Updated on:Feb 13, 2023 | 4:13 PM
ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1.70 ಕೋಟಿಗೆ ಖರೀದಿಸಿದೆ.
ಆಸ್ಟ್ರೇಲಿಯಾದ ಈ ಆಲ್‌ರೌಂಡರ್‌ಗೆ 134 ಟಿ20 ಪಂದ್ಯಗಳಲ್ಲಿ ಆಡಿದ ಅನುಭವವಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಎಲ್ಲಿಸ್ ಪೆರ್ರಿ 31.56 ಸರಾಸರಿಯಲ್ಲಿ 1515 ರನ್ ಬಾರಿಸಿದ್ದಾರೆ.
ಹಾಗಯೇ ಬೌಲಿಂಗ್ನಲ್ಲೂ ಮಿಂಚಿರುವ ಎಲ್ಲಿಸ್ ಪೆರ್ರಿ 134 ಪಂದ್ಯಗಳಲ್ಲಿ 120 ವಿಕೆಟ್‌ಗಳನ್ನು ಪಡೆದಿದ್ದಾರೆ.
WBBL ನಲ್ಲಿಯೂ ಆಡಿರುವ ಎಲ್ಲಿಸ್ ಪೆರ್ರಿ ಸುಮಾರು 50 ರ ಸರಾಸರಿಯಲ್ಲಿ 3768 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಹೊರತಾಗಿ ಅವರು 51 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಮಥ್ಯ್ರ ಹೊಂದಿರುವ ಎಲ್ಲಿಸ್ ಪೆರ್ರಿ, ಡೆತ್ ಓವರ್‌ಗಳಲ್ಲಿ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಇದೇ ಕಾರಣಕ್ಕೆ ಪೆರ್ರಿ ಅವರನ್ನು ಉತ್ತಮ ಬೆಲೆಗೆ ಆರ್ಸಿಬಿ ಖರೀದಿಸಿದೆ.
Published On - 4:09 pm, Mon, 13 February 23