ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ತಂಡದಲ್ಲಿ ಒಬ್ಬ ಆಟಗಾರನ ಬಗ್ಗೆ ಮಾತ್ರ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಆ ಆಟಗಾರ ಬೇರ್ಯಾರು ಅಲ್ಲ ಕನ್ನಡಿಗ ಕೆಎಲ್ ರಾಹುಲ್. ಸತತ ವೈಫಲ್ಯಗಳಿಂದ ಬಳಲುತ್ತಿದ್ದರೂ ರಾಹುಲ್ಗೆ ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ ಎಂದು ಕ್ರಿಕೆಟ್ ಪ್ರಿಯರು ಬಿಸಿಸಿಐ ಮೇಲೆ ಗರಂ ಆಗಿದ್ದರು. ರಾಹುಲ್ ಮೇಲೆ ವಿಶ್ವಾಸ ವ್ಯಕ್ತವಾಗುತ್ತಿದ್ದು, ಇದೀಗ ರಾಹುಲ್ ಸ್ಥಾನಕ್ಕೆ ಕುತ್ತು ಎದುರಾಗಿದ್ದು, ಬಿಸಿಸಿಐನ ಆಯ್ಕೆ ಸಮಿತಿ ಕೂಡ ಸನ್ನೆಗಳ ಮೂಲಕ ಎಚ್ಚರಿಕೆ ನೀಡಲು ಆರಂಭಿಸಿರುವಂತಿದೆ.