ಛೇ ಇದೆಂತಾ ನೀಚತನ… ವಿರಾಟ್ ಕೊಹ್ಲಿ ತಂದೆ ವಿಷಯದಲ್ಲಿ ಕ್ಷುದ್ರತೆ ಮೆರೆದ ಆಸ್ಟ್ರೇಲಿಯಾ ಪತ್ರಿಕೆ..!
India vs Australia: ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ಸ್ಟಾಸ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕೊಹ್ಲಿ ಆಸ್ಟ್ರೇಲಿಯಾ ಆಟಗಾರನ ಮೇಲೆ ಭುಜಬಲ ಪ್ರಯೋಗಿಸಿರುವುದು. ಈ ಘಟನೆಯ ಬಳಿಕ ಕೊನ್ಸ್ಟಾಸ್ ಇಂತಹ ಘಟನೆಗಳು ಮೈದಾನದಲ್ಲಿ ಸಹಜ ಎಂದಿದ್ದರು.
1 / 5
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ದಿನ... ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಬ್ಯಾಟಿಂಗ್ನೊಂದಿಗೆ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದ್ದರು. ಇದರ ನಡುವೆ ವಿರಾಟ್ ಕೊಹ್ಲಿ, ಸ್ಯಾಮ್ ಕೊನ್ಸ್ಟಾಸ್ ಅವರನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದರು.
2 / 5
ಆದರೆ ಅದು ತುಸು ಎಲ್ಲೆ ಮೀರಿ ಹೋಯಿತು... ಕೆಣಕುವ ಪ್ರಯತ್ನದಲ್ಲಿ ವಿರಾಟ್ ಕೊಹ್ಲಿ, ಕೊನ್ಸ್ಟಾಸ್ ಅವರನ್ನು ಭುಜದಿಂದ ಗುದ್ದಿದರು. ಮೊದಲ ದಿನದಾಟದಲ್ಲಿ ಇದುವೇ ದೊಡ್ಡ ಸುದ್ದಿಯಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿದರು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಯಿತು. ಅಲ್ಲಿಗೆ ಇದು ಮುಗಿಯಿತು.
3 / 5
ಆದರೆ ಆಸ್ಟ್ರೇಲಿಯಾ ಮಾಧ್ಯಮಗಳು ಮಾತ್ರ ಇದನ್ನು ಅಲ್ಲಿಗೆ ಮುಗಿಸಿರಲಿಲ್ಲ. 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯು ಕೊಹ್ಲಿಯನ್ನು ಕೋಡಂಗಿ (ಜೋಕರ್) ಎಂಬ ಶೀರ್ಷಿಕೆಯೊಂದಿಗೆ ಟೀಕಿಸಿತು. ಅಲ್ಲದೆ ತನ್ನ ಸ್ಪೋರ್ಟ್ಸ್ ಎಡಿಷನ್ನಲ್ಲಿ ಕೊಹ್ಲಿಯನ್ನು ಜೋಕರ್ ರೀತಿಯಲ್ಲಿ ಚಿತ್ರಿಸಿದರು.
4 / 5
ಇಷ್ಟಕ್ಕೆ ನಿಲ್ಲಿಸಲಿಲ್ಲ. ಭಾನುವಾರದ ಎಡಿಷನ್ಗಾಗಿ ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಯು ನೀಡಿದ ಶೀರ್ಷಿಕೆಯು ಎಲ್ಲಾ ಎಲ್ಲೆಯನ್ನು ಮೀರಿದಂತಿದೆ. ಸ್ಪೋರ್ಟ್ ಮುಖಪುಟದಲ್ಲಿ ಸ್ಯಾಮ್ ಕೊನ್ಸ್ಟಾಸ್ ಅವರ ಚಿತ್ರ ಹಂಚಿಕೊಂಡಿರುವ ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯು ಆ ಫೋಟೋಗೆ ವಿರಾಟ್, ನಾನು ನಿಮ್ಮ ತಂದೆ ಎಂಬ ಶೀರ್ಷಿಕೆ ನೀಡಿದೆ.
5 / 5
ಇದೀಗ ಆಸ್ಟ್ರೇಲಿಯಾ ಪತ್ರಿಕೆಯ ಈ ಹದ್ದು ಮೀರಿದ ವರ್ತನೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ದಿವಂಗತರಾಗಿರುವ ವಿರಾಟ್ ಕೊಹ್ಲಿಯ ತಂದೆಯನ್ನು ಈ ವಿಚಾರದಲ್ಲಿ ಎಳೆದು ತರುವ ಮೂಲಕ ತನ್ನ ನೀಚಬುದ್ದಿಯನ್ನು ತೋರಿಸಿದೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ದಿ ವೆಸ್ಟ್ ಆಸ್ಟ್ರೇಲಿಯನ್ ಏನು ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.