Rohit Sharma: ನಾಯಕನಾಗಿ ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಹೇಗಿತ್ತು ಗೊತ್ತಾ?
Rohit Sharma, ICC World Cup 2023: ಈ ಪಂದ್ಯದಲ್ಲಿ ನಾಯಕನ ಆಟ ಆಡಿದ ನಾಯಕ ರೋಹಿತ್ ಶರ್ಮಾ 47 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅರ್ಧಶತಕ ವಂಚಿತರಾಗಿರುವ ರೋಹಿತ್, ಬ್ಯಾಟರ್ ಆಗಿ ವಿಶ್ವಕಪ್ ಮುಗಿಸಿದ್ದಾರೆ. ಇನ್ನು ಇಡೀ ಟೂರ್ನಿಯಲ್ಲಿ ರೋಹಿತ್ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ...
1 / 12
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುತ್ತಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿದೆ. ತಂಡದ ಮೂರು ವಿಕೆಟ್ಕಳು 100 ರನ್ಗಳ ಒಳಗೆ ಪತನಗೊಂಡಿವೆ.
2 / 12
ಈ ಪಂದ್ಯದಲ್ಲಿ ನಾಯಕನ ಆಟ ಆಡಿದ ನಾಯಕ ರೋಹಿತ್ ಶರ್ಮಾ 47 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅರ್ಧಶತಕ ವಂಚಿತರಾಗಿರುವ ರೋಹಿತ್, ಬ್ಯಾಟರ್ ಆಗಿ ವಿಶ್ವಕಪ್ ಮುಗಿಸಿದ್ದಾರೆ. ಇನ್ನು ಇಡೀ ಟೂರ್ನಿಯಲ್ಲಿ ರೋಹಿತ್ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ...
3 / 12
ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಆಡಿತ್ತು. ಆ ಪಂದ್ಯದಲ್ಲಿ ರೋಹಿತ್ 6 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
4 / 12
ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಭಾರತ ಎದುರಿಸಿತ್ತು. ಆ ಪಂದ್ಯದಲ್ಲಿ ರೋಹಿತ್ 84 ಎಸೆತಗಳಲ್ಲಿ 131 ರನ್ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಭಾಚಿಕೊಂಡಿದ್ದರು.
5 / 12
ಬದ್ಧವೈರಿ ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ರೋಹಿತ್ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 86 ರನ್ಗಳ ಇನ್ನಿಂಗ್ಸ್ ಆಡಿದ್ದರು.
6 / 12
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 48 ರನ್ಗಳ ಇನ್ನಿಂಗ್ಸ್ ಆಡಿದ್ದ ರೋಹಿತ್ 2 ರನ್ಗಳಿಂದ ಅರ್ಧಶತಕ ವಂಚಿತರಾಗಿದ್ದರೆ, ಈ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು.
7 / 12
ಬಳಿಕ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲೂ ನಾಯಕನ ಆಟ ಆಡಿದ್ದ ರೋಹಿತ್ 40 ಎಸೆತಗಳಲ್ಲಿ 46 ರನ್ಗಳ ಇನ್ನಿಂಗ್ಸ್ ಆಡಿದ್ದರು.
8 / 12
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ನಾಯಕನ ಆಟ ಆಡಿದ್ದ ರೋಹಿತ್ 101 ಎಸೆತಗಳಲ್ಲಿ 87 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದರು. ಇದರೊಂದಿಗೆ 13 ರನ್ಗಳಿಂದ ಶತಕ ಕೂಡ ವಂಚಿತರಾಗಿದ್ದರು.
9 / 12
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಗೆಲುವು ದಾಖಲಿಸಿತ್ತಾದರೂ, ರೋಹಿತ್ ಬ್ಯಾಟ್ ಮಾತ್ರ ಅಬ್ಬರಿಸಲಿಲ್ಲ. ಈ ಪಂದ್ಯದಲ್ಲಿ ರೋಹಿತ್ 4 ರನ್ಗಳಿಗೆ ಸುಸ್ತಾಗಿದ್ದರು.
10 / 12
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮತ್ತೆ ಫಾರ್ಮ್ ಕಂಡುಕೊಂಡ ರೋಹಿತ್ 40 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.
11 / 12
ಅಂತಿಮವಾಗಿ ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ರೋಹಿತ್ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
12 / 12
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿದ್ದ ರೋಹಿತ್ ಮತ್ತೊಮ್ಮೆ 47 ರನ್ಗಳ ಇನ್ನಿಂಗ್ಸ್ ಆಡಿ, ಅರ್ಧಶತಕ ವಂಚಿತರಾಗಿದ್ದರು.
Published On - 4:39 pm, Sun, 19 November 23