ನ್ಯೂಝಿಲೆಂಡ್ ಗೆದ್ದರೆ ಭಾರತ ಸೆಮೀಸ್​ಗೆ, ಪಾಕಿಸ್ತಾನ್ ಮನೆಗೆ..!

|

Updated on: Feb 24, 2025 | 8:34 AM

India vs Pakistan: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಭಾನುವಾರ (ಫೆ.23) ಪಾಕಿಸ್ತಾನ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

1 / 6
ಚಾಂಪಿಯನ್ಸ್ ಟ್ರೋಫಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಟೀಮ್ ಇಂಡಿಯಾ ಆಡಿದ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ ಎರಡೂ ಮ್ಯಾಚ್​ಗಳಲ್ಲೂ ಮುಗ್ಗರಿಸಿದೆ. ಪರಿಣಾಮ ಪಾಕಿಸ್ತಾನ್ ತಂಡ ಟೂರ್ನಿಯಿಂದಲೇ ಹೊರಬೀಳುವ ಹೊಸ್ತಿಲಲ್ಲಿದ್ದರೆ, ಭಾರತ ತಂಡವು ಸೆಮಿಫೈನಲ್​ಗೇರುವ ಸನಿಹದಲ್ಲಿದೆ.

2 / 6
ಅದರಂತೆ ಇಂದು (ಫೆ.24) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯವು ಟೀಮ್ ಇಂಡಿಯಾದ ಸೆಮಿಫೈನಲ್​ ಹಾಗೂ ಪಾಕಿಸ್ತಾನ್​ ತಂಡದ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯವನ್ನು ನಿರ್ಧರಿಸಲಿದೆ. ಅಂದರೆ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ, ಭಾರತ ತಂಡ ಸೆಮಿಫೈನಲ್​ಗೇರುವುದು ಖಚಿತವಾಗಲಿದೆ.

3 / 6
ಏಕೆಂದರೆ ಭಾರತ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇದೀಗ ನ್ಯೂಝಿಲೆಂಡ್ ಕೂಡ 4 ಪಾಯಿಂಟ್ಸ್ ಪಡೆದರೆ ಉಭಯ ತಂಡಗಳು ಗ್ರೂಪ್-ಎ ನಿಂದ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿರುವುದು ಖಚಿತವಾಗಲಿದೆ. ಅತ್ತ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

4 / 6
ಇದಾಗ್ಯೂ ಮಾರ್ಚ್ 2 ರಂದು ಭಾರತ ಮತ್ತು ನ್ಯೂಝಿಲೆಂಡ್ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶ ಏನೇ ಹಾಗಿದ್ದರೂ ಟೀಮ್ ಇಂಡಿಯಾ ಮಾರ್ಚ್ 4 ರಂದು ಸೆಮಿಫೈನಲ್​ ಆಡುವುದು ಬಹುತೇಕ ಖಚಿತ.

5 / 6
ಏಕೆಂದರೆ ಮೊದಲ ಸೆಮಿಫೈನಲ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದ್ದು, ಅದರಂತೆ ಈ ಪಂದ್ಯದಲ್ಲಿ ಒಂದು ಕಡೆ ಭಾರತ ತಂಡ ಕಾಣಿಸಿಕೊಳ್ಳಲಿದೆ ಎನ್ನಬಹುದು. ಇನ್ನು ಟೀಮ್ ಇಂಡಿಯಾಗೆ ಎದುರಾಳಿಯಾಗಿ ಗ್ರೂಪ್-ಬಿ ನಲ್ಲಿರುವ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ್ ತಂಡ ಕಣಕ್ಕಿಳಿಯಲಿದೆ.

6 / 6
ಅದರಂತೆ ಮಾರ್ಚ್ 4 ಮತ್ತು ಮಾರ್ಚ್ 5 ರಂದು ನಡೆಯಲಿರುವ ಸೆಮಿಫೈನಲ್​ನಲ್ಲಿ ಕಣಕ್ಕಿಳಿಯಲಿರುವ ತಂಡಗಳಾವುವು ಎಂಬುದರ ಸ್ಪಷ್ಟ ಚಿತ್ರಣ ಶುಕ್ರವಾರ ಹೊರಬೀಳುವುದು ಖಚಿತ. ಇನ್ನು ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದ್ದು, ಟೀಮ್ ಇಂಡಿಯಾ ಫೈನಲ್​ಗೇರಿದರೆ ಅಂತಿಮ ಹಣಾಹಣಿ ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಜರುಗಲಿದೆ.

Published On - 7:32 am, Mon, 24 February 25