- Kannada News Photo gallery Cricket photos Harmanpreet Kaur India women would eye a win against Ireland to get semifinal spot in Womens T20 World Cup
INDW vs IREW: ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ: ಐರ್ಲೆಂಡ್ ವಿರುದ್ಧ ಗೆದ್ದರಷ್ಟೇ ಸಾಲದು
ICC Womens T20 World Cup: ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಇಂದು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹರ್ಮನ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
Updated on:Feb 20, 2023 | 9:13 AM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ರೋಚಕ ಘಟ್ಟದತ್ತ ತಲುಪಿದೆ. ಒಂದು ತಂಡದ ಸೋಲು- ಗೆಲುವು ಮತ್ತೊಂದು ತಂಡದ ಅಳಿವು ಉಳಿವಿನ ಸ್ಥಿತಿ ನಿರ್ಮಾಣವಾಗಿದೆ. ಭಾರತ ಮಹಿಳಾ ತಂಡ ಕೂಡ ಈಗ ಅದೇ ಸ್ಥಿತಿಯಲ್ಲಿದೆ.

ಟೀಮ್ ಇಂಡಿಯಾ ಇಂದು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹರ್ಮನ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಸೆಮಿ ಫೈನಲ್ ಗೇರಲು ಭಾರತ ಇಂದಿನ ಮ್ಯಾಚ್ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ ಭಾರತ- ಐರ್ಲೆಂಡ್ ಪಂದ್ಯ ಎಷ್ಟು ಗಂಟೆಗೆ?, ಏನಿದೆ ಲೆಕ್ಕಚಾರ ಎಂಬುದನ್ನು ನೋಡೋಣ.

ಭಾರತ ಮಹಿಳಾ ತಂಡ ಸದ್ಯ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತು 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೆ ವೆಸ್ಟ್ ಇಂಡೀಸ್ ತನಗಿದ್ದ ಎಲ್ಲ 4 ಪಂದ್ಯಗಳಲ್ಲಿ ಆಡಿದ್ದು 4 ಪಾಯಿಂಟ್ ಸಂಪಾದಿಸಿದೆ. ಅತ್ತ ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಎರಡು ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಹೀಗಾಗಿ ಭಾರತ ಇಂದಿನ ಪಂದ್ಯ ಗೆದ್ದರೆ 6 ಅಂಕದೊಂದಿಗೆ ಸೆಮೀಸ್ಗೆ ಲಗ್ಗೆ ಇಡಲಿದೆ. ಎಲ್ಲಾದರು ಟೀಮ್ ಇಂಡಿಯಯಾ ಸೋತರೆ ಅತ್ತ ಪಾಕ್ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕಿದೆ. ಭಾರತ ಸೋತು ಪಾಕ್ ಗೆದ್ದರೆ ರನ್ರೇಟ್ ಆಧಾರದ ಮೇಲೆ ಪಾಕಿಸ್ತಾನ ಸೆಮಿ ಫೈನಲ್ಗೆ ಏರುವುದು ಬಹುತೇಕ ಖಚಿತ.

ಭಾರತ ಪರ ಸ್ಮೃತಿ ಮಂದಾನ, ಜೆಮಿಯಾ ರೋಡ್ರಿಗಸ್ ಹಾಗೂ ರಿಚಾ ಘೋಷ್ ಬಿಟ್ಟರೆ ಬ್ಯಾಟಿಂಗ್ನಲ್ಲಿ ಇತರರಿಂದ ನಿರೀಕ್ಷೆಗೆ ತಕ್ಕ ಕೊಡುಗೆ ಬರುತ್ತಿಲ್ಲ. ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ ನೆರವಾಗಬೇಕಿದೆ. ಇಂದಿನದು ಮಹತ್ವದ ಪಂದ್ಯ ಆಗಿರುವುದರಿಂದ ಇವರಿಬ್ಬರು ಮಿಂಚಲೇ ಬೇಕಾಗಿದೆ.

ಭಾರತ ಹಾಗೂ ಐರ್ಲೆಂಡ್ ನಡುವಣ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 6:30ಕ್ಕೆ ಆರಂಭವಾಗಲಿದೆ. 6 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ನೋಡಬಹುದು.

ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಾಧಾ ಯಾದವ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ.
Published On - 7:33 am, Mon, 20 February 23
