Virat Kohli: ಕಂಬ್ಯಾಕ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮುಂದಿದೆ 3 ದಾಖಲೆಗಳು
TV9 Web | Updated By: ಝಾಹಿರ್ ಯೂಸುಫ್
Updated on:
Jan 13, 2024 | 2:40 PM
Virat Kohli Records: ಅಫ್ಘಾನಿಸ್ತಾನ್ ವಿರುದ್ಧದ 2ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 14 ತಿಂಗಳುಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಈ ಕಂಬ್ಯಾಕ್ ಪಂದ್ಯದಲ್ಲೇ 3 ದಾಖಲೆಗಳನ್ನು ನಿರ್ಮಿಸುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ.
1 / 6
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 2ನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಇಂದೋರ್ನಲ್ಲಿ ಜರುಗಲಿರುವ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) ಟಿ20 ಕ್ರಿಕೆಟ್ಗೆ ಕಂಬ್ಯಾಕ್ ಮಾಡಲಿದ್ದಾರೆ. ಅಂದರೆ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದರು.
2 / 6
ಇದೀಗ 2ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 14 ತಿಂಗಳುಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಈ ಕಂಬ್ಯಾಕ್ ಪಂದ್ಯದಲ್ಲೇ 3 ದಾಖಲೆಗಳನ್ನು ನಿರ್ಮಿಸುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...
3 / 6
1- ರನ್ ಸರದಾರ: ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 35 ರನ್ಗಳ ಅವಶ್ಯಕತೆಯಿದೆ. ಸದ್ಯ 11965 ರನ್ ಬಾರಿಸಿರುವ ಕೊಹ್ಲಿ ಅಫ್ಘಾನಿಸ್ತಾನ್ ವಿರುದ್ಧ 35 ರನ್ ಕಲೆಹಾಕಿದರೆ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
4 / 6
2- ಅರ್ಧಶತಕಗಳ ದಾಖಲೆ: ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್ನಲ್ಲಿ 100 ಬಾರಿ 50+ ಸ್ಕೋರ್ಗಳಿಸಿದ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
5 / 6
3- ಎಸೆತಗಳ ದಾಖಲೆ: ಟಿ20 ಕ್ರಿಕೆಟ್ನಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ದಾಖಲೆ ನಿರ್ಮಿಸುವ ಅವಕಾಶ ಕೂಡ ವಿರಾಟ್ ಕೊಹ್ಲಿ ಮುಂದಿದೆ. ಅಫ್ಘಾನಿಸ್ತಾನ್ ವಿರುದ್ಧ 28 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ ಟಿ20ಯಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
6 / 6
ಒಟ್ಟಿನಲ್ಲಿ ಕಂಬ್ಯಾಕ್ ಪಂದ್ಯದಲ್ಲಿ 3 ವಿಶೇಷ ದಾಖಲೆ ಬರೆಯುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ. ಈ ಮೂರು ದಾಖಲೆಗಳಲ್ಲಿ ವಿರಾಟ್ ಕೊಹ್ಲಿ ಯಾವ ಮೈಲುಗಲ್ಲನ್ನು ಮೊದಲು ದಾಟಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.