IND vs AUS: ‘ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಹೀನಾಯ ಸೋಲು’; ಈಗಿನಿಂದಲೇ ಮೈಂಡ್ ಗೇಮ್ ಶುರು ಮಾಡಿದ ಆಸೀಸ್ ಪ್ಲೇಯರ್ಸ್
IND vs AUS, Border-Gavaskar Trophy 2024-25: ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವಿಜೇತರ ಬಗ್ಗೆ ಭವಿಷ್ಯ ನುಡಿದಿರುವ ರಿಕಿ ಪಾಂಟಿಂಗ್, ‘ಇದು ಸ್ಪರ್ಧಾತ್ಮಕ ಸರಣಿಯಾಗಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಸೋತಿರುವ ಕಾರಣ ಈ ಬಾರಿ ತನ್ನ ತವರಿನಲ್ಲಿ ಆಸ್ಟ್ರೇಲಿಯಾ ತಂಡ, ಟೀಂ ಇಂಡಿಯಾವನ್ನು 3-1 ಅಂತರದಿಂದ ಸೋಲಿಸಲಿದೆ ಎಂದಿದ್ದಾರೆ.
1 / 8
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಯಾವುದೇ ಸರಣಿ ಆರಂಭಕ್ಕೂ ಮುನ್ನ ಆಸೀಸ್ ಆಟಗಾರರ ಅಥವಾ ಮಾಜಿ ಆಟಗಾರರ ಅತಿರೇಕದ ಹೇಳಿಕೆಗಳು ಕೇಳಿಬರುವುದು ಸರ್ವೆ ಸಾಮಾನ್ಯ. ಅದರಂತೆ ಇದೇ ನವೆಂಬರ್ನಿಂದ ಆರಂಭವಾಗಿರುವ ಉಭಯ ತಂಡಗಳ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್ ಆಟಗಾರರು ತಮ್ಮ ಮೈಂಡ್ ಗೇಮ್ ಶುರು ಮಾಡಿದ್ದಾರೆ.
2 / 8
ಮೊದಲೇ ನಿರ್ಧಾರವಾಗಿರುವಂತೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ನವೆಂಬರ್ ಮತ್ತು ಜನವರಿ ನಡುವೆ ನಡೆಯಲಿರುವ ಈ ಟೆಸ್ಟ್ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲ್ಲಿವೆ. ಇಲ್ಲಿಯವರೆಗೆ, ಉಭಯ ದೇಶಗಳ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಎರಡೂ ದೇಶಗಳು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ.
3 / 8
ಈ ಹಿಂದೆ ನಡೆದ ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. ಭಾರತದಲ್ಲೇ ಸತತ ಎರಡು ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿರುವ ಟೀಂ ಇಂಡಿಯಾ 2023 ರಲ್ಲಿ, ಕಾಂಗರೂಗಳ ನಾಡಲೇ ಆಸ್ಟ್ರೇಲಿಯಾ ತಂಡವನ್ನು 4-1 ರಿಂದ ಸೋಲಿಸಿತ್ತು.
4 / 8
ಆದಾಗ್ಯೂ, ಕಳೆದ ಜೂನ್‌ನಲ್ಲಿ ಅಂದರೆ 2023 ರಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತು ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟವನ್ನು ಕಳೆದುಕೊಂಡಿತು. ಹೀಗಾಗಿ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಸರಣಿಯ ಬಗ್ಗೆ ಭವಿಷ್ಯ ನುಡಿದಿದ್ದು, ಟೀಂ ಇಂಡಿಯಾಕ್ಕೆ ಸವಾಲೆಸೆದಿದ್ದಾರೆ.
5 / 8
ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವಿಜೇತರ ಬಗ್ಗೆ ಭವಿಷ್ಯ ನುಡಿದಿರುವ ರಿಕಿ ಪಾಂಟಿಂಗ್, ‘ಇದು ಸ್ಪರ್ಧಾತ್ಮಕ ಸರಣಿಯಾಗಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಸೋತಿರುವ ಕಾರಣ ಈ ಬಾರಿ ತನ್ನ ತವರಿನಲ್ಲಿ ಆಸ್ಟ್ರೇಲಿಯಾ ತಂಡ, ಟೀಂ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.
6 / 8
ಹೀಗಾಗಿ ಈ ಸರಣಿಯನ್ನು ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸರಣಿಯನ್ನು ಆಸ್ಟ್ರೇಲಿಯಾ ವೈಟ್ ವಾಶ್ ಮಾಡಲಿದೆ ಎಂದು ನಾನು ಹೇಳುವುದಿಲ್ಲ. ಏಕೆಂದರೆ ಕೆಟ್ಟ ಹವಮಾನದಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಾನು ಆಸ್ಟ್ರೇಲಿಯಾ ಈ ಸರಣಿಯಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲಿದ್ದು, ಟೀಂ ಇಂಡಿಯಾ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.
7 / 8
ರಿಕಿ ಪಾಂಟಿಂಗ್ ಅವರ ಈ ಹೇಳಿಕೆ ಹಲವು ಅನುಭವಿಗಳಲ್ಲಿ ಅಚ್ಚರಿ ಮೂಡಿಸಿದೆ. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ನಾಲ್ಕು ಟೆಸ್ಟ್ ಸರಣಿಗಳನ್ನು ಭಾರತ ಗೆದ್ದಿದೆ. ಇದಲ್ಲದೆ ಕಳೆದ 10 ಸರಣಿಗಳಲ್ಲಿ ಭಾರತ ಏಳು ಸರಣಿಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ ಆಸ್ಟ್ರೇಲಿಯಾ ಏಕಪಕ್ಷೀಯವಾಗಿ ಈ ಟೆಸ್ಟ್ ಸರಣಿ ಗೆಲ್ಲಲಿದೆ ಎಂಬ ಪಾಂಟಿಂಗ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
8 / 8
ಇನ್ನು ಈ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಐದು ಟೆಸ್ಟ್‌ಗಳನ್ನು ಆಡಲಾಗುವುದು. ಈ ಸರಣಿಯು ನವೆಂಬರ್ 22, 2024 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯವು 2024 ರ ಜನವರಿ 03 ರಿಂದ ಜನವರಿ 07 ರ ನಡುವೆ ನಡೆಯಲಿದೆ. ಈ ಸರಣಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಕೂಡ ಸೇರಿದೆ.