ರಾಹುಲ್​ಗೆ ಬಿಗ್ ಶಾಕ್; ಉಪನಾಯಕತ್ವ ಕಿತ್ತುಕೊಂಡ ಬಿಸಿಸಿಐ! ರೋಹಿತ್- ದ್ರಾವಿಡ್ ಹೇಳಿದ್ದೇನು ಗೊತ್ತಾ?

|

Updated on: Feb 20, 2023 | 9:41 AM

KL Rahul: ಇದೀಗ ಪ್ರಕಟವಾಗಿರುವ ತಂಡದಲ್ಲಿ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂಬ ಪದ ಮರೆಯಾಗಿದೆ. ಹೀಗಿರುವಾಗ ಅವರ ಪ್ರದರ್ಶನ ಸುಧಾರಿಸದಿದ್ದರೆ ಅವರನ್ನು ತಂಡದಿಂದ ಕೂಡ ಕೈಬಿಡುವುದಾಗಿ ಬಿಸಿಸಿಐ ಅವರಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

1 / 6
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ತಂಡದಲ್ಲಿ ಒಬ್ಬ ಆಟಗಾರನ ಬಗ್ಗೆ ಮಾತ್ರ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಆ ಆಟಗಾರ ಬೇರ್ಯಾರು ಅಲ್ಲ ಕನ್ನಡಿಗ ಕೆಎಲ್ ರಾಹುಲ್. ಸತತ  ವೈಫಲ್ಯಗಳಿಂದ ಬಳಲುತ್ತಿದ್ದರೂ ರಾಹುಲ್​ಗೆ ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ ಎಂದು ಕ್ರಿಕೆಟ್ ಪ್ರಿಯರು ಬಿಸಿಸಿಐ ಮೇಲೆ ಗರಂ ಆಗಿದ್ದರು. ರಾಹುಲ್ ಮೇಲೆ ವಿಶ್ವಾಸ ವ್ಯಕ್ತವಾಗುತ್ತಿದ್ದು, ಇದೀಗ ರಾಹುಲ್ ಸ್ಥಾನಕ್ಕೆ ಕುತ್ತು ಎದುರಾಗಿದ್ದು, ಬಿಸಿಸಿಐನ ಆಯ್ಕೆ ಸಮಿತಿ ಕೂಡ ಸನ್ನೆಗಳ ಮೂಲಕ ಎಚ್ಚರಿಕೆ ನೀಡಲು ಆರಂಭಿಸಿರುವಂತಿದೆ.

2 / 6
ಫೆಬ್ರವರಿ 19 ಭಾನುವಾರದಂದು ದೆಹಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಜಯಗಳಿಸಿದ ನಂತರ, ಬಿಸಿಸಿಐ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಸತತ ವೈಫಲ್ಯದ ನಡುವೆಯೂ ಕೆಎಲ್ ರಾಹುಲ್ ಅವರನ್ನು ಈ ಎರಡೂ ಪಂದ್ಯಗಳಿಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

3 / 6
ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಮತ್ತೆ ಕ್ರಿಕೆಟ್ ಪರಿಣಿತರು ಆಯ್ಕೆ ಮಂಡಳಿ ವಿರುದ್ಧ ಗರಂ ಆಗಿದ್ದಾರೆ. ಏಕೆಂದರೆ ರಾಹುಲ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಮಾತ್ರ ಗಳಿಸಿದರು. ಇದರ ನಡುವೆಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಸದ್ಯ ಅವರಿಗೆ ಕೊಂಚ ಹೆಚ್ಚಿನ ಅವಕಾಶ ನೀಡುವತ್ತ ಟೀಂ ಮ್ಯಾನೇಜ್ ಮೆಂಟ್ ಚಿತ್ತ ಹರಿಸಿದ್ದು ಬಿಸಿಸಿಐ ತಾಳ್ಮೆಯ ಕಟ್ಟೆಯೊಡೆಯುವ ಹಂತದಲ್ಲಿದೆ ಎನ್ನಿಸುತ್ತಿದೆ.

4 / 6
ಏಕೆಂದರೆ ಈ ಬಾರಿ ತಂಡವನ್ನು ಪ್ರಕಟಿಸುವುದರೊಂದಿಗೆ ಮಂಡಳಿಯು ಯಾರನ್ನೂ ಉಪನಾಯಕರನ್ನಾಗಿ ಮಾಡಿಲ್ಲ. ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸುವಾಗ ರಾಹುಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಅವರ ಹೆಸರಿನ ಮುಂದೆ ಉಪನಾಯಕ ಎಂದು ಬರೆಯಲಾಗಿತ್ತು. ಆದರೆ ಇದೀಗ ಪ್ರಕಟವಾಗಿರುವ ತಂಡದಲ್ಲಿ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂಬ ಪದ ಮರೆಯಾಗಿದೆ. ಹೀಗಿರುವಾಗ ಅವರ ಪ್ರದರ್ಶನ ಸುಧಾರಿಸದಿದ್ದರೆ ಅವರನ್ನು ತಂಡದಿಂದ ಕೂಡ ಕೈಬಿಡುವುದಾಗಿ ಬಿಸಿಸಿಐ ಅವರಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

5 / 6
ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ಸದ್ಯ ಅವರ ಮೇಲೆ ನಂಬಿಕೆ ಇಟ್ಟಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್, ಲಾರ್ಡ್ಸ್‌ನಲ್ಲಿ ಕಠಿಣ ಪಿಚ್‌ನಲ್ಲಿ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಸೆಂಚುರಿಯನ್​ ಲ್ಲೂ ಅವರು ಇದೇ ರೀತಿಯ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಅವರು ಪ್ರತಿಭಾವಂತ ಆಟಗಾರ ಆದ್ದರಿಂದ ನಾವು ಅವರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದಿದ್ದರು.

6 / 6
ರೋಹಿತ್ ಮಾತ್ರವಲ್ಲ, ಕೋಚ್ ರಾಹುಲ್ ದ್ರಾವಿಡ್ ಕೂಡ ಈ ವಿಷಯಗಳನ್ನು ಪ್ರಸ್ತಾಪಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ರಾಹುಲ್, “ಅವರು ವಿದೇಶದಲ್ಲಿ ನಮ್ಮ ಅತ್ಯಂತ ಯಶಸ್ವಿ ಆರಂಭಿಕರಲ್ಲಿ ಒಬ್ಬರು. ಅವರು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಶತಕಗಳನ್ನು ಗಳಿಸಿದರು. ಅದಕ್ಕಾಗಿಯೇ ನಾವು ಅವರನ್ನು ಬೆಂಬಲಿಸುತ್ತೇವೆ.” ಎಂದು ಕೋಚ್ ದ್ರಾವಿಡ್ ಹೇಳಿಕೊಂಡಿದ್ದಾರೆ.