IND vs AUS: ಆಸ್ಟ್ರೇಲಿಯಾ ತಂಡದಿಂದ ಸ್ಟಾರ್ ಬೌಲರ್ ಔಟ್; ರೋಹಿತ್ ತಂಡಕ್ಕೆ ಹೆಚ್ಚಾಯ್ತು ಸಂಕಷ್ಟ!

|

Updated on: Mar 06, 2023 | 2:54 PM

IND vs AUS: ರಿಚರ್ಡ್ಸನ್ ಆಸ್ಟ್ರೇಲಿಯಾ ಪರ ಏಕದಿನ ಸರಣಿಯನ್ನು ಆಡದಿರುವುದು ಖಚಿತವಾಗಿದೆ. ಒಂದು ವೇಳೆ ಐಪಿಎಲ್ ಆಡದೇ ಇದ್ದರೆ ಮುಂಬೈ ಇಂಡಿಯನ್ಸ್ ತಂಡಕ್ಕೂ ಸಮಸ್ಯೆ ಎದುರಾಗಲಿದೆ.

1 / 5
ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ ತಂಡ, ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಕೂಡ ಆಡಲಿದೆ. ಆದರೆ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾಂಗರೂ ತಂಡಕ್ಕೆ ಬಿಗ್ ಶಾಜ್ ಎದುರಾಗಿದೆ.

2 / 5
ಕೊನೆಯ ಟೆಸ್ಟ್​ನಿಂದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೊರಬಿದ್ದಿರುವ ಬೆನ್ನಲ್ಲೇ, ಏಕದಿನ ಸರಣಿಯಿಂದ ತಂಡದ ಸ್ಟಾರ್ ಬೌಲರ್ ಝೈ ರಿಚರ್ಡ್ಸನ್ ಕೂಡ ಔಟಾಗಿದ್ದಾರೆ. ಭಾರತ ವಿರುದ್ಧದ ಏಕದಿನ ಸರಣಿಗಾಗಿ 9 ತಿಂಗಳ ನಂತರ ತಂಡಕ್ಕೆ ಮರಳಿದ್ದರು, ಆದರೆ, ಒಂದೇ ಒಂದು ಪಂದ್ಯವನ್ನಾಡದೆ ತಂಡದಿಂದ ಹೊರಬಿದ್ದಿದ್ದಾರೆ.

3 / 5
ಝೈ ರಿಚರ್ಡ್ಸನ್ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಅವರು ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಅವರ ಜಾಗದಲ್ಲಿ ನಾಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

4 / 5
ಜೂನ್ 2022 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಾಗಿ ಆಸ್ಟ್ರೇಲಿಯಾ ಪರ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದ ರಿಚರ್ಡ್ಸನ್, ಅದರ ನಂತರ ಈಗ ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೀಗ ಇಂಜುರಿಯಿಂದಾಗಿ ಏಕದಿನ ಸರಣಿಯಿಂದಲೇ ಹೊರಗುಳಿದಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್​ನಲ್ಲೂ ಆಡುವುದು ಅನುಮಾನವಾಗಿದೆ.

5 / 5
ರಿಚರ್ಡ್ಸನ್ ಆಸ್ಟ್ರೇಲಿಯಾ ಪರ ಏಕದಿನ ಸರಣಿಯನ್ನು ಆಡದಿರುವುದು ಖಚಿತವಾಗಿದೆ. ಒಂದು ವೇಳೆ ಐಪಿಎಲ್ ಆಡದೇ ಇದ್ದರೆ ಮುಂಬೈ ಇಂಡಿಯನ್ಸ್ ತಂಡಕ್ಕೂ ಸಮಸ್ಯೆ ಎದುರಾಗಲಿದೆ. ಏಕೆಂದರೆ ಮುಂಬೈ ತಂಡದಿಂದ ಈಗಾಗಲೇ, ಬುಮ್ರಾ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದು, ಈಗ ರಿಚರ್ಡ್ಸನ್ ಆಡದಿದ್ದರೆ, ಮುಂಬೈಗೆ ಭಾರಿ ಹೊಡೆತ ಬೀಳಲಿದೆ.