ILT20: ಸ್ಪೋಟಕ ಶತಕ: ಟಾಮ್ ಬಿರುಗಾಳಿ ಬ್ಯಾಟಿಂಗ್ಗೆ ನಲುಗಿದ ಕ್ಯಾಪಿಟಲ್ಸ್
TV9 Web | Updated By: ಝಾಹಿರ್ ಯೂಸುಫ್
Updated on:
Jan 22, 2023 | 3:56 PM
Tom Kohler-Cadmore: 19 ಎಸೆತಗಳಲ್ಲಿ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಟಾಮ್ ದುಬೈ ಕ್ಯಾಪಿಟಲ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
1 / 5
ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಯುವ ಬ್ಯಾಟರ್ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಅಬ್ಬರದ ಶತಕದೊಂದಿಗೆ ಶಾರ್ಜಾ ವಾರಿಯರ್ಸ್ ತಂಡಕ್ಕೆ ಜಯ ತಂದುಕೊಟ್ಟಿರುವುದು ವಿಶೇಷ.
2 / 5
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದುಬೈ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಜೋ ರೂಟ್ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಅಜೇಯ 80 ರನ್ ಬಾರಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ 27 ಎಸೆತಗಳಲ್ಲಿ 44 ರನ್ ಬಾರಿಸುವ ಮೂಲಕ ರೋವ್ಮನ್ ಪೊವೆಲ್ ನಿಗದಿತ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 177 ಕ್ಕೆ ತಂದು ನಿಲ್ಲಿಸಿದರು.
3 / 5
178 ರನ್ಗಳ ಕಠಿಣ ಗುರಿ ಪಡೆದ ಶಾರ್ಜಾ ವಾರಿಯರ್ಸ್ ಪರ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಹಾಗೂ ರಹಮನುಲ್ಲಾ ಗುರ್ಬಾಜ್ ಉತ್ತಮ ಆರಂಭ ಒದಗಿಸಿದ್ದರು. 3.3 ಓವರ್ಗಳಲ್ಲಿ 47 ರನ್ಗಳ ಜೊತೆಯಾಟವಾಡಿದ ಗುರ್ಬಾಜ್ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಟಾಮ್ ಆರ್ಭಟ ಮುಂದುವರೆಸಿದರು. ಪರಿಣಾಮ....
4 / 5
19 ಎಸೆತಗಳಲ್ಲಿ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಟಾಮ್ ದುಬೈ ಕ್ಯಾಪಿಟಲ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅದರಂತೆ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು.
5 / 5
ಅಷ್ಟರಲ್ಲಾಗಲೇ ಶಾರ್ಜಾ ವಾರಿಯರ್ಸ್ ತಂಡವು ಗೆಲುವಿನ ಸಮೀಪಕ್ಕೆ ತಲುಪಿತ್ತು. ಇನ್ನು ಅಜೇಯರಾಗಿ ಉಳಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ 106 ರನ್ ಚಚ್ಚಿದರು. ಈ ಮೂಲಕ 14.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ತಲುಪಿಸಿ ಭರ್ಜರಿ ತಂದುಕೊಟ್ಟರು. ವಿಶೇಷ ಎಂದರೆ ಇದು 4 ಪಂದ್ಯಗಳನ್ನಾಡಿರುವ ಶಾರ್ಜಾ ವಾರಿಯರ್ಸ್ ತಂಡದ ಮೊದಲ ಗೆಲುವಾಗಿದೆ. ಇನ್ನು ಅಮೋಘ ಶತಕ ಸಿಡಿಸಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Published On - 3:56 pm, Sun, 22 January 23