AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ಐಪಿಎಲ್​ನಲ್ಲಿ ಈ ಐದು ಬೌಲರ್​ಗಳು ಮಾಡಿರುವ ದಾಖಲೆಯನ್ನು ಮುರಿಯುವುದು ಕಷ್ಟಕಷ್ಟ!

IPL: ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಕೆಲವು ಬೌಲರ್​ಗಳು ಐಪಿಎಲ್​ನಲ್ಲಿ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.

ಪೃಥ್ವಿಶಂಕರ
|

Updated on:Mar 23, 2023 | 1:18 PM

Share
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಲ್ಲಿ ಸಾಮಾನ್ಯವಾಗಿ ಬ್ಯಾಟರ್​ಗಳ ಅಬ್ಬರದ ಸದ್ದೇ ಹೆಚ್ಚಾಗಿ ಕೇಳಿ ಬರುತ್ತದೆ. ಕೆಲವೊಮ್ಮೆ ಮಾತ್ರ ಬೌಲರ್​ಗಳು ಮಿಂಚುವ ಅವಕಾಶ ಸಿಗುತ್ತದೆ. ಹೀಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಕೆಲವು ಬೌಲರ್​ಗಳು ಐಪಿಎಲ್​ನಲ್ಲಿ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.

1 / 6
ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಬ್ರಾವೋ ಕೂಡ ಒಬ್ಬರು. ಐಪಿಎಲ್‌ನಲ್ಲಿ 181 ವಿಕೆಟ್‌ಗಳನ್ನು ಕಬಳಿಸಿರುವ ಬ್ರಾವೋ, ಈ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದಿರುವ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇವರ ನಂತರ 170 ವಿಕೆಟ್ ಪಡೆದಿರುವ ಲಸಿತ್ ಮಾಲಿಂಗ ಎರಡನೇ ಸ್ಥಾನದಲ್ಲಿದ್ದಾರೆ. ಅಮಿತ್ ಮಿಶ್ರಾ 166 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

2 / 6
ಐಪಿಎಲ್​ನ ಮತ್ತೊಬ್ಬ ಯಶಸ್ವಿ ಬೌಲರ್ ಎಂದರೆ ಅದು ರಶೀದ್ ಖಾನ್, ತನ್ನ ಗೂಗ್ಲಿಯಿಂದ ಎದುರಾಳಿ ಬ್ಯಾಟರ್​ಗೆ ಚಳ್ಳೇ ಹಣ್ಣು ತಿನಿಸುವ ರಶೀದ್, ರನ್ ಬಿಟ್ಟುಕೊಡುವುದರಲ್ಲಿ ಭಾರಿ ಕಂಜೂಸ್. ಹೀಗಾಗಿ ಐಪಿಎಲ್​ನಲ್ಲಿ ಅತಿ ಕಡಿಮೆ ಎಕಾನಮಿ ಹೊಂದಿರುವ ಲೆಗ್-ಸ್ಪಿನ್ನರ್ ರಶೀದ್ ಪ್ರತಿ ಓವರ್‌ಗೆ 6.35ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಈ ಎಕಾನಮಿಯೊಂದಿಗೆ 100 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಹೊಂದಿರುವ ಮೊದಲ ಬೌಲರ್ ರಶೀದ್.

3 / 6
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್​ಗಳ ಪೈಕಿ ಭುವನೇಶ್ವರ್ ಕುಮಾರ್​ಗೆ ಮೊದಲ ಸ್ಥಾನವಿದೆ. ಭುವಿ ಇದುವರೆಗೆ 1400 ಎಸೆತಗಳನ್ನು ಡಾಟ್ ಬಾಲ್ ಎಸೆದಿರುವ ದಾಖಲೆ ಬರೆದಿದ್ದಾರೆ. ಇವರ ನಂತರ1357 ಡಾಟ್ ಬಾಲ್‌ಗಳನ್ನು ಎಸೆದಿರುವ ರವಿಚಂದ್ರನ್ ಅಶ್ವಿನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.  ಸುನಿಲ್ ನರೈನ್ 1346 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

4 / 6
ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪೈಕಿ ಆರ್​ಸಿಬಿಯ ಹರ್ಷಲ್ ಪಟೇಲ್ ಮತ್ತು ಸಿಎಸ್​ಕೆ ತಂಡದ ಮಾಜಿ ಆಟಗಾರ ಬ್ರಾವೋ ಮೊದಲ ಸ್ಥಾನದಲ್ಲಿದ್ದಾರೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಹರ್ಷಲ್ ಪಟೇಲ್ 2021ರ ಸೀಸನ್​ನಲ್ಲಿ ಅತ್ಯಧಿಕ 32 ವಿಕೆಟ್ಗಳನ್ನು ಪಡೆದಿದ್ದಾರೆ. ಹರ್ಷಲ್ 15 ಪಂದ್ಯಗಳನ್ನು ಆಡಿ ಈ ಸಾಧನೆ ಮಾಡಿದ್ದರೆ, ಡ್ವೇನ್ ಬ್ರಾವೋ 18 ಪಂದ್ಯಗಳಲ್ಲಿ 32 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.

5 / 6
ಒಂದು ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್​ಗಳ ಪೈಕಿ ಅಲ್ಜಾರಿ ಜೋಸೆಫ್ ಮೊದಲ ಸ್ಥಾನ ಪಡೆದಿದ್ದಾರೆ. ಜೋಸೆಫ್ ಒಂದು ಪಂದ್ಯದಲ್ಲಿ 12 ರನ್ ನೀಡಿ 6 ವಿಕೆಟ್ ಪಡೆದಿರುವುದು ಇದುವರೆಗಿನ ದಾಖಲೆಯಾಗಿದೆ. ಇವರಲ್ಲದೇ ಸೋಹಿಲ್ ತನ್ವೀರ್ ಮತ್ತು ಆಡಮ್ ಝಂಪಾ ಕೂಡ ಒಂದು ಪಂದ್ಯದಲ್ಲಿ ತಲಾ 6 ವಿಕೆಟ್ ಪಡೆದಿದ್ದಾರೆ. ತನ್ವೀರ್ 14 ರನ್ ಮತ್ತು ಝಂಪಾ 19 ರನ್ ನೀಡಿ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

6 / 6

Published On - 1:18 pm, Thu, 23 March 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ