- Kannada News Photo gallery Cricket photos Kannada News | IPL 2023: LSG to wear jersey similar to Mohun Bagan Jersey
IPL 2023: ವಿಭಿನ್ನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಲಕ್ನೋ ಸೂಪರ್ ಜೈಂಟ್ಸ್
IPL 2023 Kannada: ಕೆಕೆಆರ್ ತಂಡದ ತವರು ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಲಕ್ನೋ ತಂಡ ಜೆರ್ಸಿ ಬದಲಿಸಲು ನಿರ್ಧರಿಸಿರುವುದು ವಿಶೇಷ. ಅಂದರೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಕ್ನೋಗಿಂತ ಕೆಕೆಆರ್ ತಂಡಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ದೊರೆಯಲಿದೆ.
Updated on: May 15, 2023 | 10:56 PM

IPL 2023: ಐಪಿಎಲ್ನ 68ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ವಿಭಿನ್ನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಕೆಕೆಆರ್ ತಂಡದ ತವರು ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಲಕ್ನೋ ತಂಡ ಜೆರ್ಸಿ ಬದಲಿಸಲು ನಿರ್ಧರಿಸಿರುವುದು ವಿಶೇಷ. ಅಂದರೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಕ್ನೋಗಿಂತ ಕೆಕೆಆರ್ ತಂಡಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ದೊರೆಯಲಿದೆ. ಆದರೆ ಈ ಬೆಂಬಲಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಿರ್ಧರಿಸಿದ್ದಾರೆ.

ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಜೆರ್ಸಿ ಬದಲಾವಣೆ. ಅಂದರೆ ಪಶ್ಚಿಮ ಬಂಗಾಳದ ಜನರು ಕ್ರಿಕೆಟ್ ಅನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಫುಟ್ಬಾಲ್ ಅನ್ನು ಪ್ರೀತಿಸುತ್ತಾರೆ. ಅದರಲ್ಲೂ ಬಂಗಾಳದ ಪ್ರತಷ್ಠಿತ ಫುಟ್ಬಾಲ್ ಕ್ಲಬ್ ATK ಮೋಹನ್ ಬಗಾನ್ಗೆ ಅಪಾರ ಅಭಿಮಾನಿಗಳಿದ್ದಾರೆ.

ಇತ್ತ ಮೋಹನ್ ಬಗಾನ್ ಕ್ಲಬ್ನ ಮಾಲೀಕರು ಸಂಜೀವ್ ಗೋಯೆಂಕಾ. ಅಂದರೆ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೋಯೆಂಕಾ ತಂಡಗಳನ್ನು ಹೊಂದಿದ್ದು, ಇದೀಗ ಇದನ್ನೇ ಮಾಸ್ಟರ್ ಸ್ಟ್ರೋಕ್ ಆಗಿ ಬಳಸಿ ಕೊಲ್ಕತ್ತಾ ಅಭಿಮಾನಿಗಳ ಮನಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ.

ಅದರಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಮೋಹನ್ ಬಗಾನ್ ತಂಡದ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರಸ್ತುತ ಇರುವ ಗಾಢ ನೀಲಿ ಜೆರ್ಸಿ ಬದಲಿಗೆ, ಹಸಿರು ಮತ್ತು ಮರೂನ್ ಬಣ್ಣಗಳ ಜೆರ್ಸಿಯಲ್ಲಿ ಎಲ್‌ಎಸ್‌ಜಿ ಈಡನ್ ಗಾರ್ಡನ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಈ ಮೂಲಕ ಮೋಹನ್ ಬಗಾನ್ ಅಭಿಮಾನಿಗಳನ್ನು ಲಕ್ನೋ ಸೂಪರ್ ಜೈಂಟ್ಸ್ನತ್ತ ಸೆಳೆಯುವ ಪ್ಲ್ಯಾನ್ ರೂಪಿಸಿದ್ದಾರೆ ಸಂಜೀವ್ ಗೋಯೆಂಕಾ.
