ICC WTC Points Table: ಆಶಸ್ ಗೆದ್ದ ಆಸೀಸ್; ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ; ಭಾರತದ ಸ್ಥಾನ ಹೀಗಿದೆ
TV9 Web | Updated By: ಪೃಥ್ವಿಶಂಕರ
Updated on:
Jan 16, 2022 | 10:00 PM
ICC WTC Points Table: ಭಾರತ ಇದುವರೆಗೆ 4 ಗೆದ್ದಿದೆ ಆದರೆ 3 ರಲ್ಲಿ ಸೋಲನ್ನು ಎದುರಿಸಬೇಕಾಗಿದೆ ಮತ್ತು 2 ಪಂದ್ಯಗಳು ಡ್ರಾಗೊಂಡಿವೆ. ಅಲ್ಲದೆ, ಅವರ ಖಾತೆಯಲ್ಲಿ 3 ಪೆನಾಲ್ಟಿ ಓವರ್‌ಗಳು ಇರುವುದರಿಂದ PCT ಶೇಕಡಾವಾರು ಕೇವಲ 49.07 ಆಗಿದೆ.
1 / 5
ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನ ನೀಡಿದೆ. ಮೊದಲ ಮೂರು ಪಂದ್ಯಗಳಲ್ಲಿಯೇ ಸರಣಿ ಕೈವಶ ಮಾಡಿಕೊಂಡಿದ್ದ ಆಸ್ಟ್ರೇಲಿಯ ತಂಡ ಐದನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡವನ್ನು 146 ರನ್ ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ವಶಪಡಿಸಿಕೊಂಡರು. ಸಿಡ್ನಿಯಲ್ಲಿಯೂ ಇಂಗ್ಲೆಂಡ್ ಸ್ವಲ್ಪದರಲ್ಲೇ ಸೋಲನ್ನು ತಪ್ಪಿಸಿತು, ಇಲ್ಲದಿದ್ದರೆ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡುತ್ತಿತ್ತು. ಅಲ್ಲದೆ, 4-0 ಅಂತರದ ಗೆಲುವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯ ತಂಡಕ್ಕೆ ಸಾಕಷ್ಟು ಲಾಭ ತಂದಿದೆ.
2 / 5
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಕಳೆದುಕೊಂಡಿಲ್ಲ. 4 ಗೆಲುವುಗಳು ಮತ್ತು ಒಂದು ಡ್ರಾದೊಂದಿಗೆ, ಅವರು 86.66 ಶೇಕಡಾ PCT ಅನ್ನು ಹೊಂದಿದ್ದಾರೆ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ನಂಬರ್ ಒನ್ ಸ್ಥಾನದಲ್ಲಿದೆ ಆದರೆ ಅವರು ಇಲ್ಲಿಯವರೆಗೆ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 2 ಗೆಲುವುಗಳೊಂದಿಗೆ ಅವರ PCT ಶೇಕಡಾ 100 ಆಗಿದೆ.
3 / 5
ಪಾಕಿಸ್ತಾನ ತಂಡವು 3 ಗೆಲುವುಗಳು ಮತ್ತು ಒಂದು ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ, ಅದರ PCT ಶೇಕಡಾ 75 ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ಭಾರತ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ.
4 / 5
ಭಾರತ ಇದುವರೆಗೆ 4 ಗೆದ್ದಿದೆ ಆದರೆ 3 ರಲ್ಲಿ ಸೋಲನ್ನು ಎದುರಿಸಬೇಕಾಗಿದೆ ಮತ್ತು 2 ಪಂದ್ಯಗಳು ಡ್ರಾಗೊಂಡಿವೆ. ಅಲ್ಲದೆ, ಅವರ ಖಾತೆಯಲ್ಲಿ 3 ಪೆನಾಲ್ಟಿ ಓವರ್‌ಗಳು ಇರುವುದರಿಂದ PCT ಶೇಕಡಾವಾರು ಕೇವಲ 49.07 ಆಗಿದೆ.
5 / 5
ಟೆಸ್ಟ್ ಸರಣಿಯಲ್ಲಿ 2-1 ರಲ್ಲಿ ಭಾರತವನ್ನು ಸೋಲಿಸಿದ ನಂತರ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಕಿವೀ ತಂಡವು ಕೇವಲ 33.33 PCT ಶೇಕಡಾವಾರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಕೇವಲ 1 ಗೆಲುವು ಸಾಧಿಸಿದ ಇಂಗ್ಲಿಷ್ ತಂಡದ PCT ಶೇಕಡಾವಾರು ಕೇವಲ 9.25 ಮತ್ತು ಇದು ಕೊನೆಯ ಸಂಖ್ಯೆಯಲ್ಲಿದೆ. ಇಂಗ್ಲೆಂಡ್ ಇದುವರೆಗೆ 6 ಟೆಸ್ಟ್‌ಗಳಲ್ಲಿ ಸೋತಿದ್ದು, 2ರಲ್ಲಿ ಡ್ರಾ ಮಾಡಿಕೊಂಡಿದೆ.