Robin Uthappa: ಟಿ20 ಲೀಗ್​ಗೆ ರಾಬಿನ್ ಉತ್ತಪ್ಪ ರಿ ಎಂಟ್ರಿ..!

| Updated By: ಝಾಹಿರ್ ಯೂಸುಫ್

Updated on: Dec 25, 2022 | 8:31 PM

ILT20: ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ. ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಂಐ ಎಮಿರೇಟ್ಸ್ ತಂಡ​), ಅದಾನಿ ಸ್ಪೋರ್ಟ್ಸ್‌ಲೈನ್ (ಗಲ್ಫ್ ಜೈಂಟ್ಸ್ ತಂಡ​), ಕೋಲ್ಕತ್ತಾ ನೈಟ್ ರೈಡರ್ಸ್ (ಅಬುಧಾಬಿ ನೈಟ್ ರೈಡರ್ಸ್​ ತಂಡ) ಟೀಮ್​ಗಳನ್ನು ಖರೀದಿಸಿದೆ.

1 / 6
ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸೆಪ್ಟೆಂಬರ್​ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಅದರಲ್ಲೂ ಕಳೆದ ಸೀಸನ್​​ನಲ್ಲಿ ಸಿಎಸ್​ಕೆ ಪರ ಅತ್ಯುತ್ತಮವಾಗಿ ಆಡಿದ್ದ ಕೊಡಗಿನ ಕುವರ ಐಪಿಎಲ್​ಗೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.

2 / 6
ಐಪಿಎಲ್​ಗೆ ನಿವೃತ್ತಿ ನೀಡಿದ ಬೆನ್ನಲ್ಲೇ ಕಾಮೆಂಟೇಟರ್​ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದ ರಾಬಿನ್ ಉತ್ತಪ್ಪ ಇದೀಗ ಮತ್ತೆ ಟಿ20 ಲೀಗ್​ಗೆ ಮರಳಿದ್ದಾರೆ. ಅದು ಕೂಡ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಮೂಲಕ ಎಂಬುದು ವಿಶೇಷ.

3 / 6
ಯುಎಇನಲ್ಲಿ ಜನವರಿ 13 ರಿಂದ ಶುರುವಾಗಲಿರುವ ಇಂಟರ್​ನ್ಯಾಷನಲ್ ಟಿ20 ಲೀಗ್​ನಲ್ಲಿ ರಾಬಿನ್ ಉತ್ತಪ್ಪ ದುಬೈ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕತ್ವದ ಈ ತಂಡದ ಪರ ಆಡಲು ಕರ್ನಾಟಕದ ಆಟಗಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ರಾಬಿನ್ ಉತ್ತಪ್ಪ ಮರಳುತ್ತಿರುವುದು ಖಚಿತವಾಗಿದೆ.

4 / 6
ಈ ಬಗ್ಗೆ ಮಾತನಾಡಿರುವ ರಾಬಿನ್, ನಾನು ಐಪಿಎಲ್ ಆಡುತ್ತಿರುವಾಗಲೇ ವಿದೇಶಿ ಲೀಗ್​ನಲ್ಲಿ ಆಡಬೇಕೆಂದು ಬಯಸಿದ್ದೆ. ಆದರೆ ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಆಟಗಾರರು ಒಪ್ಪಂದ ಕೊನೆಗೊಳಿಸದೇ ವಿದೇಶಿ ಲೀಗ್​ನಲ್ಲಿ ಆಡುವಂತಿರಲಿಲ್ಲ. ಇದೀಗ ನಿವೃತ್ತಿಯಾಗಿರುವ ಕಾರಣ ನನಗೆ ಫಾರಿನ್ ಲೀಗ್ ಆಡಲು ಅನುಮತಿ ಸಿಕ್ಕಿದೆ. ಹೀಗಾಗಿ ಭವಿಷ್ಯದಲ್ಲಿ ದಿ ಹಂಡ್ರೆಡ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಬಿಗ್ ಬ್ಯಾಷ್ ಲೀಗ್‌ನಂತಹ ಇತರ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಉತ್ತಪ್ಪ ತಿಳಿಸಿದ್ದಾರೆ.

5 / 6
ಐಪಿಎಲ್​ನಲ್ಲಿ ಆರ್​ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್​, ಸಿಎಸ್​ಕೆ ಪರ ಒಟ್ಟು 205 ಪಂದ್ಯಗಳನ್ನಾಡಿರುವ ಉತ್ತಪ್ಪ 27 ಅರ್ಧಶತಕದೊಂದಿಗೆ 4952 ರನ್​ ಕಲೆಹಾಕಿದ್ದಾರೆ. ವಿಶೇಷ ಎಂದರೆ ಕೆಕೆಆರ್ 2014 ರಲ್ಲಿ ಚಾಂಪಿಯನ್ ಆಗಿದ್ದ ವೇಳೆ ಉತ್ತಪ್ಪ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಆದರೆ ಇದೇ ವರ್ಷ ಸೆಪ್ಟೆಂಬರ್​ನಲ್ಲಿ ನಿವೃತ್ತಿ ಘೋಷಿಸಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಇದೀಗ ತಿಂಗಳುಗಳ ಅಂತರದಲ್ಲಿ ಮನಸು ಬದಲಿಸಿ ಹೊಸ ಲೀಗ್​ನಲ್ಲಿ ಬ್ಯಾಟ್ ಬೀಸಲು ಮುಂದಾಗಿರುವುದು ವಿಶೇಷ.

6 / 6
ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ. ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಂಐ ಎಮಿರೇಟ್ಸ್ ತಂಡ​), ಅದಾನಿ ಸ್ಪೋರ್ಟ್ಸ್‌ಲೈನ್ (ಗಲ್ಫ್ ಜೈಂಟ್ಸ್ ತಂಡ​), ಕೋಲ್ಕತ್ತಾ ನೈಟ್ ರೈಡರ್ಸ್ (ಅಬುಧಾಬಿ ನೈಟ್ ರೈಡರ್ಸ್​ ತಂಡ) ಲ್ಯಾನ್ಸರ್ ಕ್ಯಾಪಿಟಲ್ (ಡಿಸರ್ಟ್ ವೈಪರ್ಸ್​), ಜಿಎಂಆರ್ ಗ್ರೂಪ್ (ದುಬೈ ಕ್ಯಾಪಿಟಲ್ಸ್​) ಮತ್ತು ಕ್ಯಾಪ್ರಿ ಗ್ಲೋಬಲ್ (ಶಾರ್ಜಾ ವಾರಿಯರ್ಸ್ ತಂಡ​) ಕಂಪೆನಿಗಳು ಖರೀದಿಸಿದೆ. ಹೀಗಾಗಿ ಐಪಿಎಲ್​ ಬಳಿಕ ಇಂಟರ್​ನ್ಯಾಷನಲ್​ ಟಿ20 ಲೀಗ್ ವಿಶ್ವದ ಅತ್ಯುತ್ತಮ ಲೀಗ್ ಆಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.