IND vs AUS: ದೆಹಲಿಯಲ್ಲಾದರೂ ಕೊನೆಯಾಗುತ್ತಾ ಕೊಹ್ಲಿಯ 1181 ದಿನಗಳ ಕಾಯುವಿಕೆ..?
TV9 Web | Updated By: ಪೃಥ್ವಿಶಂಕರ
Updated on:
Feb 16, 2023 | 11:21 AM
IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಂದಿನ ಟೆಸ್ಟ್ ಪಂದ್ಯ ಕಿಂಗ್ ಕೊಹ್ಲಿಯ ತವರು ನೆಲದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷ. ಹೀಗಾಗಿ ತನ್ನ ತವರಿನಲ್ಲಾದರೂ ಕಿಂಗ್ ಕೊಹ್ಲಿ ತಮ್ಮ 1181 ದಿನಗಳ ಕಾಯುವಿಕೆಗೆ ಅಂತ್ಯ ಹಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮುಂದಿನ ನಿಲ್ದಾಣ ದೆಹಲಿ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಂದಿನ ಟೆಸ್ಟ್ ಪಂದ್ಯ ಕಿಂಗ್ ಕೊಹ್ಲಿಯ ತವರು ನೆಲದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷ. ಹೀಗಾಗಿ ತನ್ನ ತವರಿನಲ್ಲಾದರೂ ಕಿಂಗ್ ಕೊಹ್ಲಿ ತಮ್ಮ 1181 ದಿನಗಳ ಕಾಯುವಿಕೆಗೆ ಅಂತ್ಯ ಹಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
2 / 5
ವಾಸ್ತವವಾಗಿ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸುವುದರೊಂದಿಗೆ ಲಯಕ್ಕೆ ಮರಳಿರುವ ಕಿಂಗ್ ಕೊಹ್ಲಿ ಬ್ಯಾಟ್ ಅದ್ಯಾಕೋ ಟೆಸ್ಟ್ ಮಾದರಿಯಲ್ಲಿ ಮಾತ್ರ ಮೌನವಾಗಿದೆ. ಕಳೆದ 1181 ದಿನಗಳಿಂದ ಕೊಹ್ಲಿ ಬ್ಯಾಟ್ ಆಗಸ ನೋಡದಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
3 / 5
ಈ 1181 ದಿನಗಳಲ್ಲಿ, ವಿರಾಟ್ ಕೊಹ್ಲಿ 21 ಟೆಸ್ಟ್‌ಗಳಲ್ಲಿ 37 ಇನ್ನಿಂಗ್ಸ್‌ಗಳನ್ನು ಆಡಿದ್ದು, ಇದರಲ್ಲಿ ಅವರು 25.80 ರನ್ ಸರಾಸರಿ ಮತ್ತು 6 ಅರ್ಧ ಶತಕಗಳ ನೆರವಿನಿಂದ ಕೇವಲ 929 ರನ್ ಗಳಿಸಿದ್ದಾರೆ.
4 / 5
ಇನ್ನು 37 ಟೆಸ್ಟ್ ಇನ್ನಿಂಗ್ಸ್‌ಗಳಿಂದ ಶತಕ ಗಳಿಸಲು ವಿಫಲರಾದ ವಿರಾಟ್ ಕೊಹ್ಲಿ ಅವರ ಈ ಪ್ರದರ್ಶನವು ಅವರ ಒಟ್ಟಾರೆ ಟೆಸ್ಟ್ ವೃತ್ತಿಜೀವನದ ಬ್ಯಾಟಿಂಗ್ ಸರಾಸರಿಯ ಮೇಲೂ ಪರಿಣಾಮ ಬೀರಿದೆ. ಟೆಸ್ಟ್‌ನಲ್ಲಿ ವಿರಾಟ್ ಅವರ ಪ್ರಸ್ತುತ ಬ್ಯಾಟಿಂಗ್ ಸರಾಸರಿ 48.68 ಆಗಿದೆ.
5 / 5
ಹೀಗಾಗಿ ತನ್ನ ತವರು ನೆಲವಾದ ದೆಹಲಿಯಲ್ಲಿ ಕೊಹ್ಲಿ ಈ ಬರವನ್ನು ನೀಗಿಸುತ್ತಾರೆ ಎಂಬುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಪೂರಕವೆಂಬಂತೆ ಈ ಮೈದಾನದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, ದ್ವಿಶತಕ ಸಹಿತ 467 ರನ್ ಗಳಿಸಿದ್ದಾರೆ.
Published On - 11:21 am, Thu, 16 February 23