- Kannada News Photo gallery Cricket photos Kannada News | IPL 2023: Gujarat Titans qualify for playoffs: 2 Teams Out
IPL 2023: ಪ್ಲೇಆಫ್ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್: 2 ತಂಡಗಳು ಔಟ್
IPL 2023 Kannada: ಈ ವಾರದ ಪಂದ್ಯಗಳ ಫಲಿತಾಂಶಗಳು ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ತಂಡಗಳನ್ನು ನಿರ್ಧರಿಸಲಿದೆ. ಹೀಗಾಗಿಯೇ ಮುಂದಿನ ಪಂದ್ಯಗಳಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.
Updated on:May 16, 2023 | 3:01 PM

IPL 2023: ಐಪಿಎಲ್ನ 62ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 34 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹಾರ್ದಿಕ್ ಪಾಂಡ್ಯ ಪಡೆ ಹೊರಹೊಮ್ಮಿದೆ.

ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 9 ಜಯ ಸಾಧಿಸಿರುವ ಗುಜರಾತ್ ಟೈಟಾನ್ಸ್ ತಂಡವು ಒಟ್ಟು 18 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ. ಇನ್ನು ಕೊನೆಯ ಮ್ಯಾಚ್ನಲ್ಲಿ ಸೋತರೂ ಟಾಪ್-2 ನಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಆಡಿರುವ 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್ನಲ್ಲಿ ಮಾತ್ರ ಗೆದ್ದಿರುವ ಎಸ್ಆರ್ಹೆಚ್ ತಂಡವು ಕೊನೆಯ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಕೇವಲ 12 ಅಂಕ ಪಡೆಯಲಿದೆ.

ಇತ್ತ ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ (18 ಅಂಕಗಳು), ಸಿಎಸ್ಕೆ (15 ಅಂಕಗಳು), ಮುಂಬೈ ಇಂಡಿಯನ್ಸ್ (14 ಅಂಕಗಳು) ಹಾಗೂ ಲಕ್ನೋ ಸೂಪರ್ ಜೈಂಟ್ಸ್ 13 ಅಂಕಗಳನ್ನು ಹೊಂದಿರುವ ಕಾರಣ ಕೊನೆಯ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಸನ್ರೈಸರ್ಸ್ಗೆ ಪ್ಲೇಆಫ್ಗೆ ಪ್ರವೇಶಿಸಲಾಗುವುದಿಲ್ಲ.

ಹಾಗೆಯೇ ಇದಕ್ಕೂ ಮುನ್ನ 12 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿತ್ತು. ಇದೀಗ ಅಂತಿಮ ಸುತ್ತಿಗೆ ಪ್ರವೇಶಿಸುವ ಪಟ್ಟಿಯಿಂದ ಹೊರಬಿದ್ದ 2ನೇ ತಂಡವಾಗಿ ಸನ್ರೈಸರ್ಸ್ ಹೈದರಾಬಾದ್ ಗುರುತಿಸಿಕೊಂಡಿದೆ.

ಇದಾಗ್ಯೂ ಅಂಕಪಟ್ಟಿಯಲ್ಲಿ 2ನೇ, 3ನೇ ಹಾಗೂ 4ನೇ ಸ್ಥಾನಕ್ಕಾಗಿ 7 ತಂಡಗಳ ನಡುವೆ ಪೈಪೋಟಿ ಇದೆ. ಇದರಲ್ಲಿ ಸಿಎಸ್ಕೆ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ನಡುವೆ ನೇರ ಪೈಪೋಟಿ ಇರುವುದು ವಿಶೇಷ.

ಇನ್ನು ಈ ವಾರದ ಪಂದ್ಯಗಳ ಫಲಿತಾಂಶಗಳು ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ತಂಡಗಳನ್ನು ನಿರ್ಧರಿಸಲಿದೆ. ಹೀಗಾಗಿಯೇ ಮುಂದಿನ ಪಂದ್ಯಗಳಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.
Published On - 2:56 pm, Tue, 16 May 23









