56) ಹಾಗೂ ಶುಭ್ಮನ್ ಗಿಲ್ (58) ಸ್ಫೋಟಕ ಆರಂಭ ಒದಗಿಸಿ 16.3 ಓವರ್‌ಗಳಲ್ಲಿ 121 ರನ್ಗಳ ಜೊತೆಯಾಟವಾಡಿದರು. ಮೂರನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ 24 ರನ್ ಸೇರಿಸಿದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
Published On - 9:19 am, Mon, 11 September 23



















