ಹೊಸ ಮೈಲುಗಲ್ಲಿನತ್ತ ಪೂಜಾರ: ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 12 ಆಟಗಾರರು ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Feb 16, 2023 | 8:30 PM
India vs Australia 2nd Test: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 13ನೇ ಆಟಗಾರನಾಗಿ ಚೇತೇಶ್ವರ ಪೂಜಾರ ಹೊರಹೊಮ್ಮಲ್ಲಿದ್ದಾರೆ.
1 / 16
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಪಾಲಿಗೆ ತುಂಬಾ ವಿಶೇಷವಾದದ್ದು.
2 / 16
ಏಕೆಂದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ದಾಖಲೆಯನ್ನು ಚೇತೇಶ್ವರ ಪೂಜಾರ ಬರೆಯಲಿದ್ದಾರೆ. ಇದುವರೆಗೆ 99 ಟೆಸ್ಟ್ ಪಂದ್ಯಗಳಲ್ಲಿ 169 ಇನಿಂಗ್ಸ್ ಆಡಿರುವ ಪೂಜಾರ ಒಟ್ಟು 7021 ರನ್ ಕಲೆಹಾಕಿದ್ದಾರೆ. ಈ ವೇಳೆ 19 ಶತಕ ಹಾಗೂ 34 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.
3 / 16
ಇದೀಗ 100ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿರುವ ಪೂಜಾರ ದೆಹಲಿ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ನೂರು ಪಂದ್ಯಗಳನ್ನಾಡಿದ 13ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
4 / 16
1- ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಪರ ಅತ್ಯಧಿಕ ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ. ಒಟ್ಟು 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ 51 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 15921 ರನ್ ಕಲೆಹಾಕಿದ್ದಾರೆ.
5 / 16
2- ರಾಹುಲ್ ದ್ರಾವಿಡ್: ಟೀಮ್ ಇಂಡಿಯಾದ ಗೋಡೆ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ 163 ಟೆಸ್ಟ್ ಪಂದ್ಯಗಳಿಂದ ಒಟ್ಟು 13265 ರನ್ ಕಲೆಹಾಕಿದ್ದಾರೆ. ಈ ವೇಳೆ 36 ಶತಕ ಹಾಗೂ 63 ಅರ್ಧಶತಕ ಬಾರಿಸಿದ್ದರು.
6 / 16
3- ವಿವಿಎಸ್ ಲಕ್ಷ್ಮಣ್: ಭಾರತ ತಂಡದ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 17 ಶತಕಗಳೊಂದಿಗೆ ಒಟ್ಟು 8781 ರನ್ ಕಲೆಹಾಕಿದ್ದರು.
7 / 16
4- ಅನಿಲ್ ಕುಂಬ್ಳೆ: ಟೀಮ್ ಇಂಡಿಯಾದ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಿಂದ ಒಟ್ಟು 619 ವಿಕೆಟ್ ಕಬಳಿಸಿ ಮಿಂಚಿದ್ದರು.
8 / 16
5- ಕಪಿಲ್ ದೇವ್: ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಶತಕದೊಂದಿಗೆ 5248 ರನ್ ಕಲೆಹಾಕಿದ್ದರು. ಹಾಗೆಯೇ ಬೌಲಿಂಗ್ನಲ್ಲಿ 434 ವಿಕೆಟ್ ಪಡೆದಿದ್ದರು.
9 / 16
6- ಸುನೀಲ್ ಗವಾಸ್ಕರ್: ಲಿಟಲ್ ಮಾಸ್ಟರ್ ಖ್ಯಾತಿಯ ಸುನೀಲ್ ಗವಾಸ್ಕರ್ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಆಟಗಾರ. ಒಟ್ಟು 125 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಗವಾಸ್ಕರ್ 34 ಶತಕ ಹಾಗೂ 45 ಅರ್ಧಶತಕಗಳೊಂದಿಗೆ ಒಟ್ಟು 10122 ರನ್ ಕಲೆಹಾಕಿದ್ದರು.
10 / 16
7- ದಿಲೀಪ್ ವೆಂಗ್ಸರ್ಕಾರ್: ಭಾರತದ ಪರ 116 ಟೆಸ್ಟ್ ಪಂದ್ಯಗಳನ್ನಾಡಿರುವ ದಿಲೀಪ್ ವೆಂಗ್ಸರ್ಕಾರ್ ಅವರು 17 ಶತಕಗಳೊಂದಿಗೆ 6868 ರನ್ ಬಾರಿಸಿದ್ದಾರೆ.
11 / 16
8- ಸೌರವ್ ಗಂಗೂಲಿ: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಒಟ್ಟು 113 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 16 ಶತಕಗಳೊಂದಿಗೆ 7212 ರನ್ ಕಲೆಹಾಕಿದ್ದಾರೆ.
12 / 16
9- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡ 100 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ಸಾಧನೆ ಮಾಡಿದ್ದಾರೆ. ಇದುವರೆಗೆ 105 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 27 ಶತಕ ಹಾಗೂ 28 ಅರ್ಧಶತಕಗಳೊಂದಿಗೆ 8131 ರನ್ ಕಲೆಹಾಕಿದ್ದಾರೆ.
13 / 16
10- ಇಶಾಂತ್ ಶರ್ಮಾ: ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಕೂಡ 100 ಟೆಸ್ಟ್ ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ. ಒಟ್ಟು 105 ಪಂದ್ಯಗಳನ್ನಾಡಿರುವ ಇಶಾಂತ್ 311 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
14 / 16
11- ಹರ್ಭಜನ್ ಸಿಂಗ್: ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಒಟ್ಟು 103 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 417 ವಿಕೆಟ್ ಕಬಳಿಸಿದ್ದರು.
15 / 16
12- ವೀರೇಂದ್ರ ಸೆಹ್ವಾಗ್: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ಸೆಹ್ವಾಗ್ ಕೂಡ ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 23 ಶತಕಗಳೊಂದಿಗೆ ಒಟ್ಟು 8503 ರನ್ ಕಲೆಹಾಕಿದ್ದಾರೆ.
16 / 16
ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 13ನೇ ಆಟಗಾರನಾಗಿ ಚೇತೇಶ್ವರ ಪೂಜಾರ ಹೊರಹೊಮ್ಮಲ್ಲಿದ್ದಾರೆ.