Virat Kohli: ನಾನು ಬೌಲಿಂಗ್ ಮಾಡಿದ್ರೆ, ಕೇವಲ 40 ರನ್​ಗೆ ಆಲೌಟ್ ಆಗ್ತಿದ್ರು: ವಿರಾಟ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: May 15, 2023 | 11:24 PM

IPL 2023 Kannada: 172 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು ಆರ್​ಸಿಬಿ ಬೌಲರ್​ಗಳ ಕರಾರುವಾಕ್ ದಾಳಿಗೆ ತತ್ತರಿಸಿದ್ದರು.

1 / 6
IPL 2023: ಐಪಿಎಲ್​ನ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುಮ್ಮಸ್ಸಿನಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 5 ವಿಕೆಟ್ ನಷ್ಟಕ್ಕೆ 171 ರನ್​ ಕಲೆಹಾಕಿತ್ತು.

2 / 6
172 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು ಆರ್​ಸಿಬಿ ಬೌಲರ್​ಗಳ ಕರಾರುವಾಕ್ ದಾಳಿಗೆ ತತ್ತರಿಸಿದ್ದರು. ಅಲ್ಲದೆ ಆರ್​ಆರ್ ಪಡೆಯು ಕೇವಲ 59 ರನ್​ಗಳಿಗೆ ಆಲೌಟ್​ ಆಗಿ 112 ರನ್​ಗಳಿಂದ ಹೀನಾಯವಾಗಿ ಸೋಲನುಭವಿಸಿತು.

3 / 6
ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ವಿರಾಟ್ ಕೊಹ್ಲಿ ಹೇಳಿದ ವ್ಯಂಗ್ಯಭರಿತ ಮಾತು ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾನೇದ್ರು ಬೌಲಿಂಗ್ ಮಾಡಿದಿದ್ರೆ, ಅವರು (ರಾಜಸ್ಥಾನ್ ರಾಯಲ್ಸ್) ಕೇವಲ 40 ರನ್​ಗೆ ಆಲೌಟ್ ಆಗುತ್ತಿದ್ದರು ಎಂದೇಳಿ ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿರುವುದನ್ನು ಕಾಣಬಹುದು.

4 / 6
ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 13 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್​ಗಳು ಮಾತ್ರ. ಅಲ್ಲದೆ 4 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ.

5 / 6
ಆದರೆ 2012 ರ ಬಳಿಕ ವಿರಾಟ್ ಕೊಹ್ಲಿ ಬೌಲಿಂಗ್​ ಮಾಡುವ ದುಸ್ಸಾಹಸದಿಂದ ತುಸು ದೂರವೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಒಂದೇ ಓವರ್​ನಲ್ಲಿ 31 ರನ್ ನೀಡಿರುವುದು.

6 / 6
ಹೌದು, 2012 ರಲ್ಲಿ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19ನೇ ಓವರ್ ಎಸೆದಿದ್ದರು. ಈ ವೇಳೆ ಸಿಎಸ್​ಕೆ ಆಟಗಾರ ಅಲ್ಬಿ ಮೋರ್ಕೆಲ್ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ ಒಟ್ಟು 31 ರನ್​ ಚಚ್ಚಿದ್ದರು. ಇದಾದ ಬಳಿಕ ಕೇವಲ 2 ಸೀಸನ್​ಗಳಲ್ಲಿ​ (2015, 2016) ಮಾತ್ರ ಕೊಹ್ಲಿ ಬೌಲಿಂಗ್ ಮಾಡಿದ್ದರು.