ಈ ವಿಚಾರದಲ್ಲಿ ಬುಮ್ರಾ ನನಗಿಂತಲೂ ಬೆಸ್ಟ್ ಎಂದ ಪಾಕ್ ಲೆಜೆಂಡ್ ವಾಸಿಂ ಅಕ್ರಮ್..!

|

Updated on: Oct 30, 2023 | 12:54 PM

Jasprit Bumrah, ICC World Cup 2023: ಲಕ್ನೋದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲ್ ಮಾಡಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಅವರನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹಾಡಿ ಹೊಗಳಿದ್ದಾರೆ.

1 / 8
ಇಂಗ್ಲೆಂಡ್ ವಿರುದ್ಧ 3 ವಿಕೆಟ್ ಉರುಳಿಸಿದ ಜಸ್ಪ್ರೀತ್ ಬುಮ್ರಾ ಅವರನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹಾಡಿ ಹೊಗಳಿದ್ದಾರೆ.

2 / 8
ಲಕ್ನೋದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬುಮ್ರಾ 7 ಓವರ್ ಬೌಲ್ ಮಾಡಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.

3 / 8
ಅದರಲ್ಲೂ ಇಂಗ್ಲೆಂಡ್‌ ಇನ್ನಿಂಗ್ಸ್​ನ 5ನೇ ಓವರ್​ನಲ್ಲಿ ಬುಮ್ರಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ್ದು, ಪಂದ್ಯಕ್ಕೆ ತಿರುವು ನೀಡಿತು.

4 / 8
ಐದನೇ ಓವರ್​ನ 5ನೇ ಎಸೆತದಲ್ಲಿ ಮಲಾನ್​ರನ್ನು ಬೌಲ್ಡ್ ಮಾಡಿದ ಬುಮ್ರಾ, 6ನೇ ಎಸೆತದಲ್ಲಿ ರೂಟ್ ಅವರನ್ನು ಎಲ್​ಬಿ ಬಲೆಗೆ ಬಿಳಿಸಿದರು.

5 / 8
ಇದೀಗ ಬುಮ್ರಾ ಅವರ ಬೌಲಿಂಗ್ ಕ್ಷಮತೆಯನ್ನು ಪಾಕ್ ಲೆಜೆಂಡ್ ವಾಸಿಂ ಅಕ್ರಮ್ ಕೊಂಡಾಡಿದ್ದು, ತನಗಿಂತ ಹೊಸ ಚೆಂಡಿನ ಮೇಲೆ ಬುಮ್ರಾ ನನಗಿಂತ ಉತ್ತಮ ನಿಯಂತ್ರಣ ಹೊಂದಿದ್ದಾರೆ ಎಂದಿದ್ದಾರೆ.

6 / 8
ಬುಮ್ರಾ ಪಸ್ರುತ ಕ್ರಿಕೆಟ್​ನ ಅತ್ಯುತ್ತಮ ಬೌಲರ್ ಎಂದಿರುವ ಅಕ್ರಮ್, ಬುಮ್ರಾ ಬಳಿ ಬೌಲಿಂಗ್​ಗೆ ಬೇಕಾದ ನಿಯಂತ್ರಣ, ವೇಗ, ಎಲ್ಲಾ ರೀತಿಯ ಕೌಶಲ್ಯವಿದೆ ಎಂದಿದ್ದಾರೆ.

7 / 8
ನಾನು ಹೊಸ ಚೆಂಡಿನೊಂದಿಗೆ ಬಲಗೈ ಬ್ಯಾಟರ್‌ಗಳಿಗೆ ಆ ರೀತಿಯ ಔಟ್‌ಸ್ವಿಂಗರ್‌ಗಳನ್ನು ಬೌಲ್ ಮಾಡುವಾಗ ಕೆಲವೊಮ್ಮೆ ನನಗೆ ಚೆಂಡನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹೊಸ ಚೆಂಡಿನಲ್ಲಿ ನನಗಿಂತ ಬುಮ್ರಾ ಉತ್ತಮ ಹಿಡಿತ ಸಾಧಿಸಿದ್ದಾರೆ ಎಂದು ವಾಸಿಂ ಹೇಳಿದ್ದಾರೆ.

8 / 8
ಹೊಸ ಚೆಂಡಿನೊಂದಿಗೆ ಅವರು ಬೌಲಿಂಗ್ ಮಾಡುವ ಲೆಂಗ್ತ್, ಬ್ಯಾಟರ್‌ಗಳಿಗೆ ದ್ವಂದ್ವನ್ನು ಉಂಟುಮಾಡುತ್ತದೆ. ಇದರಿಂದ ಬ್ಯಾಟರ್​ಗಳಿಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.