Suryakumar Yadav: ಟಿ20 ಕ್ರಿಕೆಟ್ನಲ್ಲಿ ವಿಶಿಷ್ಠ ದಾಖಲೆ ಬರೆದ ಸಿಕ್ಸರ್ ಕಿಂಗ್ ಸೂರ್ಯ
Suryakumar Yadav: ಈ ಪಂದ್ಯದಲ್ಲಿ 209 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಸೂರ್ಯಕುಮಾರ್ ತಮ್ಮ ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ನಾಲ್ಕು ಅದ್ಭುತ ಸಿಕ್ಸರ್‌ಗಳನ್ನು ಹೊಡೆದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಕೂಡ ಬರೆದರು.
1 / 10
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ತಮ್ಮ ಬ್ಯಾಟ್‌ನಿಂದ ಮ್ಯಾಜಿಕ್ ಮಾಡಿದ ಸೂರ್ಯ 42 ಎಸೆತಗಳಲ್ಲಿ 190 ಸ್ಟ್ರೈಕ್ ರೇಟ್‌ನೊಂದಿಗೆ 80 ರನ್‌ಗಳ ಅದ್ಭುತ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು.
2 / 10
ಈ ಪಂದ್ಯದಲ್ಲಿ 209 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಸೂರ್ಯಕುಮಾರ್ ತಮ್ಮ ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ನಾಲ್ಕು ಅದ್ಭುತ ಸಿಕ್ಸರ್‌ಗಳನ್ನು ಹೊಡೆದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಕೂಡ ಬರೆದರು.
3 / 10
ಈ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ 100 ಸಿಕ್ಸರ್‌ಗಳನ್ನು ಪೂರೈಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಸೂರ್ಯಗೂ ಮೊದಲು, ಕೇವಲ ಮೂರು ಆಟಗಾರರು ಈ ಸಾಧನೆ ಮಾಡಿದ್ದರು.
4 / 10
ಇದರಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಅವರು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು 107 ಇನ್ನಿಂಗ್ಸ್‌ಗಳಲ್ಲಿ 120 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
5 / 10
ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 98 ಇನ್ನಿಂಗ್ಸ್‌ಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ 106 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
6 / 10
ಮೂರನೇ ಸ್ಥಾನದಲ್ಲಿರುವ ಡೇವಿಡ್ ಮಿಲ್ಲರ್ 98 ಇನ್ನಿಂಗ್ಸ್‌ಗಳಲ್ಲಿ 105 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
7 / 10
ಇದೀಗ ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಹೆಸರು ನಾಲ್ಕನೇ ಸ್ಥಾನಕ್ಕೆ ಬಂದಿದ್ದು, ಟಿ20 ಅಂತರಾಷ್ಟ್ರೀಯ ಮಾದರಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವಾಗ 47 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ.
8 / 10
ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು, ಇದರಲ್ಲಿ 33.75 ಸರಾಸರಿಯಲ್ಲಿ 135 ರನ್ ಬಾರಿಸಿದ್ದಾರೆ. ಇದರಲ್ಲಿ ಎಂಟು ಸಿಕ್ಸರ್‌ಗಳು ಸಹ ಸೇರಿವೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೂರ್ಯ ಇದುವರೆಗೆ 16 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
9 / 10
ಇದಲ್ಲದೆ ಈ ಪಂದ್ಯದಲ್ಲಿ 80 ರನ್‌ಗಳ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಭಾರತದ ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆಯನ್ನೂ ಮಾಡಿದರು.
10 / 10
ಸೂರ್ಯಗೂ ಮೊದಲು, ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಯಕನಾಗಿ 62 ರನ್ ಗಳಿಸಿದ್ದ ಕೆಎಲ್ ರಾಹುಲ್ ಹೆಸರಿನಲ್ಲಿ ಈ ದಾಖಲೆ ಇತ್ತು. ಇಲ್ಲಿಯವರೆಗೆ, ಭಾರತ ತಂಡದ ಪರವಾಗಿ, ಈ ಇಬ್ಬರು ಆಟಗಾರರು ಮಾತ್ರ ತಮ್ಮ ಚೊಚ್ಚಲ ಪಂದ್ಯದ ಟಿ20 ನಲ್ಲಿ ಅರ್ಧಶತಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.