‘ಇದಕ್ಕೆ ಟೀಂ ಇಂಡಿಯಾವನ್ನು ಫೇವರೇಟ್ ಎನ್ನುವುದು’; ರೋಹಿತ್ ಪಡೆಯನ್ನು ಹೊಗಳಿದ ಶಾಹಿದ್ ಅಫ್ರಿದಿ
ICC World Cup 2023: ಲಕ್ನೋದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾವನ್ನು ಪಾಕಿಸ್ತಾನದ ಅನುಭವಿ ಆಟಗಾರ ಶಾಹಿದ್ ಅಫ್ರಿದಿ ಶ್ಲಾಘಿಸಿದ್ದಾರೆ.
1 / 6
ಲಕ್ನೋದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾವನ್ನು ಪಾಕಿಸ್ತಾನದ ಅನುಭವಿ ಆಟಗಾರ ಶಾಹಿದ್ ಅಫ್ರಿದಿ ಶ್ಲಾಘಿಸಿದ್ದಾರೆ.
2 / 6
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಫ್ರಿದಿ, ಟೀಂ ಇಂಡಿಯಾ ತುಂಬಾ ಬಲಿಷ್ಠವಾಗಿ ಕಾಣುತ್ತಿದೆ. ಪಂದ್ಯದಲ್ಲಿ ಅಂದುಕೊಂಡಂತೆ ಏನು ನಡೆಯದಿದ್ದರುತಮ್ಮ ಸಾಮರ್ಥ್ಯದ ಮೇಲೆ ಹೇಗೆ ಗಮನಹರಿಸಬೇಕು ಎಂದು ಅವರಿಗೆ ತಿಳಿದಿದೆ.
3 / 6
ತವರಿನಲ್ಲಿ ಇಂತಹ ಐಸಿಸಿ ಟೂರ್ನಿಗಳಲ್ಲಿ 6 ಪಂದ್ಯಗಳಲ್ಲಿ ಆರನ್ನು ಗೆಲ್ಲುವುದು ಕೇಂದ್ರೀಕೃತ ದೈಹಿಕ ಕೆಲಸ ಮತ್ತು ಮಾನಸಿಕ ಶಕ್ತಿಯ ಸಾಕ್ಷಿಯಾಗಿದೆ. ಇದಕ್ಕಾಗಿ ಟೀಂ ಇಂಡಿಯಾವನ್ನು ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಎನ್ನುವುದು ಎಂದಿದ್ದಾರೆ.
4 / 6
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 230 ರನ್ ಕಲೆಹಾಕಿತು. ತಂಡದ ಪರ ನಾಯಕ ರೋಹಿತ್ 87 ರನ್, ಸೂರ್ಯಕುಮಾರ್ ಯಾದವ್ 49 ರನ್‌ಗಳ ಇನ್ನಿಂಗ್ಸ್ ಆಡಿದರು.
5 / 6
ಗೆಲುವಿಗಾಗಿ 230 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟ್ ಆಗಿ ಆರು ಪಂದ್ಯಗಳಲ್ಲಿ ಐದನೇ ಸೋಲು ಅನುಭವಿಸಿತು. ಭಾರತದ ಪರ ಶಮಿ 4 ವಿಕೆಟ್, ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.
6 / 6
ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಗುರುವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಸೊರಗುತ್ತಿರುವ ಇಂಗ್ಲೆಂಡ್ ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.