ICC World Cup 2023: ಕಿಶನ್ ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಮಿಚೆಲ್ ಸ್ಟಾರ್ಕ್..!
Mitchell Starc: ಇದುವರೆಗೆ ಏಕದಿನ ವಿಶ್ವಕಪ್ನಲ್ಲಿ 19 ಪಂದ್ಯಗಳನ್ನಾಡಿರುವ ಸ್ಟಾರ್ಕ್, ವಿಕೆಟ್ಗಳ ಅರ್ಧಶತಕ ಪೂರೈಸಿದ್ದಾರೆ. ಇದರೊಂದಿಗೆ ಈ ಹಿಂದೆ 26 ಪಂದ್ಯಗಳಲ್ಲಿ 50 ವಿಕೆಟ್ ಉರುಳಿಸಿದ್ದ ಶ್ರೀಲಂಕಾದ ಬೌಲಿಂಗ್ ದಂತಕಥೆ ಲಸಿತ್ ಮಾಲಿಂಗ ದಾಖಲೆಯನ್ನು ಸ್ಟಾರ್ಕ್ ಮುರಿದಿದ್ದಾರೆ.
1 / 9
ಭಾರತ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ವೇಗದ ಬೌಲರ್ ಎಂಬ ದಾಖಲೆ ಸೃಷ್ಟಿಸಿದ್ದಾರೆ.
2 / 9
ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ರ ವಿಕೆಟ್ ಉರುಳಿಸಿದ ಸ್ಟಾರ್ಕ್, 50 ವಿಕೆಟ್ಗಳ ಮೈಲಿಗಲ್ಲನ್ನು ಪೂರೈಸಿದ್ದಾರೆ.
3 / 9
ಇದುವರೆಗೆ ಏಕದಿನ ವಿಶ್ವಕಪ್ನಲ್ಲಿ 19 ಪಂದ್ಯಗಳನ್ನಾಡಿರುವ ಸ್ಟಾರ್ಕ್, ವಿಕೆಟ್ಗಳ ಅರ್ಧಶತಕ ಪೂರೈಸಿದ್ದಾರೆ. ಇದರೊಂದಿಗೆ ಈ ಹಿಂದೆ 26 ಪಂದ್ಯಗಳಲ್ಲಿ 50 ವಿಕೆಟ್ ಉರುಳಿಸಿದ್ದ ಶ್ರೀಲಂಕಾದ ಬೌಲಿಂಗ್ ದಂತಕಥೆ ಲಸಿತ್ ಮಾಲಿಂಗ ದಾಖಲೆಯನ್ನು ಸ್ಟಾರ್ಕ್ ಮುರಿದಿದ್ದಾರೆ.
4 / 9
ಒಟ್ಟಾರೆಯಾಗಿ ಸ್ಟಾರ್ಕ್ ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್‌ಗಳನ್ನು ಪಡೆದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ.
5 / 9
ಸ್ಟಾರ್ಕ್ ಜೊತೆಗೆ ಮಲಿಂಗ (56), ವಾಸಿಂ ಅಕ್ರಮ್ (55), ಮುತ್ತಯ್ಯ ಮುರಳೀಧರನ್ (68), ಮತ್ತು ಗ್ಲೆನ್ ಮೆಕ್‌ಗ್ರಾತ್ (71) ಈ ಸಾಧನೆ ಮಾಡಿದ್ದಾರೆ.
6 / 9
ಈ ಹಿಂದೆ 2019 ರ ವಿಶ್ವಕಪ್ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 27 ವಿಕೆಟ್ ಉರುಳಿಸಿದ್ದ ಸ್ಟಾರ್ಕ್, ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು 26 ವಿಕೆಟ್ ಉರುಳಿಸಿದ್ದ ಮೆಕ್‌ಗ್ರಾತ್ ಅವರ ದಾಖಲೆಯನ್ನು ಮುರಿದಿದ್ದರು.
7 / 9
ಇದರೊಂದಿಗೆ ಕಳೆದ ವರ್ಷ ಸ್ಟಾರ್ಕ್, ಕೇವಲ 102 ಪಂದ್ಯಗಳಲ್ಲಿ 200 ಏಕದಿನ ಪಂದ್ಯಗಳನ್ನು ವಿಕೆಟ್‌ಗಳನ್ನು ಗಳಿಸುವ ಮೂಲಕ ವೇಗವಾಗಿ 200 ವಿಕೆಟ್‌ಗಳನ್ನು ಪೂರೈಸಿದರು.
8 / 9
ಸ್ಟಾರ್ಕ್ ಈಗ ಈ ಸ್ವರೂಪದಲ್ಲಿ 112 ಪಂದ್ಯಗಳಿಂದ 22-ಪ್ಲಸ್ ಸರಾಸರಿಯಲ್ಲಿ 221 ವಿಕೆಟ್‌ಗಳನ್ನು ಸಿಡಿಸಿದ್ದಾರೆ. ಮಿಚೆಲ್ ಜಾನ್ಸನ್ (239), ವಾರ್ನ್ (291), ಬ್ರೆಟ್ ಲೀ (380), ಮತ್ತು ಮೆಕ್‌ಗ್ರಾತ್ (380) ನಂತರ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡಿದ್ದಾರೆ.
9 / 9
ಇದಲ್ಲದೆ ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್ ಪಡೆದ 2ನೇ ಎಡಗೈ ವೇಗಿ ಎನಿಸಿಕೊಂಡಿದ್ದಾರೆ. ಈ ಮೂಲಕ 50 ವಿಕೆಟ್ಗಳ ಸಾಧನೆ ಮಾಡಿದ ಎಡಗೈ ವೇಗಿಗಳ ಪೈಕಿ ಲೆಜೆಂಡರಿ ಅಕ್ರಂ ಅವರ ಪಟ್ಟಿಯನ್ನು ಸ್ಟಾರ್ಕ್ ಸೇರಿಕೊಂಡಿದ್ದಾರೆ.