- Kannada News Photo gallery Cricket photos ICC World Cup 2023 Jasprit Bumrah has better control with the new ball than myself says Wasim Akram
ಈ ವಿಚಾರದಲ್ಲಿ ಬುಮ್ರಾ ನನಗಿಂತಲೂ ಬೆಸ್ಟ್ ಎಂದ ಪಾಕ್ ಲೆಜೆಂಡ್ ವಾಸಿಂ ಅಕ್ರಮ್..!
Jasprit Bumrah, ICC World Cup 2023: ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲ್ ಮಾಡಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಅವರನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹಾಡಿ ಹೊಗಳಿದ್ದಾರೆ.
Updated on: Oct 30, 2023 | 12:54 PM

ಇಂಗ್ಲೆಂಡ್ ವಿರುದ್ಧ 3 ವಿಕೆಟ್ ಉರುಳಿಸಿದ ಜಸ್ಪ್ರೀತ್ ಬುಮ್ರಾ ಅವರನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹಾಡಿ ಹೊಗಳಿದ್ದಾರೆ.

ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ 7 ಓವರ್ ಬೌಲ್ ಮಾಡಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.

ಅದರಲ್ಲೂ ಇಂಗ್ಲೆಂಡ್ ಇನ್ನಿಂಗ್ಸ್ನ 5ನೇ ಓವರ್ನಲ್ಲಿ ಬುಮ್ರಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ್ದು, ಪಂದ್ಯಕ್ಕೆ ತಿರುವು ನೀಡಿತು.

ಐದನೇ ಓವರ್ನ 5ನೇ ಎಸೆತದಲ್ಲಿ ಮಲಾನ್ರನ್ನು ಬೌಲ್ಡ್ ಮಾಡಿದ ಬುಮ್ರಾ, 6ನೇ ಎಸೆತದಲ್ಲಿ ರೂಟ್ ಅವರನ್ನು ಎಲ್ಬಿ ಬಲೆಗೆ ಬಿಳಿಸಿದರು.

ಇದೀಗ ಬುಮ್ರಾ ಅವರ ಬೌಲಿಂಗ್ ಕ್ಷಮತೆಯನ್ನು ಪಾಕ್ ಲೆಜೆಂಡ್ ವಾಸಿಂ ಅಕ್ರಮ್ ಕೊಂಡಾಡಿದ್ದು, ತನಗಿಂತ ಹೊಸ ಚೆಂಡಿನ ಮೇಲೆ ಬುಮ್ರಾ ನನಗಿಂತ ಉತ್ತಮ ನಿಯಂತ್ರಣ ಹೊಂದಿದ್ದಾರೆ ಎಂದಿದ್ದಾರೆ.

ಬುಮ್ರಾ ಪಸ್ರುತ ಕ್ರಿಕೆಟ್ನ ಅತ್ಯುತ್ತಮ ಬೌಲರ್ ಎಂದಿರುವ ಅಕ್ರಮ್, ಬುಮ್ರಾ ಬಳಿ ಬೌಲಿಂಗ್ಗೆ ಬೇಕಾದ ನಿಯಂತ್ರಣ, ವೇಗ, ಎಲ್ಲಾ ರೀತಿಯ ಕೌಶಲ್ಯವಿದೆ ಎಂದಿದ್ದಾರೆ.

ನಾನು ಹೊಸ ಚೆಂಡಿನೊಂದಿಗೆ ಬಲಗೈ ಬ್ಯಾಟರ್‌ಗಳಿಗೆ ಆ ರೀತಿಯ ಔಟ್‌ಸ್ವಿಂಗರ್‌ಗಳನ್ನು ಬೌಲ್ ಮಾಡುವಾಗ ಕೆಲವೊಮ್ಮೆ ನನಗೆ ಚೆಂಡನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹೊಸ ಚೆಂಡಿನಲ್ಲಿ ನನಗಿಂತ ಬುಮ್ರಾ ಉತ್ತಮ ಹಿಡಿತ ಸಾಧಿಸಿದ್ದಾರೆ ಎಂದು ವಾಸಿಂ ಹೇಳಿದ್ದಾರೆ.

ಹೊಸ ಚೆಂಡಿನೊಂದಿಗೆ ಅವರು ಬೌಲಿಂಗ್ ಮಾಡುವ ಲೆಂಗ್ತ್, ಬ್ಯಾಟರ್‌ಗಳಿಗೆ ದ್ವಂದ್ವನ್ನು ಉಂಟುಮಾಡುತ್ತದೆ. ಇದರಿಂದ ಬ್ಯಾಟರ್‌ಗಳಿಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.



















