AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS Final: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ರೋಹಿತ್ ಶರ್ಮಾ ದುಃಖದ ಮಾತು: ಏನು ಹೇಳಿದ್ರು ನೋಡಿ

Rohit Sharma in post match presentation: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದುಃಖದಲ್ಲಿ ಕೆಲ ಮಾತುಗಳನ್ನು ಹೇಳಿದ್ದಾರೆ.

Vinay Bhat
|

Updated on: Nov 20, 2023 | 7:07 AM

Share
ಮೂರನೇ ಬಾರಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಭಾರತದ ಕನಸು ನುಚ್ಚುನೂರಾಗಿದೆ. ಭಾನುವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ತೋರಿ ಸೋಲುಂಡಿತು.

1 / 7
ಬ್ಯಾಟಿಂಗ್-ಬೌಲಿಂಗ್​ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಲೀಗ್ ಹಂತದಿಂದ ಫೈನಲ್​ವರೆಗೆ ಒಂದೇ ಒಂದು ಸೋಲು ಕಾಣದೆ ಬಂದ ರೋಹಿತ್ ಪಡೆ ಮೋದಿ ಸ್ಟೇಡಿಯಂನಲ್ಲಿನ ಕಠಿಣ ಪಿಚ್​ಗೆ ತಲೆ ಬಾಗಿತು. ಕಾಂಗರೂ ಪಡೆ ಆರನೇ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಿತು.

2 / 7
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದುಃಖದಲ್ಲಿ ಕೆಲ ವಿಚಾರಗಳನ್ನು ಹೇಳಿದ್ದಾರೆ. ಫಲಿತಾಂಶವು ನಾವು ಅಂದುಕೊಂಡಂತೆ ಬರಲಿಲ್ಲ. ನಮ್ಮ ಕಡೆಯಿಂದ ಇನ್ನಷ್ಟು ಉತ್ತಮವಾದ ಪ್ರದರ್ಶನ ಬೇಕಿತ್ತು ಎಂದು ಹೇಳಿದ್ದಾರೆ.

3 / 7
ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ, ಆದರೆ ಗೆಲುವು ಸಾಧ್ಯವಾಗಲಿಲ್ಲ. 20-30 ರನ್‌ಗಳು ಹೆಚ್ಚು ಕಲೆಹಾಕುತ್ತಿದ್ದರೆ ಚೆನ್ನಾಗಿರುತ್ತಿತ್ತು, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟವನ್ನು ಆಡಿದರು. ನಾವು 270-280 ರನ್​ಗಳನ್ನು ಎದುರು ನೋಡುತ್ತಿದ್ದೆವು. ಆದರೆ ನಾವು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದೆವು ಎಂದು ರೋಹಿತ್ ಹೇಳಿದ್ದಾರೆ.

4 / 7
ನೀವು ಬೋರ್ಡ್‌ನಲ್ಲಿ 240 ರನ್‌ಗಳನ್ನು ಹೊಂದಿರುವಾಗ, ಆದಷ್ಟು ಬೇಗ ಎದುರಾಳಿಯ ವಿಕೆಟ್‌ಗಳನ್ನು ಪಡೆಯಲು ಬಯಸುತ್ತೀರಿ. ಆದರೆ ಟ್ರಾವಿಸ್ ಹೆಡ್ ಮತ್ತು ಲ್ಯಾಬುಶೇನ್ ಅವರ ದೊಡ್ಡ ಜೊತೆಯಾಟ ನಮ್ಮನ್ನು ಸಂಪೂರ್ಣವಾಗಿ ಆಟದಿಂದ ಹೊರಗಿಟ್ಟಿತು. ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದೆವು. ಆದರೆ ಚೇಸಿಂಗ್ ವೇಳೆ ಇಲ್ಲಿ ಬ್ಯಾಟ್ ಮಾಡಲು ವಿಕೆಟ್ ಸ್ವಲ್ಪ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ- ರೋಹಿತ್ ಶರ್ಮಾ.

5 / 7
ನಾವು ಬೋರ್ಡ್‌ನಲ್ಲಿ ಸಾಕಷ್ಟು ರನ್‌ಗಳನ್ನು ಹಾಕಲಿಲ್ಲ. ಸೀಮರ್‌ಗಳಿಗೆ ಪಿಚ್ ಸಹಾಯ ಮಾಡುತ್ತಿದೆ ಎಂದಾಗ ನಾವು ಆ 3 ವಿಕೆಟ್‌ಗಳನ್ನು ತೆಗೆದುಕೊಂಡೆವು. ಇನ್ನೊಂದು ವಿಕೆಟ್ ಕೂಡ ಪಡೆಯುವುದರಲ್ಲಿದ್ದೆವು. ಆದರೆ, ಹೆಡ್-ಲ್ಯಾಬುಶೇನ್ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಅವರಿಗೆ ಕ್ರೆಡಿಟ್ ಸಲ್ಲಬೇಕು ಎಂಬುದು ರೋಹಿತ್ ಶರ್ಮಾ ಮಾತು.

6 / 7
ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಭಾರತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲೌಟ್ ಆಯಿತು. ರಾಹುಲ್ 66 ಹಾಗೂ ಕೊಹ್ಲಿ 54 ರನ್ ಗಳಿಸಿದರು. ಆಸ್ಟ್ರೇಲಿಯಾ ಹೆಡ್ ಅವರ 137 ಹಾಗೂ ಲ್ಯಾಬುಶೇನ್ ಅಜೇಯ 58 ರನ್​ಗಳ ನೆರವಿನಿಂದ 43 ಓವರ್​ಗಳಲ್ಲಿ ಜಯ ಸಾಧಿಸಿ ವಿಶ್ವಕಪ್ ಗೆದ್ದಿತು.

7 / 7
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ