IND vs AUS 3rd ODI: ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ
India vs Australia 3rd ODI: 2019ರ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ಸೋತ ಮೊದಲ ಒಡಿಐ ಸರಣಿ ಇದಾಯಿತು. ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಪಟ್ಟವನ್ನು ಕಳೆದುಕೊಂಡಿದೆ.
1 / 8
ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ಆಸೀಸ್ ಭರ್ಜರಿ ಪ್ರದರ್ಶನ ತೋರಿ 21 ರನ್ಗಳ ಜಯ ದಾಖಲಿಸಿ 2-1 ಅಂತರದಿಂದ ಸರಣಿ ತನ್ನದಾಗಿಸಿತು.
2 / 8
ಈ ಮೂಲಕ ಭಾರತ ಪ್ರವಾಸ ಬೆಳೆಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಹಿಂತಿರುಗಿದೆ. ಜೊತೆಗೆ ಬಾರ್ಡರ್- ಗವಾಸ್ಕರ್ ಟ್ರೋಫಿ ಕಳೆದುಕೊಂಡಿದ್ದಕ್ಕೆ ಸೇಡುಕೂಡ ತೀರಿಸಿಕೊಂಡಿದೆ.
3 / 8
2019ರ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ಸೋತ ಮೊದಲ ಒಡಿಐ ಸರಣಿ ಇದಾಯಿತು. ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಪಟ್ಟವನ್ನು ಕಳೆದುಕೊಂಡಿದೆ.
4 / 8
ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ಆಸ್ಟ್ರೇಲಿಯಾ ಪರ ಆರಂಭಿಕರು 68 ರನ್ನ ಜೊತೆಯಾಟ ಬಿಟ್ಟರೆ ಮತ್ತಾವ ಜೋಡಿ ಬೃಹತ್ ರನ್ ಕಲೆ ಹಾಕಲಿಲ್ಲ. ಎಲ್ಲ ಆಟಗಾರರು 20 ಮತ್ತು 30 ರನ್ ಗಳಿಕೆಗೆ ವಿಕೆಟ್ ಒಪ್ಪಿಸಿದರು. ಟ್ರಾವಿಸ್ ಹೆಡ್ 33 ರನ್ ಗಳಿಸಿದರೆ ಸ್ಟೀವ್ ಸ್ಮಿತ್ ಶೂನ್ಯಕ್ಕೆ ವಿಕೆಟ್ ನೀಡಿದರು.
5 / 8
47 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ 3 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ವಾರ್ನರ್ ಆಟ 23ಕ್ಕೆ ಅಂತ್ಯವಾಯಿತು. ಲಾಬುಶೇನ್ 28, ಅಲೆಕ್ಸ್ ಕ್ಯಾರಿ 38 ರನ್ ಗಳಿಸಿದರು. ಅಂತಿಮವಾಗಿ ಆಸೀಸ್ 49 ಓವರ್ಗಳಲ್ಲಿ 269 ರನ್ಗೆ ಆಲೌಟ್ ಆಯಿತು.
6 / 8
ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಿತ್ತು ಮಿಂಚಿದರೆ ಮೊಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.
7 / 8
ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ನಾಯಕ ರೋಹಿತ್ ಶರ್ಮಾ (30) ಮತ್ತು ಶುಭ್ಮನ್ ಗಿಲ್ (37) ಮೊದಲ ವಿಕೆಟ್ಗೆ 65 ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. ನಂತರಲ್ಲಿ ವಿರಾಟ್ ಕೊಹ್ಲಿ (54) ಮತ್ತು ಕೆಎಲ್ ರಾಹುಲ್ (32), ಹಾರ್ದಿಕ್ ಪಾಂಡ್ಯ (40) ಅಲ್ಪ ಮೊತ್ತದ ಕಾಣಿಕೆ ನೀಡಿದರೂ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ.
8 / 8
ಟೀಮ್ ಇಂಡಿಯಾ 49.1 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತು. ಆಸ್ಟ್ರೇಲಿಯಾ ಪರ ಆ್ಯಡಂ ಝಂಪಾ 4 ವಿಕೆಟ್ ಪಡೆದರು. 21 ರನ್ಗಳ ಗೆಲುವಿನೊಂದಿಗೆ ಕಾಂಗರೂ ಪಡೆ ಸರಣಿ ವಶಪಡಿಸಿಕೊಂಡಿತು.