IND vs AUS 2nd Test: 4 ಪ್ರಮುಖ ಬದಲಾವಣೆ: ಆಸ್ಟ್ರೇಲಿಯಾ ತಂಡದ ಮಾಸ್ಟರ್ ಪ್ಲ್ಯಾನ್
TV9 Web | Updated By: ಝಾಹಿರ್ ಯೂಸುಫ್
Updated on:
Feb 13, 2023 | 3:29 PM
India vs Australia 2nd Test: ಈ ನಾಲ್ಕು ಪ್ರಮುಖ ಬದಲಾವಣೆಯೊಂದಿಗೆ ಆಸ್ಟ್ರೇಲಿಯಾ ತಂಡವು ದೆಹಲಿಯಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ 2ನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು 1-1 ಅಂತರದಿಂದ ಸಮಗೊಳಿಸುವ ಇರಾದೆಯಲ್ಲಿದೆ.
1 / 6
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 132 ರನ್ಗಳಿಂದ ಹೀನಾಯವಾಗಿ ಸೋತಿರುವ ಆಸೀಸ್ ಬಳಗವು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
2 / 6
ನಾಲ್ಕು ಪಂದ್ಯಗಳ ಈ ಸರಣಿಯ 2ನೇ ಮ್ಯಾಚ್ನಲ್ಲಿ ಪ್ಯಾಟ್ ಕಮಿನ್ಸ್ ಬಳಗವು ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸಬಹುದು. ಒಂದು ವೇಳೆ ಟೀಮ್ ಇಂಡಿಯಾ ಗೆದ್ದರೆ ಸರಣಿ ಗೆಲ್ಲುವ ಅವಕಾಶ ಭಾರತದ ಪಾಲಿಗೆ ಹೆಚ್ಚಾಗಲಿದೆ. ಹೀಗಾಗಿಯೇ 2ನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸಿದೆ.
3 / 6
ಇದಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲೂ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಅಂದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ 4 ಆಟಗಾರರನ್ನು 2ನೇ ಪಂದ್ಯದಿಂದ ಕೈ ಬಿಡುವ ಸಾಧ್ಯತೆಯಿದೆ. ಅದರಂತೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಯನ್ನೂ ಕೂಡ ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ. ಹಾಗೆಯೇ ರೆನ್‌ಶಾ ಹಾಗೂ ಹ್ಯಾಂಡ್ಸ್‌ಕಾಂಬ್ ಕೂಡ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಇದಲ್ಲದೆ ಬೋಲ್ಯಾಂಡ್ಗೂ ದೆಹಲಿ ಟೆಸ್ಟ್ನಲ್ಲಿ ಅವಕಾಶ ಸಿಗುವುದಿಲ್ಲ.
4 / 6
ಇಲ್ಲಿ ಅಲೆಕ್ಸ್ ಕ್ಯಾರಿ ಬದಲಿಗೆ ಟ್ರಾವಿಡ್ ಹೆಡ್ ಅವರನ್ನು ಕಣಕ್ಕಿಳಿಸಲು ಆಸ್ಟ್ರೇಲಿಯಾ ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಡೇವಿಡ್ ವಾರ್ನರ್ಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಚಿಂತಿಸಿದೆ. ಇನ್ನು ಹ್ಯಾಂಡ್ಸ್‌ಕಾಂಬ್ ಬದಲಿಗೆ ಕ್ರಿಸ್ ಗ್ರೀನ್, ರೆನ್‌ಶಾ ಬದಲಿಗೆ ಕುಹ್ನೆಮನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಬೋಲ್ಯಾಂಡ್ ಬದಲಿಗೆ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
5 / 6
ಈ ನಾಲ್ಕು ಪ್ರಮುಖ ಬದಲಾವಣೆಯೊಂದಿಗೆ ಆಸ್ಟ್ರೇಲಿಯಾ ತಂಡವು ದೆಹಲಿಯಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ 2ನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು 1-1 ಅಂತರದಿಂದ ಸಮಗೊಳಿಸುವ ಇರಾದೆಯಲ್ಲಿದೆ.
6 / 6
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್ , ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್, ಮ್ಯಾಟ್ ಕುಹ್ನೆಮನ್.